ಮಹಾರಾಷ್ಟ್ರ, ಕೇರಳ ಗಡಿ ಜಿಲ್ಲೆಗಳಲ್ಲಿ ರುದ್ರನರ್ತನ..!

Public TV
1 Min Read

ಬೆಂಗಳೂರು: ಶತಮಾನದ ರೋಗವೊಂದು ಕಣ್ಮರೆಯಾಯ್ತು ಅಂದುಕೊಳ್ಳುವಷ್ಟರಲ್ಲೇ ಮತ್ತೆ ತನ್ನ ರಣಾರ್ಭಟ ಮುಂದುವರಿಸಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಸದ್ದಿಲ್ಲದೇ ಸ್ಫೋಟಗೊಳ್ಳುತ್ತಿದೆ. ಕೊರೊನಾ ಸೋಂಕು ಒಂದಕಿ ತಲುಪಿದ್ದ ನಗರಗಳಲ್ಲೂ ಮತ್ತೆ ಭಾರೀ ಅನಾಹುತ ತಂದೊಡ್ಡುವ ಲಕ್ಷಣಗಳು ಗೋಚರಗೊಳುತ್ತಿವೆ.

ವಿಶ್ವವನ್ನೇ ಕಾಡುತ್ತಿರುವ ಹೆಮ್ಮಾರಿ ಕೊರೊನಾ ಈಗ ರಾಜ್ಯದಲ್ಲಿ 2ನೇ ಆಟವನ್ನು ಶುರು ಮಾಡಿದೆ. ಕರ್ನಾಟಕಕ್ಕೆ ಬೆಂಗಳೂರು ಅಲ್ಲದೆ ಮಹಾರಾಷ್ಟ್ರ, ಕೇರಳ ಗಡಿ ರಾಜ್ಯಗಳಿಂದಾಗಿ ಸೋಂಕಿನ ಪ್ರಕರಣಗಳು ಹೆಚ್ಚಾಗ್ತಿರೋದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಶನಿವಾರ ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಕೇಸ್ ದಾಖಲಾಗಿದೆ. ಶನಿವಾರದ ಹೆಲ್ತ್ ಬುಲೆಟಿನ್‍ನಲ್ಲಿ ಕೊರೊನಾ ಅಂಕಿ ಅಂಶಗಳನ್ನ ನೋಡೋದಾದ್ರೆ

ಇನ್ನುಳಿದಂತೆ ಬೀದರ್, ತುಮಕೂರು, ಹಾಸನ, ಚಿಕ್ಕಬಳ್ಳಾಪುರ, ಬೆಳಗಾವಿ, ಬಳ್ಳಾರಿ ಕೇಸ್ ಏರಿಕೆ ಆಗಿದೆ. ಮಾರ್ಚ್ ನಲ್ಲಿ ಎರಡನೇ ಅಲೆ ಎಂಟ್ರಿಯಾಗುತ್ತೆ ಅನ್ನೋ ಮುನ್ಸೂಚನೆಯನ್ನು ತಜ್ಞರು ಕೊಟ್ಟಿದ್ರು. ಅದು ಈಗ ನಿಜವಾಗಿದೆ. ಬೆಂಗಳೂರು ನಂತರ ಉಡುಪಿಯಲ್ಲೇ ಹೆಚ್ಚು ಸೋಂಕು ಕಂಡುಬಂದಿವೆ. ಮಣಿಪಾಲ ಕ್ಯಾಂಪಸ್‍ನಲ್ಲಿ ಒಟ್ಟು 154 ಕೇಸುಗಳು ಪತ್ತೆಯಾಗಿವೆ. ಈಗಾಗಲೇ ಮಣಿಪಾಲ ವಿವಿಯ ಕ್ಯಾಂಪಸ್ಸನ್ನು ಜಿಲ್ಲಾಧಿಕಾರಿಗಳ ಸೂಚನೆಯಂತೆ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಐಡಿ ಕಾರ್ಡ್ ಇದ್ದವರಿಗೆ ಮಾತ್ರ ಕ್ಯಾಂಪಸ್ ಎಂಟ್ರಿ ಕೊಡಲಾಗುತ್ತಿದೆ.

ದೇಶದಲ್ಲಿ ಕೊರೊನಾಗೆ ಮೊದಲನೇ ಸಾವು ಕಂಡ ಕಲಬುರಗಿಯಲ್ಲೂ ಸೋಂಕು ಸ್ಫೋಟಗೊಳ್ಳುತ್ತಿದೆ. ಮೈಸೂರು-ಕೇರಳ ಗಡಿ ಭಾಗದಲ್ಲೂ ಕೂಡ ಕೊರೊನಾ ಟೆಸ್ಟಿಂಗ್ ಅಚ್ಚುಕಟ್ಟಾಗಿ ನಡೆಯಲೇ ಇಲ್ಲ. ಕೇರಳದಲ್ಲಿ ಪಾಸಿಟಿವ್ ಪ್ರಕರಣ ಹೆಚ್ಚಾದರೂ ಕೂಡ ಗಡಿ ಪ್ರದೇಶದಲ್ಲಿ ಎಚ್ಚರಿಕೆ ವಹಿಸಲಿಲ್ಲ. ಇದರ ಪರಿಣಾಮವಾಗಿ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿವೆ. ಇತ್ತ ವಿಜಯಪು, ಚಿಕ್ಕೋಡಿಯಲ್ಲಿ ಮಹಾರಾಷ್ಟ್ರದಿಂದ ಕೋವಿಡ್ 19 ರಿಪೋರ್ಟ್ ಇಲ್ಲದೆ ಜನತೆ ಎಂಟ್ರಿ ಕೊಡ್ತಿರೋದು ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ.

ಒಟ್ಟಾರೆ ಗಡಿ ಜಿಲ್ಲೆಗಳಲ್ಲಿ ಕೊರೋನಾ ಸ್ಪೀಡ್ ಜಾಸ್ತಿಯಾಗ್ತಿದೆ.. ಜಿಲ್ಲಾಡಳಿತಗಳು ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಬೇಕಿದೆ.. ಇಲ್ಲವಾದಲ್ಲಿ ಕೊರೋನಾ ಮತ್ತಷ್ಟು ಸ್ಫೋಟಗೊಳ್ಳೋದು ಗ್ಯಾರಂಟಿ.

Share This Article
Leave a Comment

Leave a Reply

Your email address will not be published. Required fields are marked *