ಮೇ 17ರ ಬಳಿಕ ಸಿಗುತ್ತಾ ಬಿಗ್ ರಿಲೀಫ್?- ಲಾಕ್‍ಡೌನ್ 4ರಲ್ಲಿ ಏನಿರಬಹುದು, ಯಾವುದಕ್ಕೆಲ್ಲ ನಿರ್ಬಂಧ?

Public TV
3 Min Read

ನವದೆಹಲಿ/ಬೆಂಗಳೂರು: ಲಾಕ್ ಡೌನ್ ವಿಸ್ತರಣೆ, ವಿನಾಯ್ತಿ ಸಂಬಂಧ ಸೋಮವಾರ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ದೀರ್ಘಕಾಲದ ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿಗಳ ಅಭಿಪ್ರಾಯ ಪಡೆದಿರುವ ಪ್ರಧಾನಿ ಮೋದಿ, ಕೇಂದ್ರ ಆರೋಗ್ಯ ಇಲಾಖೆಯ ಟಾಸ್ಕ್ ಫೋರ್ಸ್, ನೀತಿ ಆಯೋಗ ಸೇರಿ ಹಲವು ಟಾಸ್ಕ್ ಫೋರ್ಸ್ ಗಳ ಅಭಿಪ್ರಾಯ ಸಂಗ್ರಹಿಸಿ ಒಂದೆರಡು ದಿನಗಳಲ್ಲಿ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ.

ಲಾಕ್ ಡೌನ್ ನಿಯಮಗಳನ್ನು ಕಂಟೈನ್ಮೆಂಟ್ ಝೋನ್ ಗಳಿಗೆ ಸೀಮಿತಗೊಳಿಸಿ ಲಾಕ್ ಡೌನ್ ನಿಂದ ವಿನಾಯ್ತಿ ನೀಡುವಂತೆ ದೆಹಲಿ, ಒಡಿಶಾ, ಗುಜರಾತ್, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳು ಮನವಿ ಮಾಡಿಕೊಂಡಿದೆ. ಉತ್ತರ ಪ್ರದೇಶ ಅಸ್ಸಾಂ ತೆಲಂಗಾಣ ಸೇರಿ ಹಲವು ರಾಜ್ಯಗಳು ಲಾಕ್ ಡೌನ್ ಮುಂದುವರಿಯಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ, ತಮಿಳುನಾಡು ಹಾಗೂ ಕರ್ನಾಟಕ ರೈಲು ವಿಮಾನ ಹಾರಾಟ ಬೇಡ ಈಗಿರುವ ಸಡಿಲಿಕೆ ಸಾಕು ಎಂದು ಮನವಿ ಮಾಡಿಕೊಂಡಿವೆ.

ಬಹುತೇಕ ರಾಜ್ಯಗಳು ವಿನಾಯ್ತಿ ಲಾಕ್ ಡೌನ್ ಮುಂದುವರಿಸಲು ಒಪ್ಪಿಗೆ ಸೂಚಿಸಿದೆ. ಹೀಗೆ ಹಲವು ಭಿನ್ನ ಅಭಿಪ್ರಾಯಗಳು ಸಿಎಂಗಳ ಸಭೆಯಲ್ಲಿ ವ್ಯಕ್ತವಾಗಿದ್ದು ಪ್ರಧಾನಿ ಮೋದಿ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಅನ್ನೂ ಕುತೂಹಲ ಮೂಡಿಸಿದೆ.

4ನೇ ಹಂತದ್ದು ಎಷ್ಟು ದಿನಕ್ಕೆ ವಿಸ್ತರಣೆ?
ನಾಲ್ಕನೇ ಹಂತದ ಲಾಕ್ ಡೌನ್ 10 ಅಥವಾ 14 ದಿನ ವಿಸ್ತರಣೆಯಾಗುವ ಸಾಧ್ಯತೆಗಳಿವೆ. ಯಾಕೆಂದರೆ ಮೊದಲ ಹಂತದಲ್ಲಿ 21 ದಿನ, ಎರಡನೇ ಹಂತದಲ್ಲಿ 19 ದಿನಗಳು ಹಾಗೂ ಮೂರನೇ ಹಂತದಲ್ಲಿ 19 ದಿನಗಳ ಕಾಲ ಲಾಕ್ ಡೌನ್ ವಿಸ್ತರಣೆಯಾಗಿತ್ತು.

ಮೇ ಅಂತ್ಯದವರೆಗೂ ಲಾಕ್ ಡೌನ್ ವಿಸ್ತರಿಸಲು ರಾಜ್ಯ ಸರ್ಕಾರಗಳು ಮನವಿ ಮಾಡಿವೆ. ಈಗಾಗಲೇ ತೆಲಂಗಾಣ ಮೇ 29ವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಿದೆ. ತೆಲಂಗಾಣ ಮಾದರಿ ಪರಿಗಣಿಸಿದರೆ ಮೇ 27 ವರೆಗೂ 10 ದಿನಗಳ ಕಾಲ ಲಾಕ್ ಡೌನ್ ಮತ್ತೆ ಮುಂದುವರಿಬಹುದು. 14 ದಿನಕ್ಕೆ ನಿರ್ಧಾರ ಮಾಡಿದರೆ ಬಹುತೇಕ ಮೇ 31ವರೆಗೂ ವಿಸ್ತರಣೆ ಮಾಡಬಹುದು. ಇದನ್ನೂ ಓದಿ: ಪ್ರಧಾನಿ ಮೋದಿ ಬಳಿ ವಿಶೇಷ ಪ್ಯಾಕೇಜ್‍ಗೆ ಪ್ರಸ್ತಾಪಿಸದ ಸಿಎಂ ಬಿಎಸ್‍ವೈ

ನಾಲ್ಕನೇ ಹಂತದಲ್ಲಿ ಲಾಕ್ ಡೌನ್ ಆದ್ರೆ ಏನೆಲ್ಲ ಇರುತ್ತೆ..?
ಮೇ 17ರ ಬಳಿಕ ಲಾಕ್ ಡೌನ್‍ನಿಂದ ಬಿಗ್ ರಿಲೀಫ್ ನಿರೀಕ್ಷೆ ಸಿಗುವ ಸಾಧ್ಯತೆ ಇದೆ. ರಾಜ್ಯಗಳ ಮನವಿ ಹಿನ್ನೆಲೆ ಕಂಟೈನ್ಮೆಂಟ್ ಝೋನ್‍ಗಷ್ಟೇ ಲಾಕ್‍ಡೌನ್ ವಿಸ್ತರಣೆಯಾಗಬಹುದು. ಕಂಟೈನ್ಮೆಂಟ್ ಝೋನ್ ಬಿಟ್ಟು ಉಳಿದೆಡೆ ಲಾಕ್‍ಡೌನ್ ರಿಲೀಫ್ ಆಗುವ ಸಾಧ್ಯತೆಗಳೂ ಇವೆ.

ಕಂಟೈನ್ಮೆಂಟ್ ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ಪೂರ್ಣ ಅವಧಿಗೆ ಆರ್ಥಿಕ ಚಟುವಟಿಕೆ ನಡೆಸಲು ಅವಕಾಶ ನೀಡಬಹುದು. ಬಸ್, ರೈಲು ಸಂಚಾರಕ್ಕೆ ಷರತ್ತು ಬದ್ಧ (ರಾಜ್ಯ ಸರ್ಕಾರಗಳ ಒಪ್ಪಿಗೆ ಮೇರೆಗೆ) ಅನುಮತಿ ನೀಡುವ ಸಾಧ್ಯತೆ ಇದೆ. ಮೇ17ರ ವೇಳೆಗೆ ದೇಶಿಯ ವಿಮಾನ ಹಾರಾಟ ಶುರು ಮಾಡಬಹುದು. ರೈಲ್ವೆ, ಬಸ್, ವಿಮಾನ ಪ್ರಯಾಣದ ವೇಳೆ ಫೇಸ್ ಮಾಸ್ಕ್ ಧರಿಸೋದು ಕಡ್ಡಾಯ ಮಾಡಬಹುದು. ಕಾರ್ಮಿಕರ ಪ್ರಮಾಣ ಶೇ.33 ನಿಂದ ಮತ್ತಷ್ಟು ಹೆಚ್ಚಿಸಿಕೊಂಡು ಕಾರ್ಯ ನಿರ್ವಹಿಸಲು ಉದ್ದಿಮೆ ಕೈಗಾರಿಕೆಗಳಿಗೆ ಅವಕಾಶ ನೀಡಬಹುದು.

ಕಂಟೈನ್ಮೆಂಟ್ ಪ್ರದೇಶ ಹೊರತುಪಡಿಸಿ ಎಲ್ಲ ಪ್ರದೇಶಗಳಿಗೆ ಎಲ್ಲ ರೀತಿಯ ಇ ಕಾಮರ್ಸ್ ಆರಂಭಿಸಲು ಅನುಮತಿ ನೀಡಬಹುದು. ರಾತ್ರಿ ವೇಳೆ ಇರುವ ನಿಷೇಧಾಜ್ಞೆಯನ್ನು ರದ್ದು ಮಾಡಬಹುದು. ಖಾಸಗಿ ವಾಹನಗಳಲ್ಲಿ ರಾಜ್ಯದಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ನೀಡಬಹುದು. ಅಲ್ಲದೆ ಅಂತರರಾಜ್ಯ ಪ್ರಯಾಣಕ್ಕೆ ಪಾಸ್ ಕಡ್ಡಾಯ ಮಾಡಬಹುದು.

ಯಾವುದೆಕ್ಕೆಲ್ಲ ನಿರ್ಬಂಧ ಮುಂದುವರಿಬಹುದು?
ಶಾಪಿಂಗ್ ಕಾಂಪ್ಲೆಕ್ಸ್, ಸ್ಪೋಟ್ರ್ಸ್ ಕಾಂಪ್ಲೆಕ್ಸ್, ಮಾಲ್, ಥಿಯೇಟರ್ ಬಂದ್ ಮುಂದುವರಿಸಬಹುದು. ದೇಗುಲ, ಜಾತ್ರೆ, ಸಂತೆ, ಉತ್ಸವ ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಬಹುದು. ಸರ್ಕಾರಿ, ಖಾಸಗಿ ಸಭೆ ಸಮಾರಂಭಗಳಿಗೆ ಅವಕಾಶ ಇರಲ್ಲ.

ಮೇ ಬಳಿಕವೇ ಶಾಲಾ-ಕಾಲೇಜು ಆರಂಭ ಆಗಬಹುದು. ಮೆಟ್ರೋ ರೈಲು ಓಡಾಟಕ್ಕೆ ಸದ್ಯಕ್ಕೆ ಅನುಮತಿ ಕಷ್ಟ ಸಾಧ್ಯ. ಹೋಟೆಲ್‍ಗಳ ಉದ್ಯಮಗಳಿಗೆ ಅನುಮತಿ ನೀರಾಕರಿಸಬಹುದು. ಮದುವೆ, ಸಮಾರಂಭಗಳಿಗೆ ಈಗಿರುವ ನಿರ್ಬಂಧ ಮುಂದುವರಿಕೆ ಸಾಧ್ಯತೆಗಳು ದಟ್ಟವಾಗಿವೆ.

Share This Article
Leave a Comment

Leave a Reply

Your email address will not be published. Required fields are marked *