ಮಾಸ್ಕ್ ಹಾಕಿ ಕುತ್ಕೋ ಅಂದಿದ್ದಕ್ಕೆ KSRTC ನಿರ್ವಾಹಕನ ಹಲ್ಲು ಮುರಿದ ಯುವಕರು

Public TV
1 Min Read

ಚಿಕ್ಕಬಳ್ಳಾಪುರ: ಮಾಸ್ಕ್ ಹಾಕಿ ಕುತ್ಕೋ ಎಂದು ಹೇಳಿದ ಕೆಎಸ್‌ಆರ್‌ಟಿಸಿ  ಬಸ್ ನಿರ್ವಾಹಕನ ಮೇಲೆ ಇಬ್ಬರು ಪುಂಡ ಯುವಕರು ಹಲ್ಲೆ ನಡೆಸಿ ಆತನ ಹಲ್ಲು ಮುರಿದಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

ಮುಳುಬಾಗಿಲು ಡಿಪೋಗೆ ಸೇರಿದ ಕೆ ಎ07ಎಫ್ 1608 ಬಸ್ ಕೋಲಾರದಿಂದ ಚಿಕ್ಕಬಳ್ಳಾಪುರಕ್ಕೆ ಬರುವಾಗ ಚಿಕ್ಕಬಳ್ಳಾಪುರ ನಗರ ಹೊರವಲಯದ ಚದಲಪುರ ಬಳಿ ಇಬ್ಬರು ಯುವಕರು ಬಸ್ ಹತ್ತಿದ್ದಾರೆ. ಇಬ್ಬರು ಯುವಕರಲ್ಲಿ ಒರ್ವ ಬಸ್‍ನ ಡೋರ್ ಬಳಿಯೇ ನಿಂತು ಗುಟ್ಕಾ ಜಗಿಯುತ್ತಿದ್ದನು. ಕಿಟಕಿಯಿಂದ ಹೊರಗೆ ಎಂಜಲು ಉಗಿಯುತ್ತಿದ್ದ. ಇದನ್ನ ಕಂಡ ನಿರ್ವಾಹಕ ಮುನಿಕೃಷ್ಣಪ್ಪ ಎಂಬಾತ ಡೋರ್ ಬಳಿ ನಿಲ್ಲಬಾರದು ಸೀಟು ಖಾಲಿ ಇದೆ ಕುತ್ಕೊಳ್ಳಿ, ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಈ ರೀತಿ ಉಗಿಯಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ:  SSLC ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ವಿತರಣೆ

ಈ ವೇಳೆ ಯುವಕರಿಬ್ಬರು ನಿರ್ವಾಹಕನ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಟಿಫನ್ ಬಾಕ್ಸ್ ಮೂಲಕ ನಿರ್ವಾಹಕನ ಮುನಿಕೃಷ್ಣಪ್ಪ ಮುಖ ಮೂತಿಗೆ ಜೋರಾಗಿ ಹೊಡೆದಿದ್ದಾರೆ. ಪರಿಣಾಮ ಮುನಿಕೃಷ್ಣಪ್ಪನ ಹಲ್ಲು ಮುರಿದಿದೆ. ಬಸ್ ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ಇಬ್ಬರು ಯುವಕರನ್ನ ಹಿಡಿದ ಸಾರ್ವಜನಿಕರು ಹಾಗೂ ಕೆಎಸ್‌ಆರ್‌ಟಿಸಿ  ಇತರೆ ಸಿಬ್ಬಂದಿ ಇಬ್ಬರು ಯುವಕರನ್ನ ಪೊಲೀಸರಿಗೆ ಒಪ್ಪಿಸಿಲು ಮುಂದಾಗಿದ್ದಾರೆ. ಇದನ್ನೂ ಓದಿ:  ಗುಜರಾತಿನ ಡೊಲೆರೋ ಸಿಟಿ ಮಾಡಲ್ ಕರ್ನಾಟಕಕ್ಕೆ ಬೇಡ – ಶೆಟ್ಟರ್ ವಿರುದ್ಧ ಹೆಚ್‍ಡಿಕೆ ಕಿಡಿ

ಒರ್ವ ಯುವಕ ತಪ್ಪಿಸಿಕೊಂಡು ಪರಾರಿಯಾಗಿದ್ದು, ಮತ್ತೋರ್ವ ಯುವಕ ಚೀರಂಜೀವಿ ಎಂಬಾತನನ್ನ ಚಿಕ್ಕಬಳ್ಳಾಪುರ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಗಾಯಾಳು ಮುನಿಕೃಷ್ಣನನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *