ಮಾವನ ವಿರುದ್ಧ ತಿರುಗಿ ಬಿದ್ದ ಅಳಿಯ

Public TV
1 Min Read

ಬಿಗ್‍ಬಾಸ್ ಮನೆಯಲ್ಲಿ ಇಷ್ಟು ದಿನಗಳ ಚೆನ್ನಾಗಿದ್ದ ಮಾವ-ಅಳಿಯನ ಮಧ್ಯೆ ಜಗಳ ಶುರುವಾಗಿದೆ. ಮಾವ, ಅಳಿಯ ಎಂದು ಕರೆದುಕೊಳ್ಳುತ್ತಿದ್ದ ಅವರು ಏನು.. ಏನು ಎಂದು ಮಾತಿಗೆ ಮಾತು ಬೆಳಸುವಷ್ಟರಮಟ್ಟಿಗೆ ಕಿತ್ತಾಡಿಕೊಂಡಿದ್ದಾರೆ.

ಚದುರಂಗದ ಆಟದಲ್ಲಿ ಬಿಗ್‍ಬಾಸ್ ಕೆಲವು ನಿಯಮಗಳನ್ನು ಹಾಕಿದ್ದಾರೆ. ಈ ನಿಯಮವನ್ನು 2 ಗುಂಪಿನ ತಂಡದ ಸದಸ್ಯರು ಪಾಲಿಸಬೇಕು. ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎನ್ನುವ ಕುರಿತಾಗಿ ಮಂಜು ಪಾವಗಡ ಮತ್ತು ಪ್ರಶಾಂತ್ ಸಂಬರ್ಗಿಯ ಮಧ್ಯೆ ಜಗಳವಾಗಿದೆ.

 ಮನೆಯಲ್ಲಿ ಚದುರಂಗದ ಆಟ ನಡೆಯುತ್ತಿದೆ. ಈ ಆಟದಲ್ಲಿ ಕೆಲವು ನಿಯಮಗಳನ್ನು ಬಿಗ್‍ಬಾಸ್ ಹಾಕಿದ್ದಾರೆ. ಒಬ್ಬ ಸ್ಪರ್ಧಿ ತಮ್ಮ ಆಟವನ್ನು ಮಗಿಸಿ ಬಿಗ್‍ಬಾಸ್ ಹೇಳುವವರೆಗೂ ಮನೆಯಿಂದ ಸ್ಪರ್ಧಿಗಳು ಹೊರಗೆ ಬರುವಂತಿಲ್ಲ. ಆದರೆ ಸಂಬರ್ಗಿ ಹೊರಗೆ ಬಂದಿದ್ದಾರೆ. ಮಾವ ನೀನು ಅವರು ಹೇಳುವ ಮೊದಲೆ ಯಾಕೆ ಹೊರಗೆ ಬರುತ್ತಿಯಾ ಪೌಲ್ ಎಂದು ಹೇಳಿದ್ದರೆ ಏನು ಮಾಡುತ್ತಿದ್ದೆ? ಎಂದ ಮಂಜು ಅವರದ್ದೇ ಗುಂಪಿನ ಸದಸ್ಯನಾಗಿರುವ ಸಬಂರ್ಗಿಗೆ ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಚದುರಂಗದ ಆಟದಲ್ಲಿ ಸೋತು ಸಂಬರ್ಗಿ ಆಟದಿಂದ ಹೊರೆ ಇದ್ದಾರೆ. ಚಂದ್ರಕಲಾ ಮೋಹನ್ ನೀಡಿದ್ದ ಸವಾಲನ್ನು ಸ್ವೀಕರಿಸಿದ ಅರವಿಂದ್ ಆಟವನ್ನು ಪೂರ್ತಿ ಮಾಡಿದ್ದಾರೆ. ಈ ವೇಳೆ ಪ್ರಶಾಂತ್ ಅರವಿಂದ್ ಅವರಿಗೆ ಶುಭಕೋರಲು ಹೊರಗೆ ಬಂದಿದ್ದಾರೆ. ಈ ವೇಳೆ ರೂಲ್ಸ್ ಬ್ರೇಕ್ ಮಾಡಿರುವ ಕುರಿತಾಗಿ ಮನೆಯಲ್ಲಿ ಜಗಳವಾಗಿದೆ.

ನಿನಗೆ ಮಾತ್ರ ಅಲ್ಲ ನನಗೂ ಜವಾಬ್ದಾರಿ ಇದೆ. ನಿನಗೆ ಒಬ್ಬನಿಗೆ ಬುದ್ದಿವಂತಿಕೆ ಇಲ್ಲ. ನೀನು ಯಾಕೆ ಆಚೆ ಬಂದೆ. ಸರಿ ಇರಲ್ಲ ಹೇಳುತ್ತಿದ್ದೇನೆ ಎಂದು ಸಂಬರ್ಗಿ ಮಂಜುಗೆ ಅವಾಜ್ ಹಾಕಿದ್ದಾರೆ. ಮಂಜು ಮಾತ್ರ ರೂಲ್ಸ್ ವಿಚಾರವಾಗಿ ಮೊದಲು ನಿಧಾನವಾಗಿ ಹೇಳಿದ್ದರು ಆದರೆ ಇಬ್ಬರ ನಡುವೆ ಮಾತಿಗೆ ಮಾತು ಬೆಳದಿದೆ. ಈ ವೇಳೆ ಮನೆಯ ಕ್ಯಾಪ್ಟನ್ ಅರವಿಂದ್ ಮಧ್ಯ ಪ್ರವೇಶಿಸಿ ಇಬ್ಬರ ಜಗಳವನ್ನು ತಡೆದಿದ್ದಾರೆ. ಇಂದು ಪ್ರಸಾರವಾಗಲಿರುವ ಎಪಿಸೋಡ್‍ನಲ್ಲಿ ಈ ಕುರಿತಾಗಿ ಎನೆಲ್ಲಾ ಡ್ರಾಮಾ ನಡೆಯಲಿದೆ ಎಂಬುದನ್ನು ಕಾದು ನೋಡ ಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *