ಮಹಿಳೆಯ ಧ್ವನಿಯಂತೆ ನಟಿಸಿದ್ದವರ ಬಾಯಿ ಹೆಪ್ಪುಗಟ್ಟಿತಾ? ಶಿವಸೇನೆ ಸಂಸದೆ

Public TV
2 Min Read

-ಹತ್ರಾಸ್ ಕೇಸಿನಲ್ಲಿ ಕಂಗನಾ ಮೌನವೇಕೆ?

ಮುಂಬೈ: ಮಹಿಳೆಯರ ಧ್ವನಿ ಎಂಬಂತೆ ನಟಿಸಿ ವೈ ಕೆಟಗರಿ ಭದ್ರತೆಯಲ್ಲಿ ಮುಂಬೈಗೆ ಬಂದಿದ್ದ ನಟಿ ಕಂಗನಾ ರಣಾವತ್ ಹತ್ರಾಸ್ ಪ್ರಕರಣದಲ್ಲಿ ಮೌನವಾಗಿರೋದೇಕೆ ಎಂದು ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಪ್ರಶ್ನೆ ಮಾಡಿದ್ದಾರೆ.

ಹಗಲು-ರಾತ್ರಿ ಅನ್ನದೇ ಮುಂಬೈ ಪೊಲೀಸರನ್ನು ಟೀಕಿಸಿದಕ್ಕೆ ಆ ನಟಿಗೆ ವೈ ದರ್ಜೆಯ ಭದ್ರತೆಯನ್ನು ನೀಡಲಾಗಿತ್ತು. ತಾನು ಮಹಿಳೆಯರ ಧ್ವನಿ ಎಂಬಂತೆ ತನ್ನನ್ನ ಬಿಂಬಿಸಿಕೊಂಡು ಮುಖ್ಯಮಂತ್ರಿ ಮತ್ತು ರಾಜ್ಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದರು. ಮಾಧ್ಯಮಗಳ ನೆಚ್ಚಿನಾಕೆ, ಹತ್ರಾಸ್ ಪ್ರಕರಣದ ಕುರಿತು ಒಂದು ಟ್ವೀಟ್ ಸಹ ಮಾಡುತ್ತಿಲ್ಲ ಏಕೆ ಪ್ರಶ್ನಿಸಿದ್ದಾರೆ. ನಟಿಯ ಬಾಯಿ ಈಗ ಹೆಪ್ಪುಗಟ್ಟಿದೆಯಾ? ಆದ್ರೆ ಪ್ರಿಯಾಂಕಾ ಚತುರ್ವೇದಿ ಎಲ್ಲಿಯೂ ಕಂಗನಾ ರಣಾವತ್ ಹೆಸರು ಬಳಸದೇ ಕಿಡಿ ಕಾರಿದ್ದಾರೆ.

ಕಂಗನಾ ರಣಾವತ್ ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದು, ಸಿಎಂ ಯೋಗಿ ಆದಿತ್ಯನಾಥ್ ಅವರ ನಂಬಿಕೆ ಇರಿಸಿ. ಪ್ರಿಯಾಂಕಾ ರೆಡ್ಡಿ ಪ್ರಕರಣದಲ್ಲಿ ಸಂತ್ರಸ್ತೆಯನ್ನ ಸುಟ್ಟು ಹಾಕಿದ ಸ್ಥಳದಲ್ಲಿಯೇ ಕಾಮುಕರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಆ ರೀತಿಯ ದಿಢೀರ್ ನ್ಯಾಯ ಬೇಕಿದೆ ಎಂದು ಬರೆದುಕೊಂಡಿದ್ದರು.

ಏನಿದು ಹತ್ರಾಸ್ ಪ್ರಕರಣ?:
2012ರಲ್ಲಿ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಮಾದರಿಯಲ್ಲಿಯೇ ಉತ್ತರಪ್ರದೇಶದ ಹುತ್ರಾಸ್ ನಲ್ಲಿ ನಡೆದಿದೆ. ಸೆಪ್ಟೆಂಬರ್ 14ರಂದು ತನ್ನ ತಾಯಿಯೊಂದಿಗೆ ಹುಲ್ಲು ತರಲೆಂದು ಯುವತಿ ಜಮೀನಿಗೆ ತೆರಳಿದ್ದಳು. ಈ ವೇಳೆ ನಾಲ್ವರು ಕಾಮಪಿಶಾಚಿಗಳು ಆಕೆಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಆಕೆಯ ನಾಲಿಗೆಯನ್ನು ಕತ್ತರಿಸಿ, ಬೆನ್ನು ಮೂಳೆ, ಕತ್ತಿಗೆ ಗಂಭೀರವಾಗಿ ಹಾನಿ ಮಾಡಿದ್ದಾರೆ. ಕಾಮುಕರ ಅಟ್ಟಹಾಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದಂತೆಯೇ ಘಟನೆ ನಡೆದು ಎರಡು ವಾರಗಳ ನಂತರ ಸೆಪ್ಟೆಂಬರ್ 29 ಮೃತಪಟ್ಟಿದ್ದರು.

ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಹತ್ರಾಸ್ ಗ್ರಾಮಕ್ಕೆ ಮಧ್ಯರಾತ್ರಿ ಯುವತಿಯ ಶವವನ್ನು ತೆಗೆದುಕೊಂಡು ಹೋಗಿ ಪೊಲೀಸರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಆದರೆ ಮಧ್ಯರಾತ್ರಿ ಅಂತ್ಯಕ್ರಿಯೆ ಮಾಡುವುದು ನಮ್ಮ ಸಂಪ್ರದಾಯವಲ್ಲ. ಮೃತದೇಹ ನಮಗೆ ನೀಡಿ, ಬೆಳಗ್ಗೆ ಅಂತ್ಯಕ್ರಿಯೆ ಮಾಡುತ್ತೇವೆ ಎಂದು ಮನವಿ ಮಾಡಿಕೊಂಡರೂ ಪೊಲೀಸರು ಒಪ್ಪಿಗೆ ನೀಡರಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *