ಮದ್ಯದಂಗಡಿಗೆ ಮುಗಿಬಿದ್ದ ಜನ

Public TV
1 Min Read

ಯಾದಗಿರಿ: ಕಳೆದ ಹತ್ತು ದಿನಗಳಿಂದ ಯಾದಗಿರಿ ಸಂಪೂರ್ಣ ಲಾಕ್‍ಡೌನ್ ಆಗಿದ್ದು, ನಿನ್ನೆ ಮತ್ತು ಇವತ್ತು ಎರಡು ದಿನ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅವಕಾಶ ನೀಡಿದ ಹಿನ್ನಲೆ, ಎಣ್ಣೆ ಖರೀದಿಗಾಗಿ ಮದ್ಯದಂಗಡಿಗೆ ಜನರು ಮುಗಿ ಬಿದ್ದಿದ್ದಾರೆ.

ಯಾದಗಿರಿ ನಗರದ ಮದ್ಯದ ಅಂಗಡಿಗಳ ಮುಂದೆ ಜನ ಸಾಗರವೇ ಇದೆ. ಮದ್ಯ ಖರೀದಿಗೆ ನಾ ಮುಂದು ತಾ ಮುಂದು ಅಂತ ಮದ್ಯಪ್ರಿಯರು ಸ್ಪರ್ಧೆಗೆ ಬಿದ್ದಿದ್ದು, ಇದರಲ್ಲಿ ಮಹಿಳೆಯರು ಸಹ ಸೇರಿಕೊಂಡಿದ್ದಾರೆ. ಮದ್ಯ ಖಾಲಿ ಆಗಿದೆ ಅಂತ ಮದ್ಯದಂಗಡಿ ಮಾಲೀಕ ಶೆಟರ್ ಕ್ಲೊಸ್ ಮಾಡಿದ್ದರು, ಶೆಟರ್ ಮೇಲೆತ್ತಿ ಮದ್ಯ ಕೊಡುವಂತೆ ಅಂಗಡಿ ಅವರಿಗೆ ಒತ್ತಾಯ ಮಾಡಲಾಗುತ್ತಿದೆ. ಇದನ್ನೂ ಓದಿ:  ಯಾದಗಿರಿ ಲಾಕ್‍ಡೌನ್ ಓಪನ್, ಮಾರುಕಟ್ಟೆಗಳಲ್ಲಿ ಜನಜಂಗುಳಿ

ಮದ್ಯ ಖಾಲಿ ಆಗಿದೆ ಅಂದರು ಮದ್ಯ ಪ್ರೀಯರು ಮಾತ್ರ ಜಾಗ ಬಿಟ್ಟು ಕದಲುತ್ತಿಲ್ಲ. ಜನ ಮಾಸ್ಕ್ ಧರಿಸದೆ ಮತ್ತು ಸಾಮಾಜಿಕ ಅಂತರ ಕಾಪಾಡದೆ, ಮದ್ಯ ಖರೀದಿಗೆ ಮುಂದಾಗಿದ್ದು, ಮದ್ಯಂಗಡಿಗಳು ಇಂದು ಕೊರೊನಾ ಹಬ್ಬುವ ಹಾಟ್ ಸ್ಪಾಟ್ ಆಗಿ ಕಾಣುತ್ತಿವೆ. ಇದನ್ನೂ ಓದಿ: ಯಾದಗಿರಿಯಲ್ಲಿ ಹೆಚ್ಚಾದ ಸಾವಿನ ಸಪ್ಪಳ- ಒಂದು ತಿಂಗಳಲ್ಲಿ ನೂರರ ಗಡಿದಾಟಿದ ಮರಣ ಸಂಖ್ಯೆ

ಕೊರೊನಾ ಸೋಂಕಿನಿಂದ ಕಂಗಾಲಾಗಿರುವ ಜಿಲ್ಲೆಯಲ್ಲಿ ಸಾವಿನ ಸಪ್ಪಳ ಕೇಳಿಬರುತ್ತಿದೆ. ಕಳೆದ ಬಾರಿ ಸಾವಿನ ಸಂಖ್ಯೆಯಲ್ಲಿ ತೀರಾ ಹಿಂದಿದ್ದ ಯಾದಗಿರಿ ಜಿಲ್ಲೆಯಲ್ಲಿ ಇದೀಗ ಸೋಂಕಿತರ ಮರಣದ ಸಂಖ್ಯೆ ಹೆಚ್ಚಾಗಿದೆ. ಮೊದಲ ಅಲೆ ಮತ್ತು ಎರಡನೇ ಅಲೆಯಲ್ಲಿ ಒಟ್ಟು 172 ಜನ ಸಾವಿನಪ್ಪಿದ್ದಾರೆ. ಕೊರೊನಾ ಎರಡನೇ ಅಲೆಯಲ್ಲೇ ಯಾದಗಿರಿ ಜಿಲ್ಲೆಯಲ್ಲಿ 105 ಜನ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಯಾದಗಿರಿ, ಶಹಾಪುರ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಸಾವು ಪ್ರಕರಣ ಬೆಳಕಿಗೆ ಬಂದಿವೆ. ಸಾವಿನ ಪ್ರಮಾಣ ಈ ಬಾರಿ 0.9ರಷ್ಟು ಏರಿಕೆ ಕಂಡಿದೆ. ಇದರಿಂದಾಗಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಾಕಷ್ಟು ಆತಂಕದಲ್ಲಿದೆ. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟರೆ ಜನರು ಮಾತ್ರ ಯಾವುದೇ ಕೊರೊನಾ ನಿಮಯವನ್ನು ಪಾಲಿಸದೆ ಮದ್ಯದಂಗಡಿ ಮುಂದೆ ಬಂದು ಜಮಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *