ಮತ್ತೊಂದು ಮಗುವಿನ ಪ್ರಾಣ ಉಳಿಸಿದ ಸೋನು ಸೂದ್

Public TV
2 Min Read

– ನೆಟ್ಟಿಗರಿಂದ ಭಾರೀ ಪ್ರಶಂಸೆ

ಮುಂಬೈ: ಬಾಲಿವುಡ್ ನಟ ಸೋನು ಸೂದ್ ತಮ್ಮ ಕೈ ಮೀರಿ ಸಹಾಯ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಸೇರಿದಂತೆ ವಿವಿಧ ರೀತಿಯ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದರು. ಜನ ಈಗಲೂ ಸೋನು ಮೊರೆ ಹೋಗುತ್ತಿದ್ದು, ಇದೀಗ ಮಗುವಿನ ಪ್ರಾಣ ಉಳಿಸಲು ಅವರು ಸಹಾಯ ಮಾಡಿದ್ದಾರೆ.

ಟಾಲಿವುಡ್ ಮೂವಿ ಮ್ಯಾನೇಜರ್ ಎಂ.ವಿ.ಸುಬ್ಬರಾವ್ ಮಗ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ಈ ಕುರಿತು ಟ್ವೀಟ್ ಮಾಡುವ ಮೂಲಕ ಸೋನು ಸೂದ್ ಅವರ ಬಳಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸೋನು ಸೂದ್ ಮಗುವಿನ ಶಸ್ತ್ರ ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದಾರೆ. ಅವರ ಕಾರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸುಬ್ಬರಾವ್ ಟ್ವೀಟ್ ಮಾಡಿ, ಸೋನು ಸೂದ್ ಸರ್ ನಾನು ತೆಲುಗು ಮೂವೀಸ್ ಮ್ಯಾನೇಜರ್ ಸುಬ್ಬರಾವ್. ನನ್ನ ಮಗನಿಗೆ ಹಾರ್ಟ್ ಸಮಸ್ಯೆ ಇದೆ. ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದಿದ್ದಾರೆ. ಶಸ್ತ್ರ ಚಿಕಿತ್ಸೆಗೆ ನನ್ನ ಬಳಿ ಹಣವಿಲ್ಲ. ದಯವಿಟ್ಟು ಸಹಾಯ ಮಾಡಿ, ನನ್ನ ಮಗನನ್ನು ಉಳಿಸಿ ಪ್ಲೀಸ್ ಎಂದು ಕೇಳಿಕೊಂಡಿದ್ದರು.

ಇದಕ್ಕೆ ಸೋನು ಸೂದ್ ಪ್ರತಿಕ್ರಿಯಿಸಿ, ಕೆಲಸ ಆಗಿದೆ, ಬುಧವಾರ ನಿಮ್ಮ ಮಗುವಿನ ಚೆಕ್‍ಅಪ್ ನಡೆಯಲಿದೆ. ಗುರುವಾರ ಮುಂಬೈನ ಎಸ್‍ಆರ್‍ಸಿಸಿ ಆಸ್ಪತ್ರೆಯಲ್ಲಿ ಮಗುವನ್ನು ಅಡ್ಮಿಟ್ ಮಾಡಬಹುದಾಗಿದೆ. ನಂತರ ಅವರು ಶಸ್ತ್ರಚಿಕಿತ್ಸೆ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕೊಟ್ಟ ಮಾತಿನಂತೆ ನಡೆದ ಸೋನು ಸೂದ್ – ಯಾದಗಿರಿಯ ಕುಟುಂಬಕ್ಕೆ ಬಂತು ದಿನಸಿ

ಲಾಕ್‍ಡೌನ್ ಸಂದರ್ಭದಲ್ಲಿ ಅನೇಕ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದ್ದ ನಟ ಸೋನು ಸೂದ್, ಈಗಲೂ ತಮ್ಮ ಸಹಾಯವನ್ನು ಮುಂದುವರಿಸಿದ್ದಾರೆ. ಯಾರು ಏನೇ ಹೇಳಿದರೂ ತಮ್ಮ ಸಹಾಯ ಮಾಡುವ ಗುಣವನ್ನು ಮುಂದುವರಿಸಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಸೋನು ಸೂದ್ ಈಗ ಮಾತ್ರವಲ್ಲ ಈ ಹಿಂದೆ ಸಹ ಅನೇಕ ಸಹಾಯ ಮಾಡಿದ್ದಾರೆ. ತಮ್ಮ ಸಹಾಯದ ಮೂಲಕ ಸೋನು ಸೂದ್ ವಿಶ್ವಾದ್ಯಂತ ಚಿರ ಪರಿಚಿತರಾಗಿದ್ದಾರೆ. ಇತ್ತೀಚೆಗೆ ವಿಶ್ವಸಂಸ್ಥೆ ಸಹ ಅವರಿಗೆ ಎಸ್‍ಡಿಜಿ ಸ್ಪೆಷಲ್ ಹ್ಯೂಮನಿಟೇರಿಯನ್ ಆ್ಯಕ್ಷನ್ ಅವಾರ್ಡ್ ಘೋಷಿಸಿದೆ. ಹೀಗೆ ಸಾವಿರಾರು ಜನರಿಗೆ ಸೋನು ಸೂದ್ ಸಹಾಯ ಮಾಡುತ್ತಿದ್ದಾರೆ. ಸೋನು ಸೂದ್ ಸದ್ಯ ಅಲ್ಲುಡು ಅಧುರ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ತಮ್ಮ ಸಾಮಾಜಿಕ ಕಾರ್ಯವನ್ನು ಸಹ ಮುಂದುವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *