ಮೊದಲ ನಿರ್ದೇಶನದಲ್ಲಿ ಗೆದ್ದ ನಿರ್ದೇಶಕ ಬಾಲು ಚಂದ್ರಶೇಖರ್

Public TV
1 Min Read

– ಥಿಯೇಟರ್‌ನಲ್ಲಿ ಮ್ಯಾಜಿಕ್ ಮಾಡ್ತಿದೆ ‘ಮುಂದುವರೆದ ಅಧ್ಯಾಯ’ ಸಿನಿಮಾ

ಬೆಂಗಳೂರು: ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ನಟನೆಯ, ಯುವ ನಿರ್ದೇಶಕ ಬಾಲು ಚಂದ್ರಶೇಖರ್ ಆ್ಯಕ್ಷನ್ ಕಟ್ ಹೇಳಿರುವ ಮುಂದುವರೆದ ಅಧ್ಯಾಯ ಸಿನಿಮಾ ಬೆಳ್ಳಿಪರದೆಯ ಮೇಲೆ ರಾರಾಜಿಸುತ್ತಿದೆ. ಆಫ್ಟರ್ ಲಾಂಗ್ ಗ್ಯಾಪ್ ಬಳಿಕ ಮತ್ತೆ ಬಣ್ಣ ಹೆಚ್ಚಿದ್ದ ಆದಿತ್ಯರ ಸಿನಿಮಾಕ್ಕೆ ಪ್ರೇಕ್ಷಕ ಜೈಕಾರ ಹಾಕಿದ್ದಾನೆ. ಈ ವಾರ ರಾಜ್ಯಾದ್ಯಂತ ರಿಲೀಸ್ ಆಗಿರುವ ಮುಂದುವರೆದ ಅಧ್ಯಾಯ ಸಿನಿಮಾಕ್ಕೆ ಸಖತ್ ರೆಸ್ಪಾನ್ಸ್ ಸಿಗುತ್ತಿದ್ದು, ಒಳ್ಳೆ ಕಥೆ ಇರುವ ಸಿನಿಮಾ ನೋಡಿ ಪ್ರೇಕ್ಷಕ ಪ್ರಭು ನೂರು ಮಾಕ್ರ್ಸ್ ಕೊಟ್ಟಿದ್ದಾರೆ.

ಮೊದಲ ನಿರ್ದೇಶನದಲ್ಲಿ ಗೆಲುವು
ನಿರ್ದೇಶಕನಾಗಬೇಕು ಎಂಬ ಕನಸು ಹೊತ್ತು ಮುಂದುವರೆದ ಅಧ್ಯಾಯ ಸಿನಿಮಾದ ಮೂಲಕ ನಿರ್ದೇಶನಕ್ಕಿಳಿದಿದ್ದ ಯುವ ನಿರ್ದೇಶಕ ಬಾಲು ಚಂದ್ರಶೇಖರ್ ಮೊದಲ ಡೈರೆಕ್ಷನ್ ನಲ್ಲಿಯೇ ಗೆದ್ದಿದ್ದಾರೆ. ಕಾಡುವ ಕಥೆ… ಅದರ ಸುತ್ತ ಹೆಣೆದ ಪಾತ್ರಗಳು.. ಯಾವುದನ್ನು ಎಷ್ಟು ಬೇಕು..ಅಷ್ಟೇ ವೈಭವೀಕರಿಸಿ ಸಿನಿಮಾ ಮಾಡಿರುವ ಬಾಲು ತಂತ್ರಗಾರಿಕೆಯನ್ನು ಸಿನಿಮಾ ಮಂದಿ ಮೆಚ್ಚುಕೊಂಡಿದ್ದಾರೆ.

ಒಂದು ಸಾವು.. ಆ ಸಾವಿನ ಜಾಡು ಹಿಡಿದು ಹೊರಡುವ ಪೊಲೀಸ್ ಅಧಿಕಾರಿ… ಮತ್ತಿತರ ಪಾತ್ರಗಳು ಪ್ರೇಕ್ಷಕರನ್ನು ಸೀಟಿನ ತುದಿಗೆ ಕುರುವಂತೆ ಮಾಡಿದೆ ಮುಂದುವರೆದ ಅಧ್ಯಾಯ. ಇಂತಹ ತನಿಖೆ ಕಥೆ ನೋಡೋದಿಕ್ಕೆ ಸಿನಿಮಂದಿ ಮುಗಿಬೀಳ್ತಿದ್ದಾರೆ. ಸಿನಿಮಾ ನೋಡಿ ಕಥೆ ಇಷ್ಟಪಡ್ತಿದ್ದಾರೆ.

ಜಾನಿ – ನಿತಿನ್ ಮ್ಯೂಸಿಕ್, ಅನೂಪ್ ಸೀಳಿನ್ ಬ್ಯಾಗ್ ಗ್ರೌಂಡ್ ಮ್ಯೂಸಿಕ್ ಪ್ರೇಕ್ಷಕರನ್ನು ಕಾಡಿದ್ರೆ, ದಿಲೀಪ್ ಚಕ್ರವರ್ತಿ ಕ್ಯಾಮೆರಾ ವರ್ಕ್ ಅದ್ಭುತವಾಗಿ ಮೂಡಿ ಬಂದಿದೆ. ಉಳಿದಂತೆ ಆಶಿಕ ಸೋಮಶೇಖರ್, ಜೈಜಗದೀಶ್, ಮುಖ್ಯಮಂತ್ರಿ ಚಂದ್ರು, ಅಜಯ್ ರಾಜ್, ವಿನಯ್ ಕೃಷ್ಣಸ್ವಾಮಿ, ಸಂದೀಪ್ ಕುಮಾರ್, ಚಂದನ ಗೌಡ ಮುಂತಾದ ಪಾತ್ರಗಳು ಕೊನೆ ತನಕ ಕಾಡುತ್ತವೆ. ಕಣಜ ಎಂಟರ್ ಪ್ರೈಸಸ್ ಲಾಂಛನ ದಡಿಯಲ್ಲಿ ಮುಂದುವರೆದ ಅಧ್ಯಾಯ ಸಿನಿಮಾ ನಿರ್ಮಾಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *