ರಾಜಕೀಯ ಪಕ್ಷಗಳಿಗೂ ಗೃಹ ಸಚಿವಾಲಯದಿಂದ ಬಿಗ್ ರಿಲೀಫ್

Public TV
1 Min Read

ನವದೆಹಲಿ: ಕೊರೊನಾ ಸಮಯದಲ್ಲಿ ನಡೆಯುತ್ತಿರುವ ಬೈ ಎಲೆಕ್ಷನ್ ವೇಳೆ ಎಲ್ಲಾ ರಾಜಕೀಯ ಪಕ್ಷಗಳಿಗೂ ಕೇಂದ್ರ ಗೃಹ ಸಚಿವಾಲಯ ಬಿಗ್ ರಿಲೀಫ್ ಕೊಟ್ಟಿದೆ.

ಬಿಹಾರ ಚುನಾವಣೆ ಮತ್ತು ದೇಶದ ಹಲವೆಡೆ ನಡೆಯುತ್ತಿರುವ ಉಪಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಅನ್‍ಲಾಕ್ ನಿಯಮಗಳನ್ನು ಮತ್ತಷ್ಟು ಸಡಿಲ ಮಾಡಿ ಕೇಂದ್ರ ಗೃಹ ಸಚಿವಾಲಯ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.

ಕೊರೊನಾ ಮಾರ್ಗಸೂಚಿ ಅನ್ವಯ ಈ ಮೊದಲು ಯಾವುದೇ ಸಭೆ ಸಮಾರಂಭಗಳಲ್ಲಿ 100ಕ್ಕಿಂತ ಹೆಚ್ಚು ಮಂದಿ ಪಾಲ್ಗೊಳ್ಳುವಂತೆ ಇರಲಿಲ್ಲ. ಆದರೆ ಈ ನಿಯಮವನ್ನು ಚುನಾವಣೆ ಸಲುವಾಗಿ ಇದೀಗ ಸಡಿಲ ಮಾಡಲಾಗಿದೆ.

ಪ್ರಚಾರ ಸಭೆಗಳಲ್ಲಿ ನೂರಕ್ಕಿಂತ ಹೆಚ್ಚು ಮಂದಿ ಪಾಲ್ಗೊಳ್ಳಬಹುದು ತಿಳಿಸಿದೆ. ಈ ಪರಿಷ್ಕೃತ ಮಾರ್ಗಸೂಚಿ ಆರ್.ಆರ್.ನಗರ, ಶಿರಾ ಬೈ ಎಲೆಕ್ಷನ್‍ಗೂ ಅನ್ವಯವಾಗಲಿದೆ.

ಮಾರ್ಗಸೂಚಿಯಲ್ಲಿ ಏನಿದೆ?
ರ‍್ಯಾಲಿಗಳಿಗೆ 100ಕ್ಕಿಂತ ಹೆಚ್ಚು ಜನರನ್ನು ಸೇರಿಸಬಹುದು. ರ‍್ಯಾಲಿಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರವನ್ನು ಪಾಲಿಸಲೇಬೇಕು.

ರ‍್ಯಾಲಿಗೆ ಮುನ್ನ ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್‍ವಾಶ್ ಬಳಕೆ ಕಡ್ಡಾಯ. ರ‍್ಯಾಲಿ ನಡೆಯುವ ಮುನ್ನ, ನಂತರ ಸ್ಥಳ ಸ್ಯಾನಿಟೈಸ್ ಮಾಡಬೇಕು.

ಪ್ರಚಾರ ರ‍್ಯಾಲಿಗಳಿಗೆ ರಾಜ್ಯ ಸರ್ಕಾರದ ಅನುಮತಿ ಕಡ್ಡಾಯ. ಸ್ಟಾರ್ ಪ್ರಚಾರಕರ ಸಂಖ್ಯೆ 20 ರಿಂದ 15ಕ್ಕೆ ಇಳಿಕೆ ಮಾಡಬೇಕು. ಕನಿಷ್ಠ 48 ಗಂಟೆಗಳ ಮುನ್ನ ಪಕ್ಷಗಳು ಆಯೋಗದ ಅನುಮತಿ ಪಡೆಯಬೇಕು.

Share This Article
Leave a Comment

Leave a Reply

Your email address will not be published. Required fields are marked *