ಮಾಸ್ಕ್ ಧರಿಸದವರಿಗೆ ದಂಡ – ಬೆಳ್ಳಂಬೆಳ್ಳಗೆ ಫೀಲ್ಡ್‌ಗಿಳಿದ ಪೊಲೀಸರು

Public TV
1 Min Read

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಭೀತಿಯನ್ನು ಕಡಿಮೆ ಮಾಡಲು ಸರ್ಕಾರ ಮಾಸ್ಕ್ ಕಡ್ಡಾಯಗೊಳಿಸಿದೆ. ಮಾಸ್ಕ್ ಹಾಕದೇ ಇರುವವರಿಗೆ ದಂಡ ವಿಧಿಸಲು ಪೊಲೀಸರು ಮುಂದಾಗಿದೆ.

ರಾಜ್ಯದಲ್ಲಿ ಮಹಾಮಾರಿ ಕೊರೊನಾ ಎರಡನೇ ಅಲೆ ತಾಂಡವವಾಡುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ ಸಹ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದೇ ಎಂದಿನಂತೆ ಓಡಾಡುವ ಜನರಿಗೆ ಬೆಳ್ಳಂಬೆಳ್ಳಗೆ ಫೀಲ್ಡ್‍ಗೆ ಇಳಿದ ಪೊಲೀಸರು ದಂಡ ಹಾಕುತ್ತಿದ್ದಾರೆ.

ಕುಶಾಲನಗರ ಬಸ್ಸು ನಿಲ್ದಾಣದ ಬಳಿ ರಸ್ತೆಯಲ್ಲಿ ಹೋಗುವ ಸಾರ್ವಜನಿಕರು ಮಾಸ್ಕ್ ಧರಿಸದೆ ಒಡಾಡುತ್ತಿದ್ದರು. ಎಂದಿನಂತೆ ಓಡಾಡುವ ಜನರ ಮೇಲೆ ಇದೀಗ ಕೊಡಗಿನ ಕುಶಾಲನಗರದ ಪೊಲೀಸರು ದಂಡ 100 ರೂ ಹಾಕುತ್ತಿದ್ದಾರೆ. ಕುಶಾಲನಗರದ ಡಿವೈ ಎಸ್ ಪಿ ಶೈಲೇಂದ್ರ ಕುಮಾರ್ ಕುಶಾಲನಗರ ಗ್ರಾಮಾಂತರ ಠಾಣೆಯ ಆಧಿಕಾರಿ ಮಹೇಶ್ ದೇವರು ಮತ್ತು ಸಿಬ್ಬಂದಿ ದಂಡ ಹಾಕುತ್ತಿದ್ದಾರೆ.

ಕೆಲ ಜನರು ಪೊಲೀಸರ ಜೊತೆ ವಾಗ್ವಾದ ಮಾಡುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿದೆ. ಮಾಹಾಮಾರಿ ಕೊರೊನಾ ಪ್ರಕರಣಗಳು ದಿನ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ 16 ಕೊವೀಡ್ ಪ್ರಕರಣಗಳು ದಾಖಲು ಅಗಿದೆ. ಜಿಲ್ಲೆಯಲ್ಲಿ ಇದುವರೆಗೂ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 6,333 ಆಗಿದ್ದು, 6,172 ಮಂದಿ ಗುಣಮುಖರಾಗಿದ್ದಾರೆ. 79 ಸಕ್ರಿಯ ಪ್ರಕರಣಗಳಿದ್ದು, 82 ಮರಣ ಪ್ರಕರಣಗಳು ವರದಿಯಾಗಿದೆ.

ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 53 ಆಗಿದೆ ಅದರೂ ಸಾರ್ವಜನಿಕರು ಮಾತ್ರ ಇದರ ಬಗ್ಗೆ ತಲೆಕೇಡಿಸಿಕೊಳ್ಳದೆ ಎಂದಿನಂತೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *