ಮಾನಸಿಕ ಅಸ್ವಸ್ಥೆ ವೃದ್ಧೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದವರು ಅರೆಸ್ಟ್

Public TV
1 Min Read

ಕೋಲಾರ: ಬಸ್ ನಿಲ್ದಾಣದಲ್ಲಿ ಮಲಗಿದ್ದ ಮಾನಸಿಕ ಅಸ್ವಸ್ಥೆ ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣರಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಶ್ರೀರಾಂ ಮತ್ತು ಸೈಯದ್ ಅರ್ಬಾಜ್ ಎಂದು ಗುರುತಿಸಲಾಗಿದೆ. ಇವರಿಬ್ಬರು ನಿನ್ನೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಬೆಟ್ಕೂರು ತಂಗುದಾಣದಲ್ಲಿದ್ದ ಮಾನಸಿಕ ಅಸ್ವಸ್ಥೆ ವೃದ್ಧೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದರು.

ಮಾನಸಿಕ ಅಸ್ವಸ್ಥಗೊಂಡಿರುವ ವೃದ್ಧೆ ನಿಲ್ದಾಣದಲ್ಲಿ ಮಲಗಿದ್ದರು. ಈ ವೇಳೆ ಯುವಕನೊಬ್ಬ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ತಂಗುದಾಣದಲ್ಲಿ ಏನೋ ಶಬ್ದವಾಗುತ್ತಿರುವುದನ್ನ ಗಮನಿಸಿದ ಸ್ಥಳೀಯರು, ಯುವಕನ ಕಾಮ ಕೃತ್ಯವನ್ನ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಈ ವೇಳೆ ಸ್ಥಳೀಯರನ್ನ ಕಂಡು ಪ್ಯಾಂಟ್ ಹಾಕಿಕೊಳ್ಳದೆ ಆರೋಪಿ ಆಟೋದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸಿನಿಮಾ ಅಥವಾ ಜಾಹೀರಾತಿಗೆ ಸಂಬಂಧಿಸಿದ ಪೋಸ್ಟರ್ ಅಂಟಿಸಲು ಅಪರಿಚಿತ ಆಟೋವೊಂದರಲ್ಲಿ ಬಂದಿದ್ದಾನೆ. ಯುವಕನಿಗೆ ಆಟೋ ಚಾಲಕ ಕೂಡ ಸಾಥ್ ನೀಡಿದ್ದು, ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ಈ ಸಂಬಂಧ ಸುದ್ದಿ ಬಿತ್ತರಗೊಂಡ ನಂತರ ಎಚ್ಚೆತ್ತ ಪೊಲೀಸ್ ಇಲಾಖೆ ಅರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇತ್ತ ಮಾನಸಿಕ ಅಸ್ವಸ್ಥ ವೃದ್ಧೆಯನ್ನು ಬೇತಮಂಗಲದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *