ಮೊದಲ ಸಂಬಳವನ್ನೇ ಬಡವರ ಹಸಿವು ನೀಗಿಸಲು ಮೀಸಲಿಟ್ಟ ಕೊಡಗಿನ ಯುವಕ

Public TV
1 Min Read

ಮಡಿಕೇರಿ: ಇಂದಿನ ಕೋವಿಡ್ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಯಾರೋ ನೀಡಿದ ದವಸ, ಧಾನ್ಯಗಳನ್ನು ತಾವೇ ನೀಡಿದಂತೆ ಫೋಟೋಗಳಲ್ಲಿ ಮಿಂಚಿ ಸಾಮಾಜಿಕ ಜಾಲತಾಣದಲ್ಲಿ ಮಿಂಚುವ ಮಂದಿಗಳೇ ಹೆಚ್ಚು ಕಾಣಸಿಗುತ್ತಾರೆ. ಸ್ವಂತ ದುಡಿಮೆಯ ಆದಾಯವನ್ನು ಸಮಾಜ ಸೇವೆಗೆ ಮೀಸಲಿಡುವ ಮಾದರಿ ಜನ ವಿರಳವಾಗಿರುವ ಈ ದಿನಗಳಲ್ಲಿ ಇಲ್ಲೊಬ್ಬ ಯುವಕ ತನ್ನ ಪ್ರಥಮ ಸಂಬಳವನ್ನೇ ಬಡವರ ಹಸಿವು ನೀಗಿಸುವುದಕ್ಕಾಗಿ ಮೀಸಲಿಟ್ಟಿದ್ದಾರೆ.

ಕೋವಿಡ್ ಲಾಕ್‍ಡೌನ್ ನಿಂದಾಗಿ ಎಲ್ಲರಂತೆ ಮಂಗಳಮುಖಿಯರು ಕೂಡ ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಕೊಡಗಿನ ಕುಶಾಲನಗರದಲ್ಲಿ ವಾಸವಿರುವ ಮಂಗಳಮುಖಿ ದೀಕ್ಷಾ ಎಂಬವರ ಸಂಕಷ್ಟವನ್ನು ಅರಿತ ಸೋಮವಾರಪೇಟೆಯ ಯುವಕ ಎಸ್.ಎಂ ಧನುಷ್ ತಮ್ಮ ಮೊದಲ ಸಂಬಳದಿಂದ ಅಗತ್ಯ ಆಹಾರ ಸಾಮಾಗ್ರಿಗಳನ್ನು ಖರೀದಿಸಿ ಕೊಟ್ಟಿದ್ದಾರೆ.

ಎಂಜಿನಿಯರಿಂಗ್ ಮಾಡಿರುವ ಇವರು ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದು, ಸಾಮಾಜಿಕ ಕಳಕಳಿಯನ್ನು ಹೊಂದಿದ್ದಾರೆ. ಇನ್ನು ಮುಂದೆಯೂ ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.

ಧನುಷ್ ಅವರು ಪತಕರ್ತ ಎಸ್.ಮಹೇಶ್ ಪುತ್ರರಾಗಿದ್ದು, ಕೋವಿಡ್ ಪರಿಸ್ಥಿತಿಯಿಂದ ಸಮಾಜದಲ್ಲಿ ಬಡವರ ಸಮಸ್ಯೆಗಳ ಅರಿತ ಯುವಕ ತನ್ನ ಮೊದಲ ಸಂಬಳದಲ್ಲಿ ಬಡವರ ಸೇವೆ ಮಾಡಿದನ್ನು ಕಂಡ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ಪಂತರಪಾಳ್ಯದಲ್ಲಿ 10 ತಿಂಗಳಲ್ಲಿ 150 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಿದ್ಧ: ವಿ. ಸೋಮಣ್ಣ

Share This Article
Leave a Comment

Leave a Reply

Your email address will not be published. Required fields are marked *