ಮಾಜಿ ಸಿಎಂ ಹೆಚ್‍ಡಿಕೆ ಪ್ರತಿಯೊಂದು ಕೆಲಸದಲ್ಲಿ ಡೀಲ್ ಮಾಡುವ ಮಾಸ್ಟರ್: ಸುಮಲತಾ ಅಂಬರೀಶ್

Public TV
3 Min Read

– ಭ್ರಷ್ಟಾಚಾರದ ಬ್ರಾಂಡ್ ಅಂಬಾಸಿಡರ್, ಚೈಲ್ಡಿಶ್ ರೀತಿಯ ಮಾತು

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರೇ ಭ್ರಷ್ಟಾಚಾರದ ಬ್ರಾಂಡ್ ಅಂಬಾಸಿಡರ್. ಡೀಲ್ ಗಳ ಮಾಸ್ಟರ್ ಯಾರು ಅನ್ನೋದು ರಾಜ್ಯದ ಜನತೆ ಗೊತ್ತಿದೆ ಎಂದು ಹೇಳುವ ಮಾಜಿ ಸಿಎಂ ವಿರುದ್ಧ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುಮಲತಾ ಅಂಬರೀಶ್, ನನ್ನ ಮಂಡ್ಯ ಕಾರ್ಯಕ್ರಮ ಮೊದಲೇ ನಿಗದಿ ಆಗಿತ್ತು. ಶ್ರೀರಂಗ ಪಟ್ಟಣಕ್ಕೆ ಹೋಗುತ್ತೇನೆ, ಒಟ್ಟು ಮೂರು ಕಡೆ ಅಕ್ರಮ ಗಣಿಗಾರಿಕೆಯ ಪರಿಶೀಲನೆಗೆ ಹೋಗುತ್ತಿದ್ದೇನೆ. ಅಕ್ರಮ ಗಣಿಗಾರಿಕೆ ಸೀಜ್ ಆಗಿದೆ, ಬೇಬಿ ಬೆಟ್ಟಕ್ಕೆ ಸಹಾ ಭೇಟಿ ಕೊಡುತ್ತಿದ್ದೇನೆ. ನಾನು ಯಾರ ಮೇಲು ಆರೋಪ ಮಾಡ್ತಿಲ್ಲ. ಈ ಹಿಂದೆಯೇ ಕೆಆರ್‍ಎಸ್ ಬಿರುಕಿನ ಸಮಸ್ಯೆ ಆಗಿತ್ತು ಅದು ಮತ್ತೆ ಆಗಬಾರದು ಅಲ್ಲಿ ಬ್ಲಾಸ್ಟ್ ಆಗಬಾರದು ಅಂತ ಅದನ್ನು ತಡಿಬೇಕು ಅನ್ನೋದು. ಅದು ಲೋ ಅರ್ಥ್ ಕ್ವಿಕ್ ಝೋನ್. ಈ ಹಿಂದೆ ಶೇ.2.5 ನಷ್ಟು ಪ್ರಮಾಣದಲ್ಲಿ ಭೂಮಿ ನಡುಗಿತ್ತು. ಅದು ಶೇ.6.5 ರಷ್ಟು ಆದರೆ ಆಗುವ ಅಪಾಯ ದೊಡ್ಡದು ಎಂದು ಆತಂಕ ವ್ಯಕ್ತಪಡಿಸಿದರು.

ಅಲ್ಲಿ ರಾತ್ರಿ ಯುವಕರು ಕೆಆರ್‍ಎಸ್ ಒಳಗೆ ಹೋಗಿ ಪಾರ್ಟಿ ಮಾಡಿದ ಘಟನೆಯು ನಡೆದಿದೆ. ಓರ್ವ ಸಂಸದೆಯಾಗಿ ನನ್ನ ಕೆಲಸ ನಾನು ಮಾಡುತ್ತೇನೆ. ಒಂದು ಕಡೆ ಅಕ್ರಮ ನಡೆಯುವಾಗ ಅದರ ವಿರುದ್ಧ ಧ್ವನಿ ಎತ್ತಬೇಕು ಎಂದು ಅಧಿಕಾರಿಗಳಿಗೆ ಸೂಚಿಸಬೇಕು. ಆದರೆ ಇವರು ಅಕ್ರಮದ ಪರ ನಿಲ್ಲುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ರಾಜಧನ ಸರ್ಕಾರಕ್ಕೆ ಬರುವುದು ತಪ್ಪಿ ಹೋಗ್ತಿದೆ. ಇದರಿಂದ ಜಿಲ್ಲೆಗೆ ಬರುವ ಆದಾಯ ಬರುತ್ತಿಲ್ಲ ನಿಂತು ಹೋಗಿದೆ.

ಸ್ಥಳೀಯ ಜೆಡಿಎಸ್ ಶಾಸಕರುಗಳು ಕಳೆದ ಎರಡು ವರ್ಷದಿಂದ ನಾನು ಏನು ಮಾಡಿದರೂ ಅದನ್ನು ವಿರೋಧ ಮಾಡಿಕೊಂಡು ಬಂದಿದ್ದಾರೆ. ಅವರಿಂದ ಸಹಕಾರವನ್ನ ಬಯಸುವುದು ಕನಸಿನ ಮಾತು. ಯಾರಾದರೂ ಒಳ್ಳೆ ಕೆಲಸ ಮಾಡಿದರೆ ಅದನ್ನ ತಿರುಚುವ ಕೆಲಸ ಮಾಡುತ್ತಿದ್ದಾರೆ. ಕೊರೊನದ ಸಂದರ್ಭದಲ್ಲಿ ಆಕ್ಸಿಜನ್ ಹಾಗೂ ಐಸಿಯು ಅಂಬ್ಯುಲೆನ್ಸ್ ನಾನು ಪರ್ಸನಲ್ ಆಗಿ ಕೊಡಿಸಿದ್ದೇನೆ. ಒಂದೊಂದು ಜೀವಕ್ಕೂ ಬೆಲೆ ಇಲ್ವಾ? ಅವರು ಎಲ್ಲವನ್ನು ತಿರುಚಿ ತಿರುಗಿಸಿ ಹೇಳ್ತಾರೆ. ಕಳೆದ ಲೋಕ ಸಭೆ ಚುನಾವಣೆ ಸೋಲು ಇದುವರೆಗೆ ಡೈಜೆಸ್ಟ್ ಮಾಡಿಕೊಳ್ಳೋಕೆ ಅವರಿಗೆ ಆಗಿಲ್ಲ. ಈ ಬೆಳವಣಿಗೆಯೆ ಅದಕ್ಕೆಲ್ಲಾ ದೊಡ್ಡ ಕಾರಣ. ಅವರು ಮಂಡ್ಯಕ್ಕೆ ಬಂದಾಗಲೆಲ್ಲಾ ಆ ನೋವನ್ನು ಹೊರ ಹಾಕ್ತಿದಾರೆ. ಆದರೆ ಜನ ಒಂದು ಸರಿ ತೀರ್ಪು ಕೊಟ್ಟ ನಂತರ ಅದನ್ನ ಒಪ್ಪಿಕೊಳ್ಳಬೇಕು. ಮುಂದಿನ ಬಾರಿ ಪ್ರಯತ್ನ ಪಡೋಣ ಅನ್ನಬೇಕು ಎರೆಡು ಬಾರಿ ಸಿಎಂ ಆದವರು ಅದನ್ನ ಸ್ವೀಕರಿಸಬೇಕು ಹೊರತು ಈ ರೀತಿಯ ಚೈಲ್ಡಿಶ್ ಹೇಳಿಕೆ ಅವರಿಗೆ ಶೋಭೆ ತರಲ್ಲ ಎಂದರು. ಇದನ್ನೂ ಓದಿ: ಹೆಣ್ಣಿನ ಬಗ್ಗೆ ಹೇಗೆ ಮಾತಾಡ್ಬೇಕು ಅಂತ ಮಾಜಿ ಸಿಎಂ ಅರ್ಥ ಮಾಡಿಕೊಳ್ಳಬೇಕು: ಸುಮಲತಾ ಕಿಡಿ

ಡೀಲ್ ಗಳಲ್ಲಿ ಮಾಸ್ಟರ್ ಯಾರು ಅಂತ ಕರ್ನಾಟಕದ ಜನರಿಗೆ ಗೊತ್ತು. ನಾನು ಜಾಸ್ತಿ ಮಾತನಾಡಿದರೆ ಅವರಿಗೆ ಹೇಸಿಗೆ ಆಗುತ್ತೆ. ಡೀಲ್ ಅವರಿಗೆ ಪ್ರಧಾನ ಅಜೆಂಡ ರೀತಿ ಆಗಿದೆ. ಪ್ರತಿ ಒಂದು ಕೆಲಸದಲ್ಲೂ ಡೀಲ್ ಮಾಡ್ತಾರೆ. ಆಡಿಯೋ, ವೀಡಿಯೋ ಏನೇ ಇದ್ರೂ ರಿಲೀಸ್ ಮಾಡಲಿ ಅದನ್ನ ಫೇಸ್ ಮಾಡ್ತೀನಿ ಅವರಿಗೆ ಚಾಲೆಂಜ್ ಮಾಡ್ತೀನಿ. ಅಂಬರೀಶ್ ಮನೆಯಲ್ಲಿ ನಾನೇ ಆಗಲಿ, ನನ್ನ ಮಗನಾಗಲಿ ಭ್ರಷ್ಟಾಚಾರದ ದಾರಿಯಲ್ಲಿ ಹೋಗುವ ಕರ್ಮ ನಮಗೆ ಇಲ್ಲ. ಇದನ್ನೂ ಓದಿ: ಸುಮಲತಾ Vs ಕುಮಾರಸ್ವಾಮಿ – ಮೈ ಶುಗರ್ ವಿವಾದ ಈಗ ಎದ್ದಿದ್ದು ಯಾಕೆ?

ರಾಜಕಾರಣ ನನಗೆ ಆಕಸ್ಮಿಕ ಜನ ವಿಶ್ವಾಸ ಇಟ್ಟು ಗೆಲ್ಲಿಸಿದ ಋಣ ನನ್ನ ಮೇಲಿದೆ. ಜನ ಇರು ಅಂದಷ್ಟು ದಿನ ಇರ್ತಿನಿ ಬೇಡ ಅಂದಾಗ ಹೊರಟು ಹೋಗ್ತಿನಿ, ಅಲ್ಲಿ ಅಧಿಕಾರಕ್ಕೆ ಅಂಟಿಕೊಳ್ಳಲ್ಲ ಯಾರಿಗೆ ದುರಾಸೆ ಇದೆಯೋ ಅವರಿಗೆ ಆತಂಕ ಆಗ್ತಿದೆ. ಒಂದೊಂದಾಗಿ ನಾನು ಬಿಚ್ಚಿಟ್ಟಿದ್ದರಿಂದ ಕೆಲವರಿಗೆ ಆತಂಕವಾಗಿದೆ. ಭ್ರಷ್ಟಾಚಾರ ಎಷ್ಡು ದಿನ ಹೀಗೆ ನಡೆಯಬೇಕು. ಭ್ರಷ್ಟಾಚಾರವನ್ನು ಪ್ರಶ್ನಿಸಬಾರದಾ..? ಭ್ರಷ್ಟಾಚಾರದ ಬ್ರಾಂಡ್ ಅಂಬಾಸಿಡರ್ ತರ ಕಾಣಿಸ್ತಿದಿರ ನೀವು. ನಮ್ಮಲ್ಲಿ ಸತ್ಯ ಇರುವಾಗ ಯಾರಿಗು ಹೆದರಬಾರದು. ನನ್ನಲ್ಲಿ ಸತ್ಯ ಇದೆ ಹಾಗಾಗಿ ಹೆದರುವ ಪ್ರೆಶ್ನೆ ಇಲ್ಲಾ. ನಿಮ್ಮಲ್ಲಿ ತಪ್ಪಿಲ್ಲ ಅಂದರೆ ಭಯ ಏಕೆ. ನಿಮಗೆ ಗಿಲ್ಟ್ ಕಾಡಿದಾಗ ಭಯ ಆಗುತ್ತೆ ಅಷ್ಟೇ ಎಂದು ವ್ಯಂಗ್ಯ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *