ಬೆಂಗಳೂರು: ಕನ್ನಡದ ಯುವ ನಟ ನಿಖಿಲ್ ಕುಮಾರಸ್ವಾಮಿ ರಾಜನಾಗುವುದು ಹೇಗೆ ಎಂಬುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಅಭಿಮಾನಿಗಳಿಗೆ ಸಾಕಷ್ಟು ವಿಷಯಗಳಲ್ಲಿ ಪಾಠ ಮಾಡಿದ್ದ ನಿಖಿಲ್, ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಪಾಠ ಮಾಡಲಾರಂಭಿಸಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಫೋಟೋ ಒಂದನ್ನು ಹಾಕಿಕೊಂಡು ರಾಜನೆಂದೆನಿಸಿಕೊಳ್ಳುವುದು ಹೇಗೆ ಎಂದು ಅಭಿಮಾನಿಗಳಿಗೆ ಹೇಳಿಕೊಡುತ್ತಿದ್ದಾರೆ. ಪ್ರಸ್ತುತ ರೈಡರ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ಯುವರಾಜ, ತಮ್ಮ ಶೂಟಿಂಗ್ ಸೆಟ್ ನಲ್ಲಿ ತೆಗೆದ ಕೆಲವು ಫೋಟೋಗಳನ್ನು ಹಂಚಿಕೊಂಡು ರಾಜನಾಗಲು ದೇಹ, ಮತ್ತು ಶಕ್ತಿಯಿಂದ ಸಾಧ್ಯವಿಲ್ಲ ರಾಜನಾಗಲು ತನ್ನದೆ ಆದ ವರ್ತನೆ ಬಹುಮುಖ್ಯ ಎಂದಿದ್ದಾರೆ.
View this post on Instagram
ನಿಖಿಲ್ ಕೆಲದಿನಗಳ ಹಿಂದೆ ತಮ್ಮ ತಾಯಿಯ ಹುಟ್ಟುಹಬ್ಬಕ್ಕೆ ಫೋಟೋ ಒಂದನ್ನು ಹಾಕಿಕೊಂಡು ಶುಭಾಶಯ ಕೋರಿದ್ದರು. ಹಾಗೆ ತಮ್ಮ ಪತ್ನಿ ರೇವತಿ ಅವರೊಂದಿಗೆ ಬಿಡದಿಯ ತಮ್ಮ ತೋಟದ ಮನೆಯಲ್ಲಿ ಆರ್ ಎಕ್ಸ್ 100 ಬೈಕ್ ನಲ್ಲಿ ಸುತ್ತಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು.
ನಿಖಿಲ್ ಸಿನಿಮಾದಲ್ಲಿ ನಟಿಸುವುದರೊಂದಿಗೆ ಬಿಡುವಿನ ವೇಳೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದು ಅವರೊಂದಿಗಿನ ಛಾಯಾಚಿತ್ರವನ್ನು ಹಾಕಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ.