ಮುನಿರತ್ನ ಈ ಕ್ಷೇತ್ರದ ಅಗಣ್ಯ ರತ್ನವಾಗಿದ್ದಾರೆ: ಬೊಮ್ಮಾಯಿ

Public TV
2 Min Read

– ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಬೆಂಗಳೂರು: ತೋಟಗಾರಿಕೆ ಹಾಗೂ ಯೋಜನಾ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರಾದ, ಮುನಿರತ್ನ ಅವರು ಪ್ರತಿನಿಧಿಸುವ ರಾಜರಾಜೇಶ್ವರಿನಗರ ಕ್ಷೇತ್ರದ ವಿವಿಧೆಡೆ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಯಶ್ವಂತಪುರದಲ್ಲಿ 20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನವೀಕೃತ ಹೈಟೆಕ್ ಕೋವಿಡ್ ಆಸ್ಪತ್ರೆಯನ್ನು ಸಿಎಂ ಉದ್ಘಾಟಿಸಿದರು.

ಮುನಿರತ್ನ ಸೇವಾ ಗುಣ ಮತ್ತು ಬದ್ಧತೆಯನ್ನು ಶ್ಲಾಘಿಸಿದ ಸಿಎಂ ಮುನಿರತ್ನ ಈ ಕ್ಷೇತ್ರದ ಅಗಣ್ಯ ರತ್ನವಾಗಿದ್ದಾರೆ. ಜನಪ್ರಿಯ ಶಾಸಕ, ಶಾಸಕರು ನಮಗೆ ಸಿಗುತ್ತಾರೆ. ಆದರೆ ಮುನಿರತ್ನ ಜನ ಉಪಯೋಗಿ ಸಚಿವರು ಆಗಿ ಕ್ಷೇತ್ರದ ಜನರಿಗೆ ಸಿಕ್ಕಿದ್ದಾರೆ. ಬೆಂಗಳೂರಿನ ಪ್ರಮುಖ ಯೋಜನೆಗಳನ್ನ ನಮ್ಮ ಸರ್ಕಾರ ಮಾಡುತ್ತದೆ. ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್‍ಎಸ್‍ಬಿಗೆ ಸೂಚನೆ ನೀಡಿದ್ದೇನೆ. ಗೊರಗುಂಟೆಪಾಳ್ಯ ಜಂಕ್ಷನ್, ಯಶವಂತಪುರ – ಗೊರಗುಂಟೆಪಾಳ್ಯ ಜಂಕ್ಷನ್ ಯೋಜನೆ ಆಗುತ್ತದೆ. ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶ ಸಿಗುತ್ತದೆ ಎಂದು ಬೊಮ್ಮಾಯಿ ಹೇಳಿದರು.

ಈ ವೇಳೆ ಮಾತನಾಡಿದ ಮುನಿರತ್ನ ಅವರು, ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಸಹಾಯ ಬೇಕಿದೆ ದಯವಿಟ್ಟು ಮಾಡಿ ಎಂದು ವೇದಿಕೆಯ ಮೇಲೆಯೇ ಸಿಎಂಗೆ ಮನವಿ ಮಾಡಿಕೊಂಡರು. ಗೊರಗುಂಟೆಪಾಳ್ಯ ಜಂಕ್ಷನ್ ಅಭಿವೃದ್ಧಿಗೂ ಮನವಿ ಮಾಡಿದ್ದು ಇದಕ್ಕೆ ಬೊಮ್ಮಾಯಿ ಸ್ಪಂದಿಸಿದ್ದಾರೆ.

 

ಮಲ್ಲತ್ತಹಳ್ಳಿ ಕೆರೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ಲಗ್ಗೆರೆಯಲ್ಲಿ ಡಾ.ರಾಜ್ ಕುಮಾರ್ ಉದ್ಯಾನವನ, ವಿಷ್ಣುವರ್ಧನ್ ಆಟದ ಮೈದಾನ, ಅಂಬರೀಶ್ ರಾಷ್ಟ್ರೀಯ ಈಜುಕೊಳ ಕಾಮಗಾರಿ, ಜಾಲಹಳ್ಳಿಯಲ್ಲಿ ಗ್ರೇಡ್ ಸಪರೇಟರ್, ಜಾಲಹಳ್ಳಿಯ ಶಾಲಾ ಕಟ್ಟಡ ಕಾಮಗಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಜೆಪಿ ಪಾರ್ಕ್‍ನಲ್ಲಿ ಬೊಮ್ಮಾಯಿ-ಮುನಿರತ್ನ, ಅಶ್ವಥ್‍ನಾರಾಯಣ್-ಡಿಕೆ ಸುರೇಶ್ ಡಬಲ್ಸ್ ಬ್ಯಾಡ್ಮಿಂಟನ್ ಆಡಿದ್ದಾರೆ. ಆರ್‍ಟಿಪಿಸಿಆರ್ ಟೆಸ್ಟ್ ಲ್ಯಾಬ್ ಕಟ್ಟಡ ಮುಖ್ಯಮಂತ್ರಿಗಳು ಉದ್ಘಾಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಸೋಮಣ್ಣ, ಬೈರತಿ ಬಸವರಾಜ್ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *