ಬೆಂಗಳೂರು: ರಾಜ್ಯದಲ್ಲಿಂದು 2,576 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 93 ಮಂದಿ ಸಾವನ್ನಪ್ಪಿದ್ದಾರೆ. ಇಂದು 5,933 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಸದ್ಯ ರಾಜ್ಯದಲ್ಲಿ 97,592 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ರಾಜ್ಯದಲ್ಲಿ 34,836 ಮಂದಿ ಕೊರೊನಾಗೆ ಬಲಿಯಾಗಿದ್ದು, ಪ್ರಕರಣಗಳ ಸಂಖ್ಯೆ 2837206ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೋವಿಡ್-19 ಸೋಂಕು ಖಚಿತ ಶೇಕಡಾವಾರು ಪ್ರಮಾಣ ಶೇ. 1.92 ಮತ್ತು ಮರಣ ಪ್ರಮಾಣ ಶೇ.2.61 ರಷ್ಟು ದಾಖಲಾಗಿದೆ. ಇವತ್ತು ರಾಜ್ಯದಲ್ಲಿ ಒಟ್ಟು 133917 ಸ್ಯಾಂಪಲ್ (ಆರ್ ಟಿ ಪಿಸಿಆರ್ 107050 + ರಾಪಿಡ್ ಆಂಟಿಜನ್) 16867 ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಇತ್ತ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, ಇಂದು 563 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇಂದು 18 ಮಂದಿ ಸಾವನ್ನಪ್ಪಿದ್ದು, ಸದ್ಯ ಸಿಲಿಕಾನ್ ಸಿಟಿಯಲ್ಲಿ 1688 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಇದುವರೆಗೂ ಮಹಾಮಾರಿ 15599 ಜನರನ್ನು ಬಲಿ ಪಡೆದುಕೊಂಡಿದೆ. ಇದನ್ನೂ ಓದಿ: ಸರ್ಕಾರಿ ಬಸ್ಸಿನಲ್ಲೇ ಕೋವಿಡ್ ನಿಯಮ ಉಲ್ಲಂಘನೆ- ನೇತಾಡಿಕೊಂಡು ಹೋದ ಜನ
ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?:
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 8 , ಬಳ್ಳಾರಿ 19, ಬೆಳಗಾವಿ 68, ಬೆಂಗಳೂರು ಗ್ರಾಮಾಂತರ 55, ಬೆಂಗಳೂರು ನಗರ 563, ಬೀದರ್ 3, ಚಾಮರಾಜನಗರ 55, ಚಿಕ್ಕಬಳ್ಳಾಪುರ 27, ಚಿಕ್ಕಮಗಳೂರು 83, ಚಿತ್ರದುರ್ಗ 45, ದಕ್ಷಿಣ ಕನ್ನಡ 263, ದಾವಣಗೆರೆ 81, ಧಾರವಾಡ 28, ಗದಗ 17, ಹಾಸನ 138, ಹಾವೇರಿ 13, ಕಲಬುರಗಿ 4, ಕೊಡಗು 150, ಕೋಲಾರ 79, ಕೊಪ್ಪಳ 55, ಮಂಡ್ಯ 95, ಮೈಸೂರು 282, ರಾಯಚೂರು 9, ರಾಮನಗರ 14, ಶಿವಮೊಗ್ಗ 194, ತುಮಕೂರು 99, ಉಡುಪಿ 71, ಉತ್ತರ ಕನ್ನಡ 52, ವಿಜಯಪುರ 2 ಮತ್ತು ಯಾದಗಿರಿಯಲ್ಲಿ 4 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಇಂದಿನ 28/06/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/rg6a3B0wFm
@CMofKarnataka @drashwathcn@GovindKarjol @LaxmanSavadi @mla_sudhakar @BBMPCOMM @DC_Dharwad @DCKodagu @dcudupi @DCDK9 @mysurucitycorp @mangalurucorp @CEOUdupi pic.twitter.com/yfMcQCNAME
— K'taka Health Dept (@DHFWKA) June 28, 2021