ತುಮಕೂರು: ಬಸವರಾಜ್ ಬೊಮ್ಮಾಯಿ ಮಂತ್ರಿಮಂಡಲ ರಚನೆ ಬಳಿಕ ರಾಜ್ಯಕ್ಕೆ ಹಿಡಿದ ಗ್ರಹಣ ಬಿಡಲಿದೆ ಎಂದು ಜೈವಿಕ ಇಂಧನ ನಿಗಮದ ಅಧ್ಯಕ್ಷ ಕಿರಣ್ ಕುಮಾರ್ ಲೇವಡಿ ಮಾಡಿದರು.
ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಪರೋಕ್ಷವಾಗಿ ಮಾಜಿ ಸಚಿವ ಮಾಧುಸ್ವಾಮಿಗೆ ಗ್ರಹಣ ಎಂದು ಟೀಕೆ ಮಾಡುವ ಮೂಲಕ ಅವರಿಗೆ ಸಚಿವ ಸ್ಥಾನ ಸಿಗೋದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದನ್ನೂ ಓದಿ: ಚಿನ್ನ ಗೆದ್ದ ಖುಷಿಗೆ ಅಂಗಿ ಹರಿದುಕೊಂಡು ಸಂಭ್ರಮ ಪಟ್ಟ ಕ್ರೀಡಾಪಟು
ಮಾಧುಸ್ವಾಮಿಯಿಂದ ತಮ್ಮ ಬೆಂಬಲಿಗರ ವಿರುದ್ಧ ಸುಳ್ಳು ಕೇಸ್ ದಾಖಲಾಗುತಿತ್ತು. ಈ ಗ್ರಹಣ ತೊರೆದಾಗ ಎಲ್ಲವೂ ಸರಿಹೋಗಲಿದೆ ಎಂದು ಕಿರಣ್ ಕುಮಾರ್ ಹೇಳಿದರು. ಈ ಮೂಲಕ ಸ್ವಪಕ್ಷೀಯರಾದ ಮಾಧುಸ್ವಾಮಿ ಮತ್ತು ಕಿರಣ್ ಕುಮಾರ್ ನಡುವಿನ ಶೀತಲ ಸಮರ ಚಿಕ್ಕನಾಯಕನಹಳ್ಳಿಯಲ್ಲಿ ಮುಂದುವರಿದಿರುವುದು ಬಟಾಬಯಲಾಗಿದೆ.