ಯುವಕರಿಂದ ಕಿರುಕುಳ- ಚಲಿಸುತ್ತಿದ್ದ ಬಸ್‍ನಿಂದ ಜಿಗಿದ ಹುಡುಗಿಯರು

Public TV
2 Min Read

– ಅವಾಚ್ಯ ಶಬ್ದಗಳಿಂದ ನಿಂದಿಸಿದ ನಾಲ್ವರು ಪುಂಡರು

ಲಕ್ನೋ: ನಿರ್ಭಯಾ ರೀತಿಯ ಮತ್ತೊಂದು ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದ್ದು, ನಾಲ್ವರು ಯುವಕರು ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಕ್ಕೆ 12ನೇ ತರಗತಿಯ ಇಬ್ಬರು ಹುಡುಗಿಯರು ಚಲಿಸುತ್ತಿದ್ದ ಬಸ್‍ನಿಂದ ಜಿಗಿದಿರುವ ಆಘಾತಕಾರಿ ಘಟನೆ ನಡೆದಿದೆ.

ದೆಹಲಿ ಬಳಿ ಗ್ರೇಟರ್ ನೋಯ್ಡಾದಲ್ಲಿ ಘಟನೆ ನಡೆದಿದ್ದು, ನಾಲ್ವರು ಯುವಕರು ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಕ್ಕೆ ಬಸ್ ನಿಲ್ಲಿಸುವಂತೆ ಚಾಲಕಿನಿಗೆ ಹೇಳಿದ್ದಾರೆ. ಅಷ್ಟಾದರೂ ಚಾಲಕ ಬಸ್ ನಿಲ್ಲಿಸದ್ದಕ್ಕೆ ಇಬ್ಬರು ಹುಡುಗಿಯರು ಚಲಿಸುತ್ತಿದ್ದ ಬಸ್‍ನಿಂದ ಜಿಗಿದಿದ್ದಾರೆ.

ರಾಣೇರಾ ಗ್ರಾಮದ ಇಬ್ಬರು ಹುಡುಗಿಯರು ಬೆಳಗ್ಗೆ 10ರ ಸುಮಾರಿಗೆ ಬುಲಾಂದ್‍ಶಹರ್‍ಗೆ ತೆರಳುವ ಖಾಸಗಿ ಬಸ್ ಹತ್ತಿದ್ದಾರೆ. ಇಬ್ಬರೂ ಬಸ್‍ನ ಮಧ್ಯದ ಸೀಟ್‍ಗಳಲ್ಲಿ ಕುಳಿತಿದ್ದಾರೆ. ಬಳಿಕ ನಾಲ್ವರು ಯುವಕರು ಬಸ್‍ನ ಮುಂಭಾಗದಲ್ಲಿ ಕುಳಿತಿದ್ದಾರೆ. ಬಳಿಕ ಅವಾಚ್ಯ ಶಬ್ದಗಳಿಂದ ಬೈದು ಕಿರುಕುಳ ನೀಡಲು ಆರಂಭಿಸಿದ್ದಾರೆ.

ಈ ವೇಳೆ ಬಸ್ ನಿಲ್ಲಿಸುವಂತೆ ಇಬ್ಬರೂ ಹುಡುಗಿಯರು ಕೇಳಿಕೊಂಡಿದ್ದಾರೆ. ಆದರೆ ಚಾಲಕ ಬಸ್ ನಿಲ್ಲಿಸಿಲ್ಲ. ಬದಲಿಗೆ ಇನ್ನೂ ಜೋರಾಗಿ ಬಸ್ ಜಲಾಯಿಸಿದ್ದಾನೆ. ಕೆಲ ಹುಡುಗಿಯರು ಬಸ್ ನಿಲ್ಲಿಸುವಂತೆ ಕೈ ಚಾಚಿದರೂ ಬೀರಮ್‍ಪುರ ನಿಲ್ದಾಣದಲ್ಲೂ ಚಾಲಕ ಬಸ್ ನಿಲ್ಲಿಸಿಲ್ಲ. ಈ ಕುರಿತು ಪ್ರಶ್ನಿಸಿದರೆ ಬಸ್ ಭೇರೆ ರೂಟ್‍ಗೆ ಚಲಿಸುತ್ತಿದೆ. ಹೀಗಾಗಿ ನಿಲ್ಲಿಸಿಲ್ಲ ಎಂದು ಹುಡುಗಿಯರು ಎಷ್ಟೇ ಗೋಗರೆದರೂ ಬಸ್ ನಿಲ್ಲಿಸಿಲ್ಲ.

ಆಗ ಯುವಕರು ಜೋರಾಗಿ ಕೂಗಿಕೊಂಡು ಇಂದು ಬಸ್ ಎಲ್ಲಿಯೂ ನಿಲ್ಲುವುದಿಲ್ಲ, ಮಜಾ ಬಂದಿದೆ ಎಂದಿದ್ದಾರೆ. ಸಮಸ್ಯೆ ಎದುರಾಗಲಿದೆ ಎಂಬುದನ್ನು ಗಮನಿಸಿ ನಾವು ಬಸ್ ಮಧ್ಯ ಭಾಗದಿಂದ ಹಿಂದಕ್ಕೆ ತೆರಳಿದೆವು. ಬಸ್ ನಿಲ್ಲಿಸುವಂತೆ ನನ್ನ ಸ್ನೇಹಿತೆ ಹಲವು ಬಾರಿ ವಿನಂತಿಸಿದಳು. ಆದರೂ ನಿಲ್ಲಿಸಲಿಲ್ಲ. ಬಳಿಕ ನಾವು ಒಬ್ಬಬ್ಬರೇ ಬಸ್‍ನಿಂದ ಹೊರಗೆ ಜಿಗಿದೆವು ಎಂದು ಹುಡುಗಿಯ ಹೇಳಿಕೆಯನ್ನು ಆಧರಿಸಿ ವರದಿ ಮಾಡಲಾಗಿದೆ.

ಒಬ್ಬಳಿಗೆ ತಲೆ, ಸೊಂಟ ಹಾಗೂ ಕಾಲಿಗೆ ಬಲವಾದ ಪೆಟ್ಟು ಬಿದ್ದಿದ್ದು, ಮತ್ತೊಬ್ಬಳಿಗೆ ಕೈ ಹಾಗೂ ಕಾಲಿಗೆ ಗಾಯಗಳಾಗಿವೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಎಫ್‍ಐಆರ್ ದಾಖಲಿಸಲಾಗಿದೆ. ಸಂತ್ರಸ್ತ ಬಾಲಕಿಯ ಪೋಷಕರು ಯುವಕರ ವರ್ತನೆ ಕುರಿತು ಆರೋಪಿಸಿಲ್ಲ. ಚಾಲಕ ಬಸ್ ನಿಲ್ಲಿಸಲಿಲ್ಲ ಎಂದು ಮಾತ್ರ ದೂರಿದ್ದಾರೆ. ಹೀಗಾಗಿ ಬಸ್ ಚಾಲಕನನ್ನು ಮಾತ್ರ ಐಪಿಸಿ ಸೆಕ್ಷನ್ 279(ರ್‍ಯಾಶ್ ಡ್ರೈವಿಂಗ್), 338 (ಜೀವಕ್ಕೆ ಅಪಾಯವನ್ನುಂಟು ಮಾಡುವ ರೀತಿ ವರ್ತನೆ, ನೋವುಂಟು ಮಾಡುವುದು) ಹಾಗೂ 337(ವ್ಯಕ್ತಿಗೆ ನೋವು ನೀಡಿರುವುದು) ಅಡಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಬಸ್ ಚಾಲಕನೂ ಕ್ಷಮೆಯಾಚಿಸಿದ್ದು, ಪ್ರಕರಣವನ್ನು ಬಗೆಹರಿಸಲಾಗುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *