ಮದ್ವೆ ಬಳಿಕ ಆಂಟಿ ಜೊತೆಗಿನ ಕುಚ್ ಕುಚ್ ಕಟ್ – ನೌಕರನೊಂದಿಗೆ ಆಂಟಿಯ ಹೊಸ ತುಂಟಾಟ

Public TV
2 Min Read

– ಮೂವರ ಅನೈತಿಕ ಸಂಬಂಧದಲ್ಲಿ ಓರ್ವ ಬಲಿ, ಇಬ್ಬರು ಜೈಲಿಗೆ
– ಆಂಟಿಯ ತುಂಟಾಟಕ್ಕೆ ಅಡ್ಡಿಯಾಗಿದ್ದ ಮಾಜಿ ಇನಿಯ

ರಾಂಚಿ: ಜನವರಿ 5ರಂದು ನಡೆದಿದ್ದ ಕೊಲೆ ಪ್ರಕರಣವನ್ನ ಬೇಧಿಸುವಲ್ಲಿ ಖೂಂಟಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದು, ಮೃತನ ಚಿಕ್ಕಮ್ಮ ಹಾಗೂ ಆಕೆಯ ಇನಿಯನನ್ನ ಕತ್ತಲ ಕೋಣೆಗೆ ತಳ್ಳಿದ್ದಾರೆ. ಮೃತ ಸಂಕೇತ್ ಮಿಶ್ರಾ ತನ್ನ ಚಿಕ್ಕಮ್ಮ ಸುಧಾ (ಹೆಸರು ಬದಲಾಯಿಸಲಾಗಿದೆ) ಜೊತೆ ಅಕ್ರಮ ಸಂಬಂಧ ಹೊಂದಿದ್ದನು.

ಏನಿದು ಪ್ರಕರಣ?: ಮೃತ ಸಂಕೇತ್ ಸತತ ನಾಲ್ಕು ವರ್ಷಗಳ ಕಾಲ ಚಿಕ್ಕಮ್ಮ ಸುಧಾ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. 2017ರಲ್ಲಿ ಮದುವೆಯಾದ ಬಳಿಕ ಸಂಕೇತ್ ಆಂಟಿ ಸ್ನೇಹವನ್ನ ಕಳೆದುಕೊಂಡಿದ್ದನು. ನಿಧಾನವಾಗಿ ಆಂಟಿಯಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದನು.

ಆಂಟಿ ಮನೆಯಲ್ಲಿ ಠಿಕಾಣಿ: ಇತ್ತ ಸುಧಾ ಒಂಟಿಯಾಗಿರೋದನ್ನ ಗಮನಿಸಿದ ಮನೆ ಕೆಲಸಗಾರ ಹೇಮಬರೋಮ್ ಆಕೆಗೆ ಹತ್ತಿರವಾಗಿದ್ದಾನೆ. ಸಂಕೇತ್ ಬಳಿಕ ಒಂಟಿಯಾಗಿದ್ದ ಸುಧಾ ಕೆಲಸಗಾರನ ಜೊತೆಯಲ್ಲಿ ಹೊಸ ತುಂಟಾಟು ಶುರು ಹಚ್ಚಿಕೊಂಡಿದ್ದಳು. ಸುಧಾ ಮತ್ತು ಹೇಮಬರೋಮ ಚೆಲ್ಲಾಟದ ವಿಷಯ ಸಂಕೇತ್ ಗೂ ತಲುಪಿತ್ತು. ವಿಷಯ ಕೇಳಿ ಕೆಂಡಾಮಂಡಲಗೊಂಡ ಸಂಕೇತ್ ಮತ್ತೆ ಆಂಟಿಯ ಹತ್ತಿರಕ್ಕೆ ಬಂದಿದ್ದಾನೆ. ಹಾಗಾಗಿ ಚಿಕಮ್ಮನ ಮನೆಯಲ್ಲಿಯೇ ಠಿಕಾಣಿ ಹೂಡಿದ್ದನು.

ನೌಕರನ ಜೊತೆಗಿನ ಸಂಬಂಧದ ಬಗ್ಗೆ ಸಂಕೇತ್ ಆಂಟಿಯನ್ನ ಪ್ರಶ್ನೆ ಮಾಡಿದ್ದ. ಆದ್ರೆ ಆಂಟಿ ಸುಧಾ ಸ್ಪಷ್ಟ ಉತ್ತರ ನೀಡದೇ ಮಾತನ್ನ ಮರೆಸಲು ಪ್ರಯತ್ನಿಸುತ್ತಿದ್ದಳು. ಈ ಸಂಬಂಧ ಇಬ್ಬರ ನಡುವೆ ಹಲವು ಬಾರಿ ಸಹ ಜಗಳ ನಡೆದಿತ್ತು.

ಪಿಕ್‍ನಿಕ್‍ನಲ್ಲಿ ಕೊಲೆ: ಮೂವರು ಜನವರಿ 5ರಂದು ಪಿಕ್‍ನಿಕ್ ಅಂತ ಕರೋಗೆ ತೆರಳಿದ್ದರು. ಹೇಮಬರೋಮ ತಿಂಡಿ ತರುತ್ತೇನೆಂದು ಹೇಳಿ ಹೋಗಿದ್ದನು. ಹೇಮಬರೋಮ ಬಂದಾಗ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಸಂಕೇತ್ ಸುಧಾ ಮೇಲೆ ಹಲ್ಲೆ ಸಹ ನಡೆಸಿದ್ದನು. ಹೇಮಬರೋಮ ಬಂದ ಕೂಡಲೇ ಸಂಕೇತ್ ಆತನ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾನೆ.

ಈ ವೇಳೆ ಕೋಪಗೊಂಡ ಹೇಮಬರೋಮ ತೋಟದಲ್ಲಿ ಮೇವು ಕತ್ತರಿಸುತ್ತಿದ್ದ ಸಾಧನದಿಂದ ಸಂಕೇತ್ ಕುತ್ತಿಗೆ ಮೇಲೆ ದಾಳಿ ನಡೆಸಿದ್ದಾರೆ. ತೀವ್ರ ರಕ್ತಸ್ರಾವವಾದ ಪರಿಣಾಮ ಸಂಕೇತ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನು ಹೇಮಬರೋಮ ಅನುಮಾನ ಮತ್ತ ಸಾಕ್ಷ್ಯ ನಾಶ ಮಾಡುವ ದೃಷ್ಟಿಯಿಂದ ತನ್ನ ಬೈಕ್, ಧರಿಸಿದ್ದ ಜಾಕೆಟ್ ಮತ್ತು ಶವವನ್ನ ಸುಟ್ಟು ಹಾಕಿದ್ದಾನೆ.

ಜನವರಿ 7ಕ್ಕೆ ಶವ ಪತ್ತೆ: ಸುಟ್ಟ ಸ್ಥಿತಿಯಲ್ಲಿ ಪೊಲೀಸರಿಗೆ ಅನಾಮಧೇಯ ಶವ ಸಿಕ್ಕಿತ್ತು. ತನಿಖೆಗಿಳಿದ ಪೊಲೀಸರು ಕೆಲವೇ ಗಂಟೆಯಲ್ಲಿ ಅದು ಸ್ಥಳೀಯ ಪತ್ರಕರ್ತ ಅನಿಲ್ ಮಿಶ್ರಾ ಪುತ್ರ ಸಂಕೇತ್ ಶವ ಅನ್ನೋದನ್ನ ಪತ್ತೆ ಹಚ್ಚಿದ್ದರು. ಸಂಕೇತ್ ಕೊನೆ ಬಾರಿ ಚಿಕ್ಕಮ್ಮ ಸುಧಾ ಜೊತೆ ಫೋನ್ ನಲ್ಲಿ ಮಾತಾಡಿದ್ದನು. ಸುಧಾಳನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿಬಿಟ್ಟಿದ್ದಾಳೆ. ಸುಧಾ ಮತ್ತು ಹೇಮಬರೋಮ ಸೇರಿದಂತೆ ಒಟ್ಟು 8 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಲ್ಲರನ್ನ ಜೈಲಿಗೆ ಅಟ್ಟಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *