ಮಾನವೀಯತೆಯ ಗೆಲುವು-ಕಂಗನಾ ರಣಾವತ್ ಮೊದಲ ಪ್ರತಿಕ್ರಿಯೆ

Public TV
2 Min Read

-ನನ್ನ ಧ್ವನಿ ಅಡಗಿಸೋ ಪ್ರಯತ್ನ ನಡೆದಿತ್ತು

ಮುಂಬೈ: ಸುಪ್ರೀಂಕೋರ್ಟ್ ಸುಶಾಂತ್ ಸಿಂಗ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದ್ದು, ಬಾಲಿವುಡ್ ಕ್ವೀನ್, ನಟಿ ಕಂಗನಾ ರಣಾವತ್ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಮಾನವೀಯತೆ ಗೆಲುವು ಇದಾಗಿದ್ದು, ಸುಶಾಂತ್ ಸಿಂಗ್ ಯೋಧರಿಗೆ ಧನ್ಯವಾದಗಳು. ಮೊದಲ ಬಾರಿಗೆ ಒಗ್ಗಟ್ಟಿನ ಶಕ್ತಿಯ ಗೆಲುವಿನ ಅನುಭವವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಕಂಗನಾ ರಣಾವತ್,ಬಾಲಿವುಡ್ ನಲ್ಲಿಯ ಸ್ವಜನಪಕ್ಷಪಾತದಿಂದಾಗಿ ಸುಶಾಂತ್ ನಮ್ಮೊಂದಿಗೆ ಇಲ್ಲ. ಸುಶಾಂತ್ ಪ್ರಕರಣದ ಬಗ್ಗೆ ನಾನು ಪ್ರಶ್ನಿಸಿದಾಗ ನನ್ನ ಧ್ವನಿ ಅಡಗಿಸುವ ಎಲ್ಲ ಪ್ರಯತ್ನಗಳು ನಡೆದವು. ಮನೆಯ ಸುತ್ತಮುತ್ತ ಗುಂಡು ಹಾರಿಸುವ ಮೂಲಕ ನನ್ನ ಹಾಗೂ ಕುಟುಂಬಸ್ಥರನ್ನ ಹೆದರಿಸುವ ಕೆಲಸ ಮಾಡಲಾಯ್ತು. ನನ್ನ ಮನೆಯ ಕಿಟಕಿ ಅಥವಾ ವಸ್ತುಗಳಿಗೆ ಗುಂಡು ಹಾರಿಸಿರಲಿಲ್ಲ. ಯಾವುದೇ ಸಾಕ್ಷಿ ಸಿಗದಂತೆ ಗಾಳಿಯಲ್ಲಿ ಗುಂಡು ಹಾರಿಸಿದ್ದರು ಎಂದು ಹೇಳಿದರು. ಇದನ್ನೂ ಓದಿ: ಸುಶಾಂತ್ ಪ್ರಕರಣದ ತನಿಖೆ ಸಿಬಿಐಗೆ ವರ್ಗಾವಣೆ- ಅಂಕಿತಾ ಲೋಖಂಡೆ ಪ್ರತಿಕ್ರಿಯೆ

ಕೆಲವರು ನನ್ನ ಸಿನಿಮಾಗಳಿಂದ ದೂರವಿಡಲು ಪ್ರಯತ್ನಗಳು ನಡೆದಿವೆ. ಕೆಲ ಪಕ್ಷಗಳು ನನ್ನನ್ನು ರಾಜಕೀಯಕ್ಕೆ ಆಹ್ವಾನಿಸುವ ಮೂಲಕ ಸುಶಾಂತ್ ಪ್ರಕರಣದಿಂದ ಹಿಂದೆ ಸರಿಯುವಂತೆ ಆಮಿಷ ಒಡ್ಡಿವೆ. ಆದ್ರೆ ದೇಶದ ಜನತೆ ಸುಶಾಂತ್ ಗೆ ನ್ಯಾಯ ಸಿಗಬೇಕೆಂದು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಬಾಲುವುಡ್ ನಲ್ಲಿಯ ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿದಾಗ ಸುಶಾಂತ್ ನನಗೆ ಸಾಥ್ ನೀಡಿದ್ದರು. ನನ್ನ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಯ್ತು. ತನ್ನ ಬೆಳವಣಿಗೆಗೆ ಸ್ವಜನಪಕ್ಷಪಾತ ಅಡ್ಡಿಯಾಗಿದೆ ಎಂದು ಸುಶಾಂತ್ ಹೇಳಿಕೊಂಡಿದ್ದರು. ಅಂದಿನಿಂದ ಸುಶಾಂತ್ ಸಿನಿಮಾಗಳಿಂದ ವಂಚಿತರಾದರು ಎಂದು ತಿಳಿಸಿದರು. ಇದನ್ನೂ ಓದಿ: ದೇವರಿಗೆ ಧನ್ಯವಾದಗಳು, ಸತ್ಯದ ಕಡೆ ಮೊದಲ ಹೆಜ್ಜೆ – ಸುಶಾಂತ್ ಸಿಂಗ್ ಸೋದರಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ತನಿಖೆಯನ್ನು ಸಿಬಿಐಗೆ ಹಸ್ತಾರಿಸುವಂತೆ ಮುಂಬೈ ಪೊಲೀಸರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಮಾಜಿ ಗೆಳತಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹೃಷಿಕೇಶ್ ನೇತೃತ್ವದ ಏಕ ಸದಸ್ಯ ಪೀಠ ಅರ್ಜಿ ವಜಾಗೊಳಿಸಿ ಈ ಮಹತ್ವದ ತೀರ್ಪು ನೀಡಿದೆ. ಕಳೆದ ಒಂದು ತಿಂಗಳಿನಿಂದ ಯಾವ ರಾಜ್ಯದ ಪೊಲೀಸರು ಸಾವಿನ ಪ್ರಕರಣದ ತನಿಖೆ ಯಾರು ನಡೆಸಬೇಕು ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್‌ ಈಗ ಮಹತ್ವದ ಆದೇಶವನ್ನು ಪ್ರಕಟಿಸುವ ಮೂಲಕ ಪೂರ್ಣವಿರಾಮ ಹಾಕಿದೆ. ಇದನ್ನೂ ಓದಿ:  ಸುಶಾಂತ್ ಖಾತೆಯಿಂದ ರಿಯಾ ಅಕೌಂಟ್‍ಗೆ ಹೋಗಿದ್ದ ಹಣ ಪತ್ತೆ ಹಚ್ಚಿದ ಇಡಿ

Share This Article
Leave a Comment

Leave a Reply

Your email address will not be published. Required fields are marked *