ಮದುವೆ ದಿನ ವಿಷಯ ಮುಚ್ಚಿಟ್ಟಳೆಂದು ಡಿವೋರ್ಸ್ ನೀಡಲು ಮುಂದಾದ!

Public TV
1 Min Read

– ಹಲವು ಅಚ್ಚರಿ ಕಾರಣಗಳ ಜೊತೆ ಕೋರ್ಟ್ ಮೆಟ್ಟಿಲೇರಿದ ಪತಿ!

ಗಾಂಧಿನಗರ: ಮದುವೆ ದಿನ ಪತ್ನಿ ಮುಟ್ಟಾಗಿದ್ದಳು ಎಂದು ಪತಿ ಡಿವೋರ್ಸ್ ಕೊಡಲು ಹೋಗಿರುವ ಘಟನೆ ವಡೋದರಾದಲ್ಲಿ ನಡೆದಿದೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಯುವಕ ಕೆಲವು ತಿಂಗಳ ಹಿಂದೆ ಶಿಕ್ಷಿಕಿಯನ್ನು ವಿವಾಹವಾಗಿದ್ದನು. ದಾಂಪತ್ಯ ಜೀವನವು ಸುಖಕರವಾಗಿತ್ತು. ಆದರೆ ಇದ್ದಕ್ಕಿದ್ದಂತೆ ಈ ದಂಪತಿ ಡಿವೋರ್ಸ್‍ಗಾಗಿ ವಡೋದರದಲ್ಲಿನ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಕೊಟ್ಟಿರುವ ಕಾರಣ ಈಗ ಎಲ್ಲರ ಗಮನವನ್ನು ಸೆಳೆಯುತ್ತಾ ಸುದ್ದಿಯಲ್ಲಿದೆ.

ಮದುವೆ ದಿನ ನನ್ನ ಪತ್ನಿ ಮುಟ್ಟಾಗಿದ್ದಳು. ಈ ವಿಚಾರವನ್ನು ಎಲ್ಲರಿಂದ ಮುಚ್ಚಿಟ್ಟಿದ್ದಾಳೆ. ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾಳೆ. ಈ ಸಮಯದಲ್ಲಿ ಮಹಿಳೆಯರು ಶುಭ ಕಾರ್ಯವನ್ನು ಮಾಡುವಂತಿಲ್ಲ. ಆದರೆ ವಿಷಯವನ್ನು ಮುಚ್ಚಿಟ್ಟಿದ್ದಾಳೆ. ಮದುವೆಯ ದಿನ ದೇವಸ್ಥಾನಕ್ಕೆ ಹೋಗುವಾಗ ಒಳಕ್ಕೆ ಬಾರದೆ ಹೊರಗೆ ನಿಂತಾಗಲೇ ನನಗೆ ಈ ವಿಚಾರ ತಿಳಿಯಿತ್ತು.

ಈ ವಿಚಾರವನ್ನು ನಾನು ಅಲ್ಲಿಗೆ ಮರೆತು ಸುಮ್ಮನಾಗಿದ್ದೆನು. ಆದರೆ ಮದುವೆಯ ದಿನ ರಾತ್ರಿ ಆಕೆ ನನ್ನೊಂದಿಗೆ ನನಗೆ ಐಶಾರಾಮಿ ಜೀವನ ನಡೆಸಬೇಕು. ತಿಂಗಳಿಗೆ 5,000 ರೂಪಾಯಿ ನನಗೆ ಕೊಡಬೇಕು. ಕುಟುಂಬದ ಖರ್ಚು ನಿಮ್ಮ ಸಹೋದರ ನೋಡಿಕೊಳ್ಳುತ್ತಾನೆ. ನೀವು ಹಣ ನೀಡುವುದು ಬೇಡ ಎಂದು ಹೇಳಿದ್ದಾಳೆ. ಇದು ಸಾಧ್ಯವಿಲ್ಲ ಎಂದು ನಾನು ಹೇಳಿದ್ದೆನು. ಆಗ ಆಕೆ ನನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹತ್ತು ಜನರ ಜೊತೆಗೆ ಮಲಗ್ಲಾ ಎಂದು ಹೇಳಿ ನನ್ನನ್ನು ಬೆಚ್ಚಿ ಬೀಳುವಂತೆ ಮಾಡಿದ್ದಳು.

ಅವಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದು ಕಷ್ಟವಾಗಿತ್ತು. ಕೆಲವು ದಿನಗಳ ನಂತರ ಸರಿಹೋಗಬಹುದು ಎಂದು ಕೊಂಡಿದ್ದೆನು. ಆದರೆ ತವರು ಮನೆಗೆ ಎಂದು ಹೋದವಳು ವಾಪಸ್ ಬರಲೇ ಇಲ್ಲ. ನಾನು ಕರೆದುಕೊಂಡು ಬರಲು ಹೋದಾಗ ಟೆರೇಸ್‍ನಿಂದ ಹಾರಿ ಪ್ರಾಣವನ್ನು ಬಿಡುತ್ತೇನೆ ಎಂದು ನನಗೆ ಬೆದರಿಕೆ ಹಾಕಿದ್ದಾಳೆ. ಹೀಗಾಗಿ ಈ ಎಲ್ಲಾ ಕಾರಣಗಳಿಂದ ನಾನು ನನ್ನ ದಾಂಪತ್ಯ ಜೀವನವನ್ನು ಮುರಿದುಕೊಳ್ಳುತ್ತೇನೆ ಎಂದು ದೂರಿನಲ್ಲಿ ತಿಳಿಸಿ ಈ ದಂಪತಿ ಡಿವೋರ್ಸ್‍ಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *