ಮದುವೆ ಆಗೋಣ ಬಾ ಅಂತ ಕರೆದು ಪ್ರಿಯತಮೆಗೆ ವಿಷವುಣಿಸಿ ಕೊಂದ!

Public TV
2 Min Read

– ಬಾಲ್ಯದ ಪ್ರೀತಿ ಕೊಂದ ಕೊಲೆಗಾರ

ಚಿಕ್ಕೋಡಿ(ಬೆಳಗಾವಿ): ಮದುವೆ ಆಗೋಣ ಬಾ ಎಂದು ಕರೆಸಿ ಯುವತಿಗೆ ವಿಷವುಣಿಸಿ ಪ್ರಿಯತಮೆಯನ್ನು ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ವಡ್ಡರಗಲ್ಲಿಯ ಯುವತಿ ದೀಪಾಲಿ ಪವಾರ(25) ಮೃತ ಯುವತಿಯಾಗಿದ್ದಾಳೆ. ರಾಜು ಕುರಬರ ಪ್ರಿಯತಮೆಗೆ ವಿಷವುಣಿಸಿ ಕೊಲೆ ಮಾಡಿರುವ ಆರೋಪಿ.

ದೀಪಾಲಿ ಮತ್ತು ರಾಜು ನಡುವೆ ಬಾಲ್ಯದಿಂದಲೇ ಪ್ರೀತಿ ಇತ್ತು. ಇಬ್ಬರೂ ಸಹ ಹಿರಿಯರ ಹಾಗೂ ಊರಿನವರ ಕಣ್ತಪ್ಪಿಸಿ ಓಡಾಡಿದ್ದರು. ರಾಜು ವೃತ್ತಿಯಿಂದ ರಜೆಯ ಮೇಲೆ ಊರಿಗೆ ಬಂದಿದ್ದ. ಆತನಿಗೆ ಆತನ ಮನೆಯವರು ಬೇರೆ ಕಡೆ ಸಂಬಂಧ ನೋಡಿ ನಿಶ್ಚಿತಾರ್ಥ ಮಾಡಿದ್ದರು. ತಾನೂ ದೀಪಾಲಿಯನ್ನ ಪ್ರೀತಿಸೋದಾಗಿ ಮನೆಯವರಿಗೆ ಹೇಳಿದರೂ ಸಹ ಅನ್ಯ ಜಾತಿಯ ಹುಡುಗಿ ನಮ್ಮ ಮನೆಗೆ ಆಗಿ ಬರೊಲ್ಲ ಎಂದು ರಾಜುಗೆ ಮನೆಯವರು ಸೇರಿ ಬೇರೆ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿದ್ದರು.

ಜನವರಿ 21ರಂದು ನಿಶ್ಚಿತಾರ್ಥ ಮಾಡಿಕೊಂಡ ರಾಜು 22ರಂದು ರೂಪಾಲಿಗೆ ಫೋನ್ ಮಾಡಿ ನಮ್ ಮನೆಯಲ್ಲಿ ಮದುಗೆ ಒಪ್ಪುತ್ತಿಲ್ಲ. ನೀನು ಬಂದು ಬಿಡು ನಾವು ರಿಜಿಸ್ಟರ್ ಮ್ಯಾರೇಜ್ ಆಗೋಣ ಎಂದಿದ್ದ. ಮದುವೆ ಅಗೋಣ ಬಾ ಎಂದು ಕರೆದ ರಾಜು ಮಾತು ನಂಬಿ ತಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಗೆ ರಜೆ ಹಾಕಿ ಮದುವೆಯ ಕನಸು ಹೊತ್ತು ಚಿಕ್ಕೋಡಿಗೆ ಜನವರಿ 23 ರಂದು ಬಂದ ದೀಪಾಲಿಗೆ ರಾಜು ತನ್ನ ನಿಶ್ಚಿತಾರ್ಥದ ವಿಷಯ ಹೇಳಿದ್ದ. ಇದನ್ನು ಕೇಳಿ ರೂಪಾಲಿ ರಾಜು ಜೊತೆ ಜಗಳವಾಡಿದ್ಳು. ಅಲ್ಲದೆ ನನ್ನ ಬಿಟ್ಟು ನೀನು ಬೇರೆಯವರೊಂದಿಗೆ ಹೇಗೆ ಮದುವೆ ಆಗ್ತಿಯಾ ಅಂತ ಪ್ರಶ್ನೆ ಮಾಡಿದ್ಳು.

ಹೀಗಾಗಿ ರಾಜು ಇವಳು ನನ್ ಮದುವೆಗೆ ಅಡ್ಡಿಯಾಗುತ್ತಾಳೆ ಎಂದು ಬೇರೆ ನೆಪವೊಡ್ಡಿ ಒಂದೆಡೆಗೆ ಕರೆದುಕೊಂಡು ಹೋಗಿದ್ದಾನೆ. ಊಟಕ್ಕೆ ಕರೆದುಕೊಂಡು ಹೋಗಿ ಊಟ ಆದ ಮೇಲೆ ಕೂಲ್ಡ್ರಿಂಕ್ಸ್ ನಲ್ಲಿ ವಿಷ ಬೆರೆಸಿ ಕುಡಿಯೋಕೆ ಕೊಟ್ಟಿದ್ದಾನೆ. ಕೂಲ್ಡ್ರಿಂಕ್ಸ್ ಕುಡಿದ ಯುವತಿ ಅಸ್ವಸ್ಥಳಾಗಿದ್ದಾಳೆ. ನಂತರ ರಾಜು ದೀಪಾಲಿಯನ್ನು ತಾನೇ ಆಸ್ಪತ್ರಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ನಾಟಕವಾಡಿದ್ದಾನೆ.

ಜನವರಿ 24 ರಂದು ದೀಪಾಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಆಗ ರಾಜು ಹಾಗೂ ಆತನ ಸ್ನೇಹಿತ ಸುರೇಶ್ ಢಂಗ ಅಲ್ಲಿಂದ ಪರಾರಿಯಾಗಿದ್ದಾರೆ. ಅನ್ಯ ಜಾತಿ ಎಂಬ ಕಾರಣಕ್ಕೆ ಮದುವೆಗೆ ಅಡ್ಡಿಯಾಗುತ್ತಾಳೆ ಎಂದು ಮದುವೆಯಾಗೋಣ ಬಾ ಎಂದು ಕರೆದು ಕೊಲೆಗೈದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇತ್ತ ಮನೆಯ ಜವಾಬ್ದಾರಿ ಹೊತ್ತು ಮನೆ ನಡೆಸುತ್ತಿದ್ದ ಮಗಳು ಮಸನ ಸೇರಿದ್ದರಿಂದ ಪೋಷಕರು ಮರುಗುತ್ತಿದ್ದಾರೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *