ಯುವ ನಟಿಯೊಂದಿಗೆ ಪ್ರೀತಿಯಲ್ಲಿ ಬಿದ್ದ ಪೃಥ್ವಿ ಶಾ?

Public TV
2 Min Read

ಮುಂಬೈ: ಟೀಂ ಇಂಡಿಯಾ ಆರಂಭಿಕ ಆಟಗಾರ 20 ವರ್ಷದ ಪೃಥ್ವಿ ಶಾ ಬಾಲಿವುಡ್ ಯುವ ನಟಿಯೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

ಐಪಿಎಲ್ 2020ರ ಆವೃತ್ತಿಯ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಪೃಥ್ವಿ ಶಾ ಯುಎಇಗೆ ತೆರಳಿದ್ದಾರೆ. ಇತ್ತೀಚೆಗೆ ಯುಎಇನಲ್ಲಿ ತಂಡದ ಆಟಗಾರರೊಂದಿಗೆ ಅಭ್ಯಾಸ ನಡೆಸುತ್ತಿದ್ದ ಫೋಟೋ ಹಾಗೂ ವಿಡಿಯೋಗಳನ್ನು ಶಾ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟ್‍ಗಳಿಗೆ ನಟಿ ಪ್ರಾಂಚಿ ಸಿಂಗ್ ಮಾಡಿರುವ ಕಾಮೆಂಟ್‍ಗಳು ಸದ್ಯ ಇಬ್ಬರ ನಡುವೇ ಪ್ರೀತಿ ಮೂಡಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ಇಬ್ಬರು ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದ್ದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಇತ್ತೀಚೆಗೆ ಹೋಟೆಲ್‍ನಿಂದ ಹೊರ ಬರುವ ಸಂದರ್ಭದ ವಿಡಿಯೋವನ್ನು ಪೃಥ್ವಿ ಶಾ ತಮ್ಮ ಇನ್‍ಸ್ಟಾದಲ್ಲಿ ಶೇರ್ ಮಾಡಿದ್ದರು. ಈ ವಿಡಿಯೋಗೆ ಕಾಮೆಂಟ್ ಮಾಡಿದ್ದ ಪ್ರಾಚಿ ಸಿಂಗ್, ‘ವ್ಹಾ ವ್ಹಾ ಐ ಮಿಸ್ ಡಟ್ ಲಾಫ್’ ಎಂದು ಬರೆದುಕೊಂಡಿದ್ದರು. ಮತ್ತೊಂದು ಫೋಟೋಗೆ ‘ಕ್ಯೂಟಿ’ ಎಂದು ಲವ್ ಇಮೋಜಿ ಕಾಮೆಂಟ್ ಮಾಡಿದ್ದರು. ಅಲ್ಲದೇ ಪೃಥ್ವಿ ಶಾ ಪೋಸ್ಟ್ ಮಾಡುವ ಪ್ರತಿಯೊಂದು ಪೋಸ್ಟ್ ಗೂ ಪ್ರಾಚಿ ಸಿಂಗ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದರೊಂದಿಗೆ ಇಬ್ಬರು ಡೇಟಿಂಗ್‍ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಯುವ ನಟಿ ಪ್ರಾಚಿ ಸಿಂಗ್ ಹೆಸರು ಕಿರುತೆರೆ ಹಾಗೂ ಸಿನಿಮಾ ರಂಗದಲ್ಲಿ ಸಾಕಷ್ಟು ಕೇಳಿ ಬರುತ್ತಿದೆ. ಪ್ರಾಚಿ ಸಿಂಗ್ ಸದ್ಯ ಕಲರ್ಸ್ ವಾಹಿನಿಯ ಉಡಾನ್ ಎಂಬ ಸೀರಿಸ್‍ನಲ್ಲಿ ನಟಿಸುತ್ತಿದ್ದು, ಪೃಥ್ವಿ ಶಾ ಮತ್ತು ಪ್ರಾಚಿ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರುವುದರಿಂದ ಇಬ್ಬರು ಪ್ರೀತಿಯಲ್ಲಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಿರುವ ಪೃಥ್ವಿ ಶಾ, 3 ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 2018 ರಿಂದಲೂ ಐಪಿಎಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದು, ಇದುವರೆಗೂ 25 ಪಂದ್ಯಗಳಿಂದ 598 ರನ್ ಸಿಡಿಸಿದ್ದಾರೆ. ಇದರಲ್ಲಿ 5 ಅರ್ಧ ಶತಕಗಳೂ ಸೇರಿದ್ದು, 99 ರನ್ ಗರಿಷ್ಠ ಸ್ಕೋರ್ ಆಗಿದೆ. ಸೆ.19 ರಿಂದ ನ.10ರವರೆಗೂ ಐಪಿಎಲ್ ಟೂರ್ನಿ ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಶಿಖರ್ ಧವನ್‍ರೊಂದಿಗೆ ಪೃಥ್ವಿ ಶಾ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಕ್ರಿಕೆಟಿಗರು ಹಾಗೂ ನಟಿಯರ ನಡುವೆ ಆಗಾಗ ಡೇಟಿಂಗ್, ಲವ್ ನಂತಹ ರೂಮರ್ಸ್ ಕೇಳಿ ಬರುತ್ತಲೇ ಇರುತ್ತವೆ. ಇಂತಹ ರೂಮರ್ಸ್ ಕೆಲವೊಮ್ಮೆ ನಿಜವಾಗಿದೆ. ವಿರಾಟ್ ಕೊಹ್ಲಿ-ಅನುಷ್ಕಾ, ಜಹೀರ್ ಖಾನ್-ಸಾಗರಿಕಾ, ಹರ್ಭಜನ್ ಸಿಂಗ್-ಗೀತಾ, ಯುವರಾಜ್ ಸಿಂಗ್-ಹೇಝಲ್ ಕೀಚ್, ಹಾರ್ದಿಕ್ ಪಾಂಡ್ಯ-ನತಾಶಾ ಸೇರಿದಂತೆ ಹಲವು ಜೋಡಿಗಳು ಇದಕ್ಕೆ ಉದಾಹರಣೆಯಾಗಿದೆ.

 

View this post on Instagram

 

???? . . . #bellydanceindia

A post shared by Prachi Singh (@prachisingh2202) on

Share This Article
Leave a Comment

Leave a Reply

Your email address will not be published. Required fields are marked *