ಮಾರಾಟಕ್ಕೆಂದು ಅಪಹರಣಕ್ಕೊಳಗಾಗಿದ್ದ 3 ವರ್ಷದ ಬಾಲಕನ ರಕ್ಷಣೆ

Public TV
1 Min Read

– ಪೊಲೀಸರಲ್ಲಿ ಆರೋಪಿ ಹೇಳಿದ್ದೇನು..?

ಹೈದರಾಬಾದ್: ಅಪಹರಣಗೊಂಡು ಮಹಾರಾಷ್ಟ್ರದ ಮನೆಯೊಂದರಲ್ಲಿ ತಂಗಿದ್ದ 3 ವರ್ಷದ ಬಾಲಕನ್ನು ಹೈದರಾಬಾದ್ ಪೊಲೀಸರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತಂತೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹೈದರಾಬಾದ್ ನಗರದ ಹಿರಿಯ ಪೊಲೀಸ್ ಅಧಿಕಾರಿ ಅಂಜನಿ ಕುಮಾರ್, ಎರಡು ಪೊಲೀಸ್ ತಂಡ ಫೆಬ್ರವರಿ 18ರಂದು ಮಹಾರಾಷ್ಟ್ರದ ಅಮಾನ್ವಾಡಿ ಗ್ರಾಮಕ್ಕೆ ತಲುಪಿ ಆರೋಪಿಯನ್ನು ಬಂಧಿಸಿದೆ ಎಂದು ತಿಳಿಸಿದರು.

ಆರೋಪಿಯನ್ನು ಶ್ಯಾಮ್ ಭೀಮ್ ರಾವ್ ಸೋಲಂಕಿ ಎಂದು ಗುರುತಿಸಲಾಗಿದ್ದು, ಈತ ಮಹಾರಷ್ಟ್ರ ಮೂಲದವನಾಗಿದ್ದಾನೆ. ಬಾಲಕನ ಅಪಹರಣ ಕುರಿತಂತೆ ಎಂ ಶಿವಕುಮಾರ್ ಎಂಬವರು ದೂರು ದಾಖಲಿಸಿದ್ದು, ಬಾಲಕನ ತಂದೆ ರುದ್ರಮಣಿ ಎಂಬವರು ತಮ್ಮ ಮಗನನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಕರಣ ಕುರಿತಂತೆ ಆರೋಪಿಗಳ ಪತ್ತೆಗಾಗಿ ಎರಡು ಪೊಲೀಸ್ ವಿಶೇಷ ತಂಡವನ್ನು ರಚಿಸಲಾಯಿತು ಹಾಗೂ ವಿಚಾರಣೆ ವೇಳೆ ಆರೋಪಿ ಬಾಲಕನನ್ನು ಮಹಾರಾಷ್ಟ್ರದಲ್ಲಿ ಮಾರಾಟ ಮಾಡುವ ಸಲುವಾಗಿ ಕಿಡ್ನಾಪ್ ಮಾಡಿದ್ದಾನೆ ಎಂಬ ಸತ್ಯ ಬಹಿರಂಗಗೊಂಡಿದೆ ಎಂದರು.

ಬಾಲಕನ ತಂದೆ ರುದ್ರಮಣಿ ಪತ್ನಿ ಮತ್ತು ಅವರ ಮಕ್ಕಳೊಂದಿಗೆ ಕೆಲಸಕ್ಕಾಗಿ ಕರ್ನಾಟಕದಿಂದ ಇಲ್ಲಿಗೆ ಬಂದು 4 ದಿನಗಳಿಂದ ಫುಟ್‍ಪಾತ್‍ನಲ್ಲಿ ನೆಲೆಸಿದ್ದರು. ಈ ವೇಳೆ ಮುಂಬೈನಿಂದ ಬಂದಿದ್ದ ಶ್ಯಾಮ್ ಭೀಮ್ ರಾವ್ ಸೋಲಂಕಿ ಆರೋಪಿ ರಾಜು ಎಂಬ ಹೆಸರಿನಿಂದ ಗುರುತಿಸಿಕೊಂಡು ಬಾಲಕನ ಕುಟುಂಬಸ್ಥರೊಂದಿಗೆ ಪರಿಚಯ ಮಾಡಿಕೊಂಡಿದ್ದಾನೆ. ಸರಿಯಾದ ಸಮಯ ನೋಡಿಕೊಂಡು ಬಾಲಕನನ್ನು ಅಪಹರಿಸಿ ಮಹಾರಾಷ್ಟ್ರದಲ್ಲಿ ಮಾರಲು ಯತ್ನಿಸಿದ್ದಾನೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *