ಮೂವರನ್ನ ತೆಗೆದ್ರೆ ಬಿಎಸ್‍ವೈ ರಾಜೀನಾಮೆ ಕೊಡಬೇಕಾಗುತ್ತೆ: ಯತ್ನಾಳ್

Public TV
1 Min Read

– ಸಿಪಿವೈ ಡಿಸಿಎಂ ಆಗಿ ಇಂಧನ ಸಚಿವರಾಗ್ತಾರೆ

ವಿಜಯಪುರ: ಸಿಎಂ ಯಡಿಯೂರಪ್ಪನವರಿಗೆ ಮೂವರನ್ನ ತೆಗೆಯುವ ಧೈರ್ಯವಿಲ್ಲ. ಒ0ದು ವೇಳೆ ಕೈ ಬಿಟ್ಟರೆ ಅವರೇ ರಾಜೀನಾಮೆ ನೀಡಬೇಕಾಗುತ್ತೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಮುಖ್ಯಮಂತ್ರಿಗಳು ಸಚಿವರಾದ ಸಿ.ಪಿ.ಯೋಗೇಶ್ವರ್, ಮುರುಗೇಶ್ ನಿರಾಣಿ ಮತ್ತು ಆಪ್ತ ಎನ್.ಆರ್.ಸಂತೋಷ್ ಈ ಮೂವರ ಕೈ ಬಿಡಲ್ಲ. ಸುತ್ತಲಿನ ಹೊಗಳು ಭಟ್ಟರೇ ಯಡಿಯೂರಪ್ಪನವರನ್ನ ರಾಜಕೀಯವಾಗಿ ಮುಗಿಸಲು ಮುಂದಾಗಿದ್ದು, ಮುಖ್ಯಮಂತ್ರಿಗಳಿಗೆ ಎದುರಿಗೆ ಇದ್ದವರೇ ವೈರಿಗಳೇ ಹೊರತು ನಾವಲ್ಲ. ಸಿ.ಪಿ.ಯೋಗೇಶ್ವರ್ ಪಕ್ಷದಿಂದ ಉಚ್ಛಾಟನೆ ಆಗಲ್ಲ. ಒಂದು ಯೋಗೇಶ್ವರ್ ಡಿಸಿಎಂ ಆಗಿ ಇಂಧನ ಸಚಿವರಾಗತ್ತಾರೆ. ಎರಡು ಯಡಿಯೂರಪ್ಪ ರಾಜೀನಾಮೆ ನೀಡಬಹುದು ಎಂದು ಹೇಳಿದರು. ಇದನ್ನೂ ಓದಿ: 65 ಶಾಸಕರ ಸಹಿ ಪತ್ರ ನನ್ನಲ್ಲಿದೆ, ಅಖಾಡಕ್ಕೆ ಬಾ: ಸಿಪಿವೈಗೆ ರೇಣುಕಾಚಾರ್ಯ ಪಂಥಾಹ್ವಾನ

ವಿಜಯೇಂದ್ರ ಎಲ್ಲ ಮಠಾಧೀಶರ ಚೇಲಾಗಳಿಗೆ ಹಣ ನೀಡಿದ್ದು, ಬಿಎಸ್‍ವೈ ತೆಗೆದ್ರೆ ರಾಜ್ಯದಲ್ಲಿ ಬಿಜೆಪಿ ನಾಶವಾಗುತ್ತೆ ಎಂದು ಹೇಳಿಸುತ್ತಿದ್ದಾನೆ. ಯಡ್ಡಿಯೂರಪ್ಪನವರಿಂದಲೇ ಬಿಜೆಪಿ ಅನ್ನೋ ಪ್ರಾಯೋಜಿತ ಹೇಳಿಕೆಗಳು ಹೊರ ಬರುವಂತೆ ನೋಡಿಕೊಳ್ಳಲಾಗುತ್ತಿದೆ. ನಕಲಿ ಸಾಮಾಜಿಕ ಜಾಲತಾಣಗಳ ಮೂಲಕ ಶಾಸಕ ಬೆಲ್ಲದ್ ಮತ್ತು ಬ್ರಾಹ್ಮಣ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಬರೆಯಲಾಗುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಬಿಎಸ್‍ವೈ ಬಿಟ್ಟರೆ ಬಿಜೆಪಿಯಲ್ಲಿ ಸ್ಟಾರ್ ಲೀಡರ್ ಯಾರಿದ್ದಾರೆ : ಎಂ.ಪಿ. ಕುಮಾರಸ್ವಾಮಿ

 

ನಾಯಕತ್ವ ಬದಲಾವಣೆ: ದೆಹಲಿಗೆ ನನ್ನ ವೈಯಕ್ತಿಕ ವಿಚಾರಕ್ಕೆ ಆಗಾಗ ಹೋಗುತ್ತಿರುತ್ತೇನೆ. ಪಕ್ಷದ ಚೌಕಟ್ಟಿನಲ್ಲಿ ನಾನು ವರಿಷ್ಠರ ಜೊತೆ ಚರ್ಚಿಸಿದ್ದೇನೆ. ನನಗೆ ಅಸಮಾಧಾನವಿದೆ, ಕೆಲವೊಂದು ನೋವುಗಳಿವೆ. ಹೀಗಾಗಿ ದೆಹಲಿಗೆ ಹೋಗಿದ್ದೇನೆ. ಆದರೆ ದೆಹಲಿಗೆ ಹೋಗಿದ್ರಲ್ಲಿ ತಪ್ಪೇನಿದೆ..? ಮುಂದೆ ಎಲ್ಲವೂ ಗೊತ್ತಾಗಲಿದೆ. ವರಿಷ್ಠರ ಮುಂದೆ ಏನ್ ಹೇಳಬೇಕೋ ಅದನ್ನು ಹೇಳಿದ್ದೀನಿ. ಮುಂದೆ ಎಲ್ಲವೂ ಬಹಿರಂಗವಾಗಲಿದೆ. ನನಗೆ ಕೆಲವೊಂದು ವಿಚಾರಗಳಲ್ಲಿ ಅಸಮಾಧಾನವಿದೆ. ಈ ವಿಚಾರ ತಿಳಿಸಲು ದೆಹಲಿಗೆ ಹೋಗಿದ್ದೇನೆ. ನಾನು ಹಸ್ತಕ್ಷೇಪ ಸಹಿಸಲ್ಲ. ಜವಾಬ್ದಾರಿ ಕೊಡದಿದ್ದರೂ ನನಗೆ ಬೇಸರವಿಲ್ಲ. ನನ್ನ ವಿರುದ್ಧ ಮಾತನಾಡುವವರಿಗೆ ಉತ್ತರಿಸುತ್ತೇನೆ ಎಂದು ನಾಯಕತ್ವ ಬದಲಾವಣೆಯನ್ನ ಸಚಿವ ಸಿ.ಪಿ.ಯೋಗೇಶ್ವರ್ ಒಪ್ಪಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *