– ವಿಧಾನಸೌಧ ಮೆಟ್ಟಿಲಿಗೆ ನಮಿಸಿ ಕಾರ್ಯಾರಂಭ
ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ನೂತನ ಸಿಎಂ ಸಿಎಂ ಬಸವರಾಜ ಬೊಮ್ಮಾಯಿ ಶಕೆ ಆರಂಭವಾಗಿದೆ. ಯಾವುದೇ ಗೊಂದಲ ಗೋಜಲುಗಳು ಇಲ್ಲದೇ, ಹೂವು ಎತ್ತಿದ ರೀತಿಯಲ್ಲಿ ಅತ್ಯಂತ ಸುಲಲಿತವಾಗಿ ಹೊಸ ಸರ್ಕಾರ ರಚನೆಯ ಪ್ರಕ್ರಿಯೆ ಮುಗಿದುಹೋಗಿದೆ.
ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಬಸವರಾಜ ಸೋಮಪ್ಪ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಸವರಾಜ ಬೊಮ್ಮಾಯಿಗೆ ರಾಜ್ಯಪಾಲ ಗೆಹ್ಲೋಟ್ ಪ್ರತಿಜ್ಞಾವಿಧಿ ಬೋಧಿಸಿದ್ರು. ದೇವರ ಹೆಸರಿನಲ್ಲಿ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ್ರು.
ನಿರ್ಗಮಿತ ಸಿಎಂ ಯಡಿಯೂರಪ್ಪ ನೂತನ ಸಿಎಂ ಬೊಮ್ಮಾಯಿಗೆ ಹೂ ಗುಚ್ಛ ನೀಡಿ ಅಭಿನಂದಿಸಿದ್ರು. ರಾಜಕೀಯ ಗುರುವಿನ ಜೊತೆಗೆ ಫೋಟೋಗೂ ಪೋಸ್ ಕೊಟ್ಟರು. ಇದಕ್ಕೂ ಮುನ್ನ ರಾಜಭವನಕ್ಕೆ ಆಗಮಿಸಿದ ಬೊಮ್ಮಾಯಿ ನೇರವಾಗಿ ಯಡಿಯೂರಪ್ಪ ಕುಳಿತ ಕಡೆ ಹೋಗಿ ಅವರ ಅಶೀರ್ವಾದ ಪಡೆದುಕೊಂಡ್ರು. ಜೊತೆಯಲ್ಲಿ ನಿಂತು ವಿಕ್ಟರಿ ಸಿಂಬಲ್ ತೋರಿಸಿದ್ರು. ಪದಗ್ರಹಣ ಸಮಾರಂಭಕ್ಕೆ ಉಸ್ತುವಾರಿಗಳು, ವೀಕ್ಷಕರು, ಬಿಜೆಪಿ ನಾಯಕರು, ಬೊಮ್ಮಾಯಿ ಕುಟುಂಬಸ್ಥರು ಸಾಕ್ಷಿಯಾದ್ರು. ಕಾಂಗ್ರೆಸ್ಸಿನ ಮಾಜಿ ಮಂತ್ರಿ ಆರ್.ವಿ.ದೇಶಪಾಂಡೆ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಶುಭಾಶಯಗಳು ಮಾಮ- ನೂತನ ಸಿಎಂ ಬೊಮ್ಮಾಯಿಗೆ ಕಿಚ್ಚ ಅಭಿನಂದನೆ
ಮುಖ್ಯಮಂತ್ರಿಯಾದ ಬಳಿಕ ರಾಜಭವನದಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದ ಬಸವರಾಜ ಬೊಮ್ಮಾಯಿ, ಪ್ರವೇಶ ದ್ವಾರದಲ್ಲಿಯೇ ಶಕ್ತಿ ಸೌಧಕ್ಕೆ ನಮಿಸಿದ್ರು. ನಂತರ ಮೂರನೇ ಮಹಡಿಯಲ್ಲಿರುವ ತಮ್ಮ ಕಚೇರಿಗೆ ಕಚೇರಿಗೆ ತೆರಳಿ ಪೂಜೆಯಲ್ಲಿ ಪಾಲ್ಗೊಂಡ್ರು. ಕೂಡಲೇ ತಮ್ಮ ಮೊದಲ ಮತ್ತು ಏಕವ್ಯಕ್ತಿ ಕ್ಯಾಬಿನೆಟ್ ಸಭೆ ನಡೆಸಿದ್ರು. ಆರ್ಥಿಕ ಸಂಕಷ್ಟದ ನಡ್ವೆಯೂ ಬಸವರಾಜ ಬೊಮ್ಮಾಯಿ ಹಲವು ಜನಪರ ನಿರ್ಣಯಗಳನ್ನು ತೆಗೆದುಕೊಂಡರು. ರೈತರು, ದೀನ ದಲಿತರು, ಅಶಕ್ತರಿಗೆ ಮೊದಲ ದಿನವೇ ಬಂಪರ್ ಗಿಫ್ಟ್ ನೀಡಿದ್ರು. ಇದಿನ್ನೂ ಆರಂಭ. ಮುಂದೆಯೂ ಜನ ಕಲ್ಯಾಣ ಯೋಜನೆಗಳಿಗೆ ಸರ್ಕಾರ ಬದ್ಧವಾಗಿರುತ್ತದೆ ಎಂಬ ಸಂದೇಶವನ್ನು ರವಾನಿಸಿದ್ರು. ಈ ಮೂಲಕ ತಂದೆ ಎಸ್‍ಆರ್ ಬೊಮ್ಮಾಯಿಗೆ ತಕ್ಕ ಮಗ ಎನಿಸಿಕೊಂಡ್ರು. ಇದನ್ನೂ ಓದಿ: ನೂತನ ಸಿಎಂಗೆ ಸಿದ್ದಗಂಗಾ ಶ್ರೀ ಅಭಿನಂದನೆ