ಮದುವೆಯ ಸಮಾರಂಭದಲ್ಲಿ ವಧು ಧರಿಸಬಹುದಾದ ಲೇಟೆಸ್ಟ್ ಕಾಲ್ಗೆಜ್ಜೆಗಳು

Public TV
2 Min Read

ಕಾಲ್ಗೆಜ್ಜೆ ಮಹಿಳೆಯರಿಗೆ ಪ್ರಿಯವಾದ ಆಭರಣಗಳಲ್ಲಿ ಒಂದಾಗಿದೆ. ವಧು ಮದುವೆಯ ವೇಳೆ ವಿವಿಧ ಆಭರಣಗಳ ಜೊತೆಗೆ ಕಾಲ್ಗೆಜ್ಜೆಯ ಮೇಲೂ ಹೆಚ್ಚು ಗಮನ ಹರಿಸುತ್ತಾರೆ. ಭಾರತೀಯ ಸಂಪ್ರಾದಾಯಿಕ ವಿವಾಹಗಳಲ್ಲಿ ಕಾಲ್ಗೆಜ್ಜೆಗೆ ಆದರದೇ ಆದ ಮಹತ್ವವಿದ್ದು, ಮದುಮಗಳು ವಿವಾಹದ ನಂತರ ಹೊಸ ಕುಟುಂಬದೊಂದಿಗೆ ಹೆಜ್ಜೆ ಹಾಕುವುದನ್ನು ಕಾಲ್ಗೆಜ್ಜೆಗಳು ಪ್ರತಿನಿಧಿಸುತ್ತದೆ.

ನೀವು ಚಿನ್ನದ ಕಾಲ್ಗೆಜ್ಜೆಯನ್ನು ಧರಿಸಲು ಇಷ್ಟಪಟ್ಟರೆ ಮತ್ತು ಮದುವೆ ಸಮಾರಂಭಗಳಿಗೆ ಯಾವ ರೀತಿಯ ಕಾಲ್ಗಜ್ಜೆಗಳನ್ನು ಧರಿಸಬೇಕು ಎಂದು ತಿಳಿಯದಿದ್ದಲ್ಲಿ ಕೆಲವೊಂದು ಲೇಟೆಸ್ಟ್ ಡಿಸೈನ್ ಕಾಲ್ಗೆಜ್ಜೆಗಳು ಈ ಕೆಳಗಿನಂತಿದೆ.

ಚಿನ್ನ ಹಾಗೂ ಪಚ್ಚೆಗಳ ವಿನ್ಯಾಸದ ಕಾಲ್ಗೆಜ್ಜೆ: ಚಿನ್ನ ಮತ್ತು ಪಚ್ಚೆಗಳ ಜೋಡನೆಯೊಂದಿಗಿರುವ ಕಾಲ್ಗೆಜ್ಜೆಯ ಡಿಸೈನ್‍ನನ್ನು ನೀವು ಹುಡುಕುತ್ತಿದ್ದರೆ, ಈ ಕಾಲ್ಗೆಜ್ಜೆ ವಧುವಿಗೆ ಬಹಳ ಚೆನ್ನಾಗಿ ಸೂಟ್ ಆಗುತ್ತದೆ. ಗೋಲ್ಡನ್ ಸ್ಟಡ್ಸ್ ಮತ್ತು ಪಚ್ಚೆ ಕಲ್ಲುಗಳ ಮಧ್ಯೆ ಫಲಕ(ಪ್ಲೇಟ್ಸ್)ಗಳಿರುವ ಈ ಕಾಲ್ಗೆಜ್ಜೆ ಸುಂದರವಾಗಿ ಕಾಣಿಸುತ್ತದೆ ಮತ್ತು ವಧುವಿಗೆ ರಾಯಲ್ ಲುಕ್ ನೀಡುತ್ತದೆ. ರಜಪೂತ್ ವಿವಾಹ ಸಮಾರಂಭಗಳಲ್ಲಿ ಈ ಕಾಲ್ಗೆಜ್ಜೆಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ.

ಹೂವಿನ ಡಿಸೈನ್ ಇರುವ ಬೆಳ್ಳಿ ಕಾಲ್ಗೆಜ್ಜೆ: ಇತ್ತೀಚಿಗಿನ ಬೆಳ್ಳಿನ ಕಾಲ್ಗೆಜ್ಜೆಗಳನ್ನು ಧರಿಸಲು ನೀವು ಬಯಸುತ್ತಿದ್ದರೆ ದಪ್ಪ ಬ್ಯಾಂಡ್ ರೀತಿಯ ಅಗಲವಾದ ಮತ್ತು ಐದು ಬೆರಳುಗಳಿಗೆ ಬೆಳ್ಳಿ ಫಲಕಗಳಿರುವ ಹೂವಿನ ಡಿಸೈನ್ ಕಾಲ್ಗಜ್ಜೆಯನ್ನು ಧರಿಸಿ. ಇದು ಸೂಪರ್ ಲುಕ್ ನೀಡುತ್ತದೆ ಮತ್ತು ರಾಜಸ್ಥಾನಿ ಸಂಪ್ರಾದಾಯಿಕ ಆಭರಣಗಳಲ್ಲಿ ಈ ಕಾಲ್ಗೆಜ್ಜೆ ಕೂಡ ಒಂದಾಗಿದೆ.

ಮಣಿಗಳ ಡಿಸೈನ್ ಹೊಂದಿರುವ ಕಾಲ್ಗೆಜ್ಜೆ: ಸಾಮಾನ್ಯವಾಗಿ ಚಿನ್ನದ ಕಾಲ್ಗಜ್ಜೆಗಳು ನೋಡುಗರಿಗೆ ಬೋಲ್ಡ್ ಲುಕ್ ನೀಡುತ್ತದೆ. ಚಿನ್ನದ ಬ್ಯಾಂಡ್‍ನಂತಿರುವ ಈ ಕಾಲ್ಗೆಜ್ಜೆಗೆ ಸಣ್ಣ ಮುತ್ತಿನ ಮಣಿಗಳನ್ನು ಜೋಡಣೆ ಮಾಡಿದ್ದು, ಕೆಂಪು ಹಾಗೂ ಬನಾರಸಿ ರೇಷ್ಮೆ ಸೀರೆ ಉಟ್ಟವರಿಗೆ ಈ ಕಾಲ್ಗೆಜ್ಜೆ ಬಹಳ ಸುಂದರವಾಗಿರುತ್ತದೆ ಮತ್ತು ಎದ್ದು ಕಾಣಿಸುತ್ತದೆ.

ಚಿನ್ನ ಹಾಗೂ ಮುತ್ತುಗಳ ಡಿಸೈನ್ ಕಾಲ್ಗೆಜ್ಜೆ: ಈ ಕಾಲ್ಗೆಜ್ಜೆಯಲ್ಲಿ ಮುತ್ತುಗಳು ಚಿನ್ನದ ಬಣ್ಣವನ್ನು ಹೊಂದಿದ್ದು, ದೇವತೆಗಳೇ ಧರಿಸಿದಂತೆ ಈ ಪಾದದ ಕಾಲ್ಗೆಜ್ಜೆಗಳು ನೋಡಲು ಕಾಣಿಸುತ್ತದೆ. ದೊಡ್ಡ ಪೆಂಡೆಂಟ್ ಹಾಗೂ ಮುತ್ತುಗಳನ್ನು ಹೊಂದಿರುವ ಈ ಕಾಲ್ಗೆಜ್ಜೆ ಮದುವೆಯ ಉಡುಪುಗಳೊಂದಿಗೆ ಸುಂದರವಾಗಿರಲಿದ್ದು, ಅದರಲ್ಲಿಯೂ ಕುಂದನ್ ಆಭರಣದ ಸೆಟ್ ಮತ್ತು ಗೋಲ್ಡನ್ ಕಲರ್ ಲೆಹೆಂಗಾ ಜೊತೆಗೆ ಬಹಳ ಚೆನ್ನಾಗಿ ಮ್ಯಾಚ್ ಆಗುತ್ತದೆ.

ವಜ್ರ ಮತ್ತು ತೆಳುವಾದ ಚಿನ್ನದ ಕಾಲ್ಗೆಜ್ಜೆ: ಲೆಟೆಸ್ಟ್ ಚಿನ್ನದ ಕಾಲ್ಗೆಜ್ಜೆಗಳಲ್ಲಿ ಎಲ್ಲವೂ ದಪ್ಪವಾಗಿರುವ ಡಿಸೈನ್‍ಗಳೆ ಇರುವುದಿಲ್ಲ. ಕೆಲವು ವಧುಗಳು ಸಣ್ಣ ವಜ್ರಗಳಿಂದ ವಿನ್ಯಾಸಗೊಳಿಸಿರುವ ತೆಳುವಾದ ಎಳೆ ಹೊಂದಿರುವಂತಹ ಚಿನ್ನದ ಕಾಲ್ಗೆಜ್ಜೆಗಳನ್ನು ಸಹ ಇಷ್ಟಪಡುತ್ತಾರೆ. ಇದು ನೋಡಲು ಸಿಂಪಲ್ ಹಾಗೂ ಸೂಪರ್ ಲುಕ್ ನೀಡುತ್ತದೆ. ಈ ಕಾಲ್ಗೆಜ್ಜೆಯ ತೂಕ ಹಗುರವಾಗಿರುತ್ತದೆ. ಸೀರೆ ಹಾಗೂ ಸಲ್ವಾರ್‍ಗಳ ಜೊತೆಗೆ ಸೂಟ್ ಆಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *