ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

Public TV
3 Min Read

ಕಾಬೂಲ್: ತಾಲಿಬಾನಿಗಳು ಕಾಬೂಲ್ ನಗರ ಮತ್ತು ರಾಷ್ಟ್ರಪತಿ ಭವನ ವಶಕ್ಕೆ ಪಡೆದ ನಂತರ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದ ಬಳಿಕ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಅಫ್ಘಾನಿಸ್ತಾನದ ಜನರಿಗೆ ಅಶ್ರಫ್ ಘನಿ ಸಂದೇಶ ರವಾನಿಸಿದ್ದು, ನಿಮ್ಮೆಲ್ಲರ ಹಿತ ಮತ್ತು ರಕ್ತಪಾತ ನಿಲ್ಲಿಸಲು ದೇಶದಿಂದ ಹೊರ ಬಂದಿದ್ದೇನೆ ಎಂದು ಹೇಳಿದ್ದಾರೆ.

ನನ್ನ ಪ್ರೀತಿಯ ದೇಶವಾಸಿಗಳೇ,
ನನಗೆ ಕಠಿಣ ಸವಾಲು ಎದುರಾಗಿತ್ತು. ತಾಲಿಬಾನಿಗಳನ್ನು ಎದುರಿಸಲು ನಿಂತಿದ್ದೆ. ಅವರೆಲ್ಲರೂ ಶಸ್ತ್ರಸಜ್ಜಿ ತರಾಗಿ ರಾಷ್ಟ್ರಪತಿ ಭವನ ಪ್ರವೇಶಿಸಲು ಸಿದ್ಧರಾಗಿದ್ದರು. ನಾನು ಅಫ್ಘಾನಿಸ್ತಾನದಿಂದ ದೂರ ಹೋಗಬೇಕೆಂಬುವುದು ಅವರ ಡಿಮ್ಯಾಂಡ್ ಆಗಿತ್ತು. ಕಳೆದ 20 ವರ್ಷಗಳಿಂದ ದೇಶದ ಜನರ ರಕ್ಷಣೆಯಲ್ಲಿ ತೊಡಗಿಕೊಂಡಿದ್ದೇನೆ. ಒಂದು ವೇಳೆ ಅವರ ಡಿಮ್ಯಾಂಡ್ ಒಪ್ಪದಿದ್ರೆ ಯುದ್ಧವೇ ನಡೆಯತ್ತಿತ್ತು. ಈ ಯುದ್ಧದಲ್ಲಿ ನೂರಾರು ಜನ ಪೊಲೀಸರು ಹುತಾತ್ಮರಾಗುತ್ತಿದ್ದರು. ರಕ್ತ ಹರಿಸೋದು ನನಗೆ ಇಷ್ಟವಿರಲಿಲ್ಲ. ಅವರ ಬೇಡಿಕೆಯಂತೆ ಆಧಿಕಾರ ಹಸ್ತಾಂತರಿಸಿ ದೇಶ ತೊರೆದೆ. ಇಲ್ಲವಾದಲ್ಲಿ 60 ಲಕ್ಷ ಜನಸಂಖ್ಯೆಯುಳ್ಳು ಈ ನಗರ ದೊಡ್ಡ ದುರಂತಕ್ಕೆ ಸಾಕ್ಷಿಯಾಗುತ್ತಿತ್ತು.

ತಮ್ಮ ರಸ್ತೆಗೆ ಅಡ್ಡಲಾಗಿರುವ ನನ್ನನ್ನು ತೆಗೆದುಹಾಕಲು ತಾಲಿಬಾಲಿನಿಗಳು ನಿರ್ಧರಿಸಿದ್ದರು. ಇದಕ್ಕಾಗಿ ಕಾಬೂಲ್ ಮತ್ತು ಕಾಬೂಲ್ ಜನತೆಯ ಮೇಲೆ ದಾಳಿಯ ಕುರಿತು ಪ್ಲಾನ್ ಮಾಡಿಕೊಂಡಿದ್ದರು. ಹಾಗಾಗಿ ಇದೆಲ್ಲವನ್ನು ತಡೆಯಲು ನನ್ನ ಮುಂದಿದ ದಾರಿ ಇದು ಒಂದೇ ಆಗಿತ್ತು. ಬಂದೂಕು, ಬಾಂಬ್ ಗಳಿಂದ ತಾಲಿಬಾನಿಗಳು ಯುದ್ಧ ಗೆದ್ದಿರಬಹುದು. ಈಗ ದೇಶ ಮತ್ತು ಅಲ್ಲಿಯ ಜನತೆಯ ಮಾನ ಹಾಗೂ ಪ್ರಾಣವನ್ನು ರಕ್ಷಿಸುವ ಜವಾಬ್ದಾರಿ ಅವರ ಮೇಲಿದೆ.

ದೇಶವನ್ನು ತಮ್ಮ ವಶಕ್ಕೆ ಪಡೆದಿರುವ ತಾಲಿಬಾನಿಗಳು ಅಲ್ಲಿಯ ಜನರ ಮನಸ್ಸು ಗೆದ್ದಿಲ್ಲ. ಕೇವಲ ಶಕ್ತಿಪ್ರದರ್ಶನ ತೋರಿದವರನ್ನು ಜನರು ಒಪ್ಪಿಕೊಳ್ಳಲು ಅನ್ನೋ ಉದಾಹರಣೆಗಳು ನಮ್ಮ ಮುಂದಿವೆ. ಸದ್ಯ ತಾಲಿಬಾನಿಗಳ ಮುಂದೆ ಸವಾಲುಗಳಿದ್ದು, ಅಲ್ಲಿಯ ಜನರನ್ನು ರಕ್ಷಣೆ ಮಾಡ್ತಾರೋ ಅಥವಾ ಮತ್ತೆ ಸಾಮ್ರಾಜ್ಯ ವಿಸ್ತರಣೆಯತ್ತ ಹೋಗ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

ಹಲವು ಜನ ಆತಂಕದಲ್ಲಿದ್ದು, ಮನೆಯಿಂದ ಹೊರ ಬರಲಾರದ ಸ್ಥಿತಿಯಲ್ಲಿದ್ದಾರೆ. ದೇಶದ ಜನತೆಗೆ ತಾಲಿಬಾನಿಗಳ ನಂಬಿಕೆ ಇಲ್ಲ. ದೇಶದ ಮಹಿಳೆ, ಮಕ್ಕಳು, ಪುರುಷರು, ವೃದ್ಧರು ಸೇರಿದಂತೆ ಎಲ್ಲ ರನ್ನೂ ಒಗ್ಗೂಡಿಸಿಕೊಂಡು ತಾಲಿಬಾನಿಗಳು ಮುಂದೆ ಹೆಜ್ಜೆ ಇರಿಸಬೇಕಿದೆ. ನಾನು ನಿಮ್ಮ ಸೇವೆಯಲ್ಲಿರುತ್ತೇನೆ. ಅಫ್ಘಾನಿಸ್ತಾನ ಜಿಂದಾಬಾದ್.

ವಿಮಾನ ಹತ್ತಲು ನೂಕು ನುಗ್ಗಲು:
ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬೆನ್ನಲ್ಲೇ ಜನರ ದೇಶ ತೊರೆಯಲು ಆರಂಭಿಸಿದ್ದಾರೆ. ಉಗ್ರರಿಗೆ ಎಷ್ಟು ಭಯಗೊಂಡಿದ್ದಾರೆ ಎಂದರೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಒಂದು ವಿಮಾನಕ್ಕೆ ಹತ್ತಲು ನೂರಾರು ಜನ ಮುಗಿಬಿದ್ದಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ವಿಮಾನ ಹತ್ತಲು ನಿಯಮಗಳು ಇರುತ್ತದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ವಿಮಾನ ಹತ್ತಲು ಅನುಮತಿ ನೀಡಲಾಗುತ್ತದೆ. ಆದರೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಸ್ ಹತ್ತಲು ಪ್ರಯಾಣಿಕರು ಹೇಗೆ ಮುಗಿ ಬೀಳುತ್ತಾರೋ ಆ ರೀತಿಯಾಗಿ ಒಂದು ಏಣಿ ಮೂಲಕ ವಿಮಾನ ಹತ್ತಲು ಪ್ರಯತ್ನಿಸಿದ್ದಾರೆ.

ಈ ನಾಲ್ವರಲ್ಲಿ ಯಾರು ಅಂತಿಮ?:
ತಾಲಿಬಾನಿಗಳು ಹೇಳುವಂತೆ ಈಗಾಗಲೇ ಅಲ್ಲಿಯ ಪೊಲೀಸರು ಶರಣಾಗಿದ್ದು, ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸುತ್ತಿದ್ದಾರೆ. ಈ ನಡುವೆ ಅಫ್ಘಾನಿಸ್ತಾನದ ಮುಂದಿನ ಅಧ್ಯಕ್ಷ ಅಥವಾ ರಾಷ್ಟ್ರಪತಿ ಯಾರು ಅನ್ನೋ ಚರ್ಚೆಗಳು ಮುನ್ನಲೆಗೆ ಬಂದಿದ್ದು, ಮುಲ್ಲಾ ಬರಾದರ್ ಹೆಸರು ಕೇಳಿ ಬರುತ್ತಿದೆ. ಸದ್ಯ ಈ ಮುಲ್ಲಾ ಬರದಾರ್ ಕತಾರ್ ನಲ್ಲಿದ್ದಾನೆ. ಕತಾರ್ ನಲ್ಲಿರುವ ತಾಲಿಬಾನ್ ಕಚೇರಿಯ ರಾಜಕೀಯ ಮುಖ್ಯಸ್ಥನಾಗಿರೋದರಿಂದ, ಮುಲ್ಲಾ ಬರಾದರ್ ಹೆಸರು ಸ್ಪರ್ಧೆಯಲ್ಲಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆಯ ಸಹ ಸ್ಥಾಪಕನಾಗಿದ್ದಾನೆ. ಇದನ್ನೂ ಓದಿ: ಅಫ್ಘಾನಿಸ್ತಾನ ತೊರೆದ ಅಧ್ಯಕ್ಷ ಅಶ್ರಫ್ ಘನಿ, ಉಪಾಧ್ಯಕ್ಷ ಸಾಲೇಹ

ಮುಲ್ಲಾ ಬರಾದರ್ ಹೆಸರಿನ ಜೊತೆ ಹೆಬತುಲ್ಲಾಹ ಅಖುಂದಜಾದ್, ಸಿರಾಜುದ್ದೀನ್ ಹಕ್ಕನಿ ಮತ್ತು ಮುಲ್ಲಾ ಯಾಕೂಬ್ ಸಹ ಗದ್ದುಗೆಯ ಸ್ಪರ್ಧೆಯಲ್ಲಿದ್ದಾರೆ. ಹೆಬತುಲ್ಲಾಹ ತಾಲಿಬಾನಿಗಳ ಸುಪ್ರೀಂ ನಾಯಕನಾದ್ರೆ, ಸಿರಾಜುದ್ದೀನ್ ಎರಡನೇ ಸ್ಥಾನದಲ್ಲಿರುವ ಲೀಡರ್. ಈತ ಹಕ್ಕಾನಿ ನೆಟ್‍ವರ್ಕ್ ಸಂಚಾಲಕನಾಗಿದ್ದು, ಹಲವು ಸಂಘಟನೆಗಳ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಇನ್ನೂ ಮುಲ್ಲಾ ಯಾಕೂಬ್ ತಾಲಿಬಾನ್ ಸ್ಥಾಪಕರಲ್ಲೊಬ್ಬರಾದ ಮುಲ್ಲಾ ಉಮರ್ ಪುತ್ರನಾಗಿದ್ದಾನೆ. ತಾಲಿಬಾನ್ ದ ಜಂಗಜೂ ಯುನಿಟಿ ಈತನ ಕೈ ವಶದಲ್ಲಿದೆ. ಇದನ್ನೂ ಓದಿ: ತಾಲಿಬಾನಿಗಳ ಅಟ್ಟಹಾಸ, ನರಕವಾದ ಅಫ್ಘಾನಿಸ್ತಾನ- ರಾಜ್ಯಪಾಲ, ಸರ್ಕಾರಿ ಅಧಿಕಾರಿಗಳು ಶರಣಾಗತಿ

Share This Article
Leave a Comment

Leave a Reply

Your email address will not be published. Required fields are marked *