ಮಲೇರಿಯಾ ಜಾಗೃತಿ ಸಭೆಯಲ್ಲಿ ಎಡವಟ್ಟು – ಹೆಚ್‍ಡಿಕೆ ಫೋಟೋವಿರೋ ಹಳೆಯ ಕರಪತ್ರ ಬಳಕೆ

Public TV
1 Min Read

ನೆಲಮಂಗಲ: ತಾಲೂಕು ಮಟ್ಟದ ಮಲೇರಿಯಾ ಜಾಗೃತಿ ಸಭೆಯಲ್ಲಿ ಬಳಸಿದ ಕರಪತ್ರದಲ್ಲಿ ಹಾಲಿ ಸಿಎಂ ಯಡಿಯೂರಪ್ಪ ಭಾವಚಿತ್ರ ನಾಪತ್ತೆಯಾಗಿದೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕು ಕಚೇರಿಯಲ್ಲಿ ಕಾಟಚಾರಕ್ಕೆ ಮಲೇರಿಯಾ ಸಭೆ ನಡೆಸಿದ್ದಾರೆ. ಅಧಿಕಾರಿಗಳು, ಮಲೇರಿಯಾ ಮಾಸಾಚರಣೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಆರೋಗ್ಯ ಅಧಿಕಾರಿಗಳ ಎಡವಟ್ಟಿನಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಡಿಸಿಎಂ ಜಿ.ಪರಮೇಶ್ವರ್ ಫೋಟೋ ಇರುವ ಕರಪತ್ರವನ್ನ ಸಭೆಯಲ್ಲಿ ವಿತರಣೆ ಮಾಡಿ ಗೊಂದಲಕ್ಕೆ ಕಾರಣವಾಗಿದೆ.

ಇಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಎಂಬುದನ್ನು ಅಧಿಕಾರಿಗಳು ಮರೆತ್ರಾ ಎಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಯಡಿಯೂರಪ್ಪ ರಾಜ್ಯದ ಸಿಎಂ ಅಧಿಕಾರಿಗಳ ಲೆಕ್ಕದಲ್ಲಿ ಇನ್ನೂ ಕುಮಾರಸ್ವಾಮಿ ನಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಅನುಮಾನ ಮೂಡಿಸುವಂತೆ ಮಾಡಿದೆ. 2018ರ ಹಳೆ ಕರಪತ್ರವನ್ನು ವಿತರಣೆ ಮಾಡುತ್ತಿರುವ ಆರೋಗ್ಯ ಇಲಾಖೆಯ ಎಡವಟ್ಟಿನಿಂದ ಚರ್ಚೆಗೆ ಗ್ರಾಸವಾಗಿದೆ.

ಮಲೇರಿಯಾ ಜಾಗೃತಿ ಕೇವಲ ಸಭೆಗೆ ಸೀಮಿತವಾಯಿತಾ ಎಂದು ಈ ಕರಪತ್ರಗಳನ್ನ ನೋಡಿದ್ರೆ ತಿಳಿಯುತ್ತಿದೆ. ಸಭೆಯಲ್ಲಿ ತಹಶೀಲ್ದಾರ್ ಮಂಜುನಾಥ್, ಟಿಎಚ್‍ಓ ಡಾ. ಹರೀಶ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಇದನ್ನೂ ಓದಿ: ದರ್ಶನ್ ಹೊಡೆದಿದ್ದು ನಿಜ: ಸಂದೇಶ್ ಪ್ರಿನ್ಸ್ ಸೆಕ್ಯೂರಿಟಿ ಗಾರ್ಡ್ ಸ್ಫೋಟಕ ಹೇಳಿಕೆ

Share This Article
Leave a Comment

Leave a Reply

Your email address will not be published. Required fields are marked *