ಮತ್ತೆ ಏರಿಕೆಯತ್ತ ಕೊರೊನಾ- ಬಹುದಿನಗಳ ಬಳಿಕ ರಾಜ್ಯದಲ್ಲಿ 2 ಸಾವಿರಕ್ಕೂ ಅಧಿಕ ಕೇಸ್

Public TV
1 Min Read

– 2052 ಹೊಸ ಕೇಸ್, 35 ಸಾವು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಕಂಡಿದ್ದು, ಬಹುದಿನಗಳ ಬಳಿಕ ದಿನದ ಸೋಂಕಿತರ ಸಂಖ್ಯೆ 2 ಸಾವಿರದ ಗಡಿ ದಾಟಿದೆ. ಇಂದು 2,052 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 35 ಜನ ಸಾವನ್ನಪ್ಪಿದ್ದಾರೆ.

ಇಂದು 1,332 ಜನರು ಮಹಾಮಾರಿಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸದ್ಯ ರಾಜ್ಯದಲ್ಲಿ 23,253 ಸಕ್ರಿಯ ಪ್ರಕರಣಗಳಿವೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.1.37ರಷ್ಟಿದೆ. ಮರಣ ಪ್ರಮಾಣ ಶೇ.1.70ರಷ್ಟಿದೆ. ಇದುವರೆಗೆ ರಾಜ್ಯದಲ್ಲಿ ಒಟ್ಟು 29,01,247 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 36,491 ಜನರನ್ನು ಮಹಾಮಾರಿ ಬಲಿ ಪಡೆದುಕೊಂಡಿದೆ.

ಒಟ್ಟು 1,48,861 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 506 ಜನಕ್ಕೆ ಸೋಂಕು ತಗುಲಿದ್ದು, 9 ಜನ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ 8,416 ಸಕ್ರಿಯ ಪ್ರಕರಣಗಳಿವೆ. 257 ಜನ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 7, ಬಳ್ಳಾರಿ 8, ಬೆಳಗಾವಿ 37, ಬೆಂಗಳೂರು ಗ್ರಾಮಾಂತರ 33, ಬೆಂಗಳೂರು ನಗರ 506, ಬೀದರ್ 4, ಚಾಮರಾಜನಗರ 24, ಚಿಕ್ಕಬಳ್ಳಾಪುರ 15, ಚಿಕ್ಕಮಗಳೂರು 90, ಚಿತ್ರದುರ್ಗ 17, ದಕ್ಷಿಣ ಕನ್ನಡ 396, ದಾವಣಗೆರೆ 27, ಧಾರವಾಡ 10, ಗದಗ 3, ಹಾಸನ 136, ಹಾವೇರಿ 3, ಕಲಬುರಗಿ 10, ಕೊಡಗು 96, ಕೋಲಾರ 29, ಕೊಪ್ಪಳ 8, ಮಂಡ್ಯ 40, ಮೈಸೂರು 157, ರಾಯಚೂರು 2, ರಾಮನಗರ 3, ಶಿವಮೊಗ್ಗ 81, ತುಮಕೂರು 56, ಉಡುಪಿ 174, ಉತ್ತರ ಕನ್ನಡ 72, ವಿಜಯಪುರ 5 ಮತ್ತು ಯಾದಗಿರಿಯಲ್ಲಿ 3 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *