ರಾಜ್ಯದಲ್ಲಿ ಕೊರೊನಾ ರಣಕೇಕೆ- ಒಂದೇ ದಿನ 6,150 ಜನಕ್ಕೆ ಸೋಂಕು, 39 ಸಾವು

Public TV
1 Min Read

– ಬೆಂಗಳೂರಿನಲ್ಲಿ 4,266 ಜನಕ್ಕೆ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ಕೊರೊನಾ ಮಹಾಸ್ಫೋಟವಾಗಿದ್ದು, ಒಂದೇ ದಿನ 6,150 ಹೊಸ ಪ್ರಕರಣಗಳು ವರದಿಯಾಗಿವೆ. ಇದರ ಜೊತೆಗೆ ಸಾವಿನ ಸಂಖ್ಯೆ ಸಹ ಏರಿಕೆ ಕಂಡಿದ್ದು, ಇಂದು 39 ಸೋಂಕಿತರು ಸಾವನ್ನಪ್ಪಿದ್ದಾರೆ.

ಇಂದು 3,487 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸದ್ಯ 45,107 ಸಕ್ರಿಯ ಪ್ರಕರಣಗಳಿದ್ದು, 351 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಕೊರೊನಾದಿಂದ ಮೃತರ ಸಂಖ್ಯೆ 12,696ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 10,26,584ರ ಗಡಿ ತಲುಪಿದೆ.

ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.6.02 ಮತ್ತು ಮರಣ ಪ್ರಮಾಣ ಶೇ.0.63ಕ್ಕೆ ಏರಿಕೆ ಕಂಡಿದೆ. ಇಂದು ಒಟ್ಟು 1,02,021 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬೀದರ್, ಮಂಡ್ಯ, ಹಾಸನ, ತುಮಕೂರಿನಲ್ಲಿ ಶತಕ ಬಾರಿಸಿರುವ ಕೊರೊನಾ, ಕಲಬುರಗಿ ಮತ್ತು ಮೈಸೂರಿನಲ್ಲಿ ಡೆಬಲ್ ಸೆಂಚುರಿ ದಾಖಲಿಸಿದೆ.

ಇನ್ನುಳಿದಂತೆ ರಾಜಧಾನಿ ಬೆಂಗಳೂರು ಕೊರೊನಾ ಬಾಹುಗಳಲ್ಲಿ ಬಂಧಿಯಾಗ್ತಿದೆಯಾ ಆನ್ನೋ ಆತಂತ ಎದುರಾಗಿದೆ. ಇಂದು ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಮರಣ ಕೇಕೆಯೊಂದಿಗೆ ಸ್ಫೋಟಗೊಂಡಿದ್ದು, 4,266 ಜನಕ್ಕೆ ಸೋಂಕು ತಗುಲಿದೆ. ಬೆಂಗಳೂರಿನಲ್ಲಿಯೇ 26 ಜನರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರು ನಗರದಲ್ಲಿ 32,605 ಸಕ್ರಿಯ ಪ್ರಕರಣಗಳಿವೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 18, ಬಳ್ಳಾರಿ 87, ಬೆಳಗಾವಿ 47, ಬೆಂಗಳೂರು ಗ್ರಾಮಾಂತರ 80, ಬೆಂಗಳೂರು ನಗರ 4,266, ಬೀದರ್ 167, ಚಾಮರಾಜನಗರ 5, ಚಿಕ್ಕಬಳ್ಳಾಪುರ 16, ಚಿಕ್ಕಮಗಳೂರು 29, ಚಿತ್ರದುರ್ಗ 21, ದಕ್ಷಿಣ ಕನ್ನಡ 89, ದಾವಣಗೆರೆ 47, ಧಾರವಾಡ 43, ಗದಗ 12, ಹಾಸನ 110, ಹಾವೇರಿ 5, ಕಲಬುರಗಿ 561, ಕೊಡಗು 22, ಕೋಲಾರ 56, ಕೊಪ್ಪಳ 20, ಮಂಡ್ಯ 102, ಮೈಸೂರು 237, ರಾಯಚೂರು 29, ರಾಮನಗರ 14, ಶಿವಮೊಗ್ಗ 49, ತುಮಕೂರು 157, ಉಡುಪಿ 57, ಉತ್ತರ ಕನ್ನಡ 66, ವಿಜಯಪುರ 22 ಮತ್ತು ಯಾದಗಿರಿಯಲ್ಲಿ 16 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *