ರಾತ್ರಿ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಪ್ರಯಾಣ ದರ ಹೆಚ್ಚಳ ಸದ್ಯಕ್ಕಿಲ್ಲ: ಸಚಿವ ಸವದಿ

Public TV
1 Min Read

ಹುಬ್ಬಳ್ಳಿ: ಲಾಕ್‍ಡೌನ್ ಸಂದರ್ಭದಲ್ಲಿ ಪ್ರಯಾಣಿಕರ ಲಭ್ಯತೆ ಮೇಲೆ ರಾತ್ರಿ ಬಸ್ ಓಡಿಸಲು ನಿರ್ಧಾರ ಕೈಗೊಳ್ಳಲಾಗಿದೆ. ದೂರದ ಜಿಲ್ಲೆಗಳಿಗೆ ರಾತ್ರಿ ಬಸ್ ಸಂಚಾರ ಆರಂಭವಾಗಿದ್ದು, ಸದ್ಯಕ್ಕೆ ಬಸ್ ದರ ಹೆಚ್ಚಳ ಮಾಡುವ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಸಿದರು.

ನಗರದಲ್ಲಿ ಇಂದು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‍ಡೌನ್‍ನಿಂದಾಗಿ ಇಲ್ಲಿಯವರೆಗೆ 1,800 ಕೋಟಿ ರೂ. ಹಾನಿಯಾಗಿದೆ. ನಾಲ್ಕು ನಿಗಮದಿಂದ 1.30 ಲಕ್ಷ ಸಿಬ್ಬಂದಿ ಬಳಗ ಇದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ನಂತರ ಅವರಿಗೆ ವೇತನ ಬಿಡುಗಡೆ ಮಾಡಿದೆ. ಮೇ ತಿಂಗಳ ವೇತನದಲ್ಲಿ ಅರ್ಧ ಸಂಬಳವನ್ನು ಸರ್ಕಾರ ನೀಡಲು ಮುಂದಾಗಿದೆ. ಇನ್ನೂ ಸ್ವಲ್ಪ ಹಣವನ್ನು ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ವಾಯುವ್ಯ ಸಾರಿಗೆ ನಿಗಮಕ್ಕೆ 414 ಕೋಟಿ ರೂ. ಹಾನಿಯಾಗಿದೆ. ಪ್ರಸ್ತುತ ಪ್ರತಿ ತಿಂಗಳು 90 ಕೋಟಿ ರೂ. ನಷ್ಟದಲ್ಲಿ ನಮ್ಮ ಸಂಸ್ಥೆ ಇದೆ. ವೆಚ್ಚವನ್ನು ಕಡಿಮೆ ಮಾಡಿ, ಹಾನಿಯನ್ನು ಕಡಿಮೆ ಮಾಡಲು ಮೂರು ತಿಂಗಳ ನೀಲಿ ನಕ್ಷೆಯನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಟಿಕೆಟ್ ದರ ಹೆಚ್ಚಿಸದಿರುವುದೇ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ ಎಂದರು.

ಸಾರಿಗೆ ಸಂಸ್ಥೆಯಲ್ಲಿನ ಭ್ರಷ್ಟಾಚಾರ ವಿಚಾರವಾಗಿ ಮಾತನಾಡಿದ ಅವರು, ನಾಲ್ಕು ನಿಗಮದಲ್ಲಿ ಸೋರಿಕೆ ತಡೆಯಲು ಭ್ರಷ್ಟಾಚಾರ ನಿಲ್ಲಿಸಬೇಕಿದೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *