ಯಡಿಯೂರಪ್ಪನವರದು ಬಗ್ಗುವ ತಂತ್ರ ಅಲ್ಲ – ಡಿಕೆಶಿ

Public TV
1 Min Read

ಬೆಂಗಳೂರು: ಹೈಕಮಾಂಡ್ ಆಶೀರ್ವಾದ ಇದ್ದಷ್ಟು ದಿನ ನಾನು ಸಿಎಂ ಆಗಿರುತ್ತೇನೆ ಅಂತ ಯಡಿಯೂರಪ್ಪ ಹೇಳಿದ್ದಾರೆ. ಆದರೆ ಯಡಿಯೂರಪ್ಪ ನವರದು ಬಗ್ಗುವ ತಂತ್ರ ಅಲ್ಲಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ರಾಜಕಾರಣಿಗಳಲ್ಲಿ ಬಹಳ ತಂತ್ರ ಇರುತ್ತದೆ. ರಾಜಕಾರಣದಲ್ಲಿ ಒಂದು ನೀತಿ ಇದೆ. ಹೇಳೋದೊಂದು ಮಾಡೊದೊಂದು ಇರುತ್ತದೆ. ರಾಜಕಾರಣದಲ್ಲಿ ಯಡಿಯೂರಪ್ಪ ನವರ ತಂತ್ರ ಬೇರೆ. ಯಡಿಯೂರಪ್ಪ ಇರೊದರಲ್ಲಿ ಗಟ್ಟಿ ಮನುಷ್ಯ. ಅವರ ನಾಯಕ್ವದಲ್ಲಿ 104 ಸೀಟ್ ಬಂದಿದೆ. ಅವರ ನಾಯಕತ್ವದಡಿಯಲ್ಲಿ ನಮ್ಮ ಸ್ನೇಹಿತರು ಅಲ್ಲಿಗೆ ಹೋದರು. ಈಗ ಸುಮ್ಮನೆ ಅವರನ್ನು ತಗೆದು ಹಾಕುವ ಮಾತು ಅವರ ಪಾರ್ಟಿಗೆ ಬಿಟ್ಟಿದ್ದು ಎಂದರು. ಇದನ್ನೂ ಓದಿ:ಎಲ್ಲಿಯವರೆಗೆ ಹೈಕಮಾಂಡ್‍ಗೆ ವಿಶ್ವಾಸ ಇರುತ್ತೋ ಅಲ್ಲಿವರೆಗೂ ನಾನು ಸಿಎಂ ಆಗಿರುತ್ತೇನೆ – ಬಿಎಸ್‍ವೈ 

ಯಡಿಯೂರಪ್ಪ ಗಟ್ಟಿ ಮನುಷ್ಯ ಈ ತಂತ್ರ ಅಷ್ಟು ಸುಲಭಕ್ಕೆ ಜಗ್ಗಲ್ಲ. ಮುಂದೆ ಎಲ್ಲಾ ಯಡಿಯೂರಪ್ಪ ಇರಲಿ ಅಂತಾರೆ. ಹಿಂದೆ ಎಲ್ಲಾ ಸೂಟು ಬೂಟು ಹೊಲಿಸಿಕೊಂಡು ರೆಡಿ ಆಗಿದ್ದಾರೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದಾರೆ. ನಮಗೂ ಎಲ್ಲ ಗೊತ್ತಿದೆ. ವರ ಮೇಲೆ ಸಿಡಿ ಮತ್ತೊಂದು ಅದೆಲ್ಲಾ ಪಕ್ಷ ದಲ್ಲಿ ಶಿಸ್ತು ಇಲ್ಲವಾಗಿದೆ. ನನ್ನಂತವನಾಗಿದ್ದರೆ, ನಮ್ಮ ಪಕ್ಷ ಆಗಿದ್ದರೆ ಅಂತವರನ್ನು ಅರ್ಧ ಗಂಟೆ ಇರೋಕೆ ಬಿಡುತ್ತಿರಲಿಲ್ಲ. ಯಡಿಯೂರಪ್ಪನವರ ತಂತ್ರವನ್ನು ಎರಡು ಮೂರು ತರ ವಿಶ್ಲೇಷಣೆ ಮಾಡಬಹುದು. ನನ್ನನ್ನ ಮುಟ್ಟಿ ನೋಡಿ ಎನ್ನಬಹುದು. ಪಕ್ಷದ ಶಿಸ್ತಿನ ಸಿಪಾಯಿ ಎನ್ನಬಹುದು. ನೀವೇ ಎಲ್ಲಾ ವಿಶ್ಲೇಷಣೆ ಮಾಡಿ ಎಂದಿದ್ದಾರೆ. ಇದನ್ನೂ ಓದಿ:ಸಿಎಂ ನಿವಾಸಕ್ಕೆ ಆಗಮಿಸಿದ ಸಿಂಧೂರಿ – ರಿಪೋರ್ಟ್ ಮಾಡಿ ಎಂದ ಬಿಎಸ್‍ವೈ

ಕಂಟ್ರೋಲ್‍ನಲ್ಲಿ ಇಲ್ಲಾ
ಮೈಸೂರಿನಲ್ಲಿ ಐಎಎಸ್ ಅಧಿಕಾರಿಗಳು ಬಹಿರಂಗವಾಗಿ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಗಲಾಟೆ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಅಧಿಕಾರಿಗಳನ್ನು ಕಂಟ್ರೋಲ್ ಮಾಡುವಲ್ಲಿ ಸರ್ಕಾರ ಎಡವಿದೆ. ಗಲಾಟೆ ಆಗಿದೆ ಎಂದು ಇಬ್ಬರನ್ನು ಮೈಸೂರಿನಿಂದ ವರ್ಗಾವಣೆ ಮಾಡಿದ್ದಾರೆ. ಇದರಿಂದ ಅಧಿಕಾರಿಗಳನ್ನು ಕಂಟ್ರೋಲ್ ಮಾಡೋಕೆ ಆಗದ ಸರ್ಕಾರ ಎಂದು ರಾಜ್ಯಕ್ಕೆ ಗೊತ್ತಾಗಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *