ಮನೆ ಮಹಡಿ ಹತ್ತಿ ಜೀವ ಉಳಿಸಿಕೊಂಡ ಕುಟುಂಬ – ಮೈ ಝಲ್ ಎನಿಸುವ ಕಾರ್ಯಾಚರಣೆ ದೃಶ್ಯ ಸೆರೆ

Public TV
1 Min Read

ಕಾರವಾರ: ಮಳೆ ಕಡಿಮೆಯಾದ ಕಾರಣ ಕದ್ರಾ ಜಲಾಶಯದಿಂದ ನೀರನ್ನು ಹೊರಹಾಕುತ್ತಿದ್ದು, ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ಪ್ರವಾಹದಿಂದ ಮುಳುಗಡೆಯಾದ ಮನೆಗಳ ಮೇಲೆ ಹತ್ತಿ ಜನ ಜೀವ ಉಳಿಸಿಕೊಂಡ ದೃಶ್ಯವೊಂದು ಮೊಬೈಲ್ ನಲ್ಲಿ ಸೆರೆಯಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕಳೆದ 4 ದಿನದಿಂದ ಕಾರಾವಾರದಲ್ಲಿ ಧಾರಕಾರ ಮಳೆ ಸುರಿದಿದ್ದು, ಇದೀಗ ಮಳೆ ಕಡಿಮೆಯಾಗಿದೆ. ಹಾಗಾಗಿ ಕದ್ರಾ ಜಲಾಶಯದಿಂದ ನೀರನ್ನು ಹೊರ ಬಿಟ್ಟಿದ್ದು, ಇದೀಗ ಸಮೀಪವೇ ಇರುವ ಗಾಂಧಿನಗರಲ್ಲಿದ್ದ ಮನೆಗಳಿಗೆ ನೀರು ನುಗ್ಗಿದೆ.

ಬಳಿಕ ಜನ ಇರುವುದನ್ನು ತಿಳಿದ ಪೊಲೀಸರು ಕೆಲವರನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರಾದರೂ ಇನ್ನು ಕೆಲವರು ಜಲಬಂಧಿಯಾಗಿದ್ದಾರೆ. ನೀರು ಏರುತ್ತಲೇ ಸಾಗಿ ಮುಳುಗುವ ಹಂತಕ್ಕೆ ತಲುಪಿದಾಗ ತಗಡಿನ ಮನೆ ಮಹಡಿ ಮೇಲೆ ಹತ್ತಿ ಆಶ್ರಯ ಪಡೆದಿದ್ದರು. ಅದೃಷ್ಟವಶಾತ್ ಮನೆ ಮಹಡಿಗೆ ತಾಗುವ ರೀತಿಯಷ್ಟೇ ನೀರು ಹರಿದಿದೆ. ಕೊನೆಗೆ ನೌಕಾನೆಲೆಯ ರಕ್ಷಣಾ ತಂಡ ಇದೇ ರೀತಿ ಸಂಕಷ್ಟಕ್ಕೆ ಸಿಲುಕಿದ್ದ ನೂರಕ್ಕೂ ಹೆಚ್ಚು ಜರನ್ನ ರಕ್ಷಣೆ ಮಾಡಿದೆ.

ಮಹಡಿ ಮೇಲೆ ಆಶ್ರಯ ಪಡೆದಿದ್ದ ಜನರ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದ್ದು, ಭಯಾನಕ ಪರಿಸ್ಥಿತಿಯನ್ನು ಅನಾವರಣಗೊಳಿಸುತ್ತದೆ. ಅಲ್ಲದೆ ದುರದೃಷ್ಟವಶಾತ್ ನೆರೆ ಇಳಿದ ಮೇಲೆ ಈ ಭಾಗದ ಎಲ್ಲ ಮನೆಗಳು ನೆಲಸಮವಾಗಿದ್ದು ಈ ಕುಟುಂಬಗಳು ಬೀದಿಗೆ ಬರುವಂತಾಗಿದೆ. ಇದನ್ನೂ ಓದಿ: ರಾಯಚೂರಿನ ನಡುಗಡ್ಡೆಯಲ್ಲಿ ಸಿಲುಕಿದ್ದ ರೈತರ ರಕ್ಷಣೆ

 

Share This Article
Leave a Comment

Leave a Reply

Your email address will not be published. Required fields are marked *