ಬೆಂಗಳೂರು: ಈ ವಾರದಿಂದ ಮತ್ತಷ್ಟು ಲಾಕ್‍ಡೌನ್ ಸಡಲಿಕೆ ಸಿಗುವ ಸಾಧ್ಯತೆಗಳಿವೆ. ಇದೇ ಜುಲೈ 26ರಿಂದ ಕಾಲೇಜು ಆರಂಭಿಸಲು ಸರ್ಕಾರ ಸೂಚನೆ ನೀಡುವ ಸಾಧ್ಯತೆಗಳಿವೆ. ಜೊತೆಗೆ ಮೂರು ತಿಂಗಳಿನಿಂದ ಬಂದ್ ಆಗಿರುವ ಚಿತ್ರಮಂದಿರಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿಗಳು ಇಂದು ತಮ್ಮ ಕಾವೇರಿ ನಿವಾಸದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಕೋವಿಡ್ -19 ಸಡಿಲಿಕೆ ಕುರಿತು ಚರ್ಚೆ ನಡೆಸಿದರು. ನೈಟ್ ಕಫ್ರ್ಯೂ ಅವಧಿಯನ್ನು ರಾತ್ರಿ 10 ರಿಂದ ಬೆಳಗ್ಗೆ 5ರ ವರಗೆ ವಿಧಿಸಲು ಚರ್ಚೆ ನಡೆದಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಯಾವುದಕ್ಕೆಲ್ಲ ಅನುಮತಿ ಸಿಗಬಹುದು?
* ಸಿನಿಮಾ ಮಂದಿರ ತೆರೆಯಲು 50 ಪರ್ಸೆಂಟ್ ಅನುಮತಿ
* ಕಾಲೇಜ್ ಓಪನ್ ( ಉನ್ನತ ಶಿಕ್ಷಣವನ್ನು ಒಂದು ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡವರೆಗೆ ಮಾತ್ರ 26 ರಿಂದ ಪ್ರಾರಂಭ ಮಾಡಲು ಅವಕಾಶ)
* ಶೇ.50 ರ ಸೀಟ್ ಭರ್ತಿಯೊಂದಿಗೆ ಸಿನಿಮಾ ಮಂದಿರಗಳಿಗೆ ಅನುಮತಿ
* ನೈಟ್ ಕಫ್ರ್ಯೂ ಅವಧಿಯಲ್ಲಿ ಒಂದು ಗಂಟೆ ಕಡಿತ.
* ರಾತ್ರಿ 9ರ ಬದಲು 10 ಗಂಟೆಯಿಂದ ಬೆಳಗ್ಗೆ 5 ರವರೆಗೆ ನೈಟ್ ಕಫ್ರ್ಯೂ
* ಬಾರ್ ಗಳಲ್ಲಿ ಮಾತ್ರ ಮದ್ಯ ಸೇವನೆಗೆ ಇದ್ದ ಶೇ.50 ರ ಮಿತಿ ಇದ್ದು, 10 ತನಕ ಮದ್ಯ ಸೇವನೆಗೆ ಅವಕಾಶ
* ಮದುವೆಗೆ 100 ಜನರ ಮಿತಿ, ಅಂತ್ಯ ಸಂಸ್ಕಾರಕ್ಕೆ 20 ಜನರ ಮಿತಿ ಮುಂದುವರಿಕೆ
ಏನಿರಲ್ಲ?
* ಈಜುಕೊಳಗಳಿಗೆ ನೋ ಪರ್ಮಿಷನ್
* ಪಬ್‍ಗಳಲ್ಲಿ ಮದ್ಯ ಸೇವನೆ, ನೈಟ್ ಪಾರ್ಟಿಗಳಿಗೆ ಅವಕಾಶ ಇಲ್ಲ
* ಒಳಾಂಗಣ ಚಿತ್ರೀಕರಣ ಮತ್ತು ಕ್ರೀಡಾಂಗಣಗಳಿಗೂ ಅನುಮತಿ ಇಲ್ಲ
ಡಿಸಿಎಂ ಅಶ್ವತ್ಥ ನಾರಾಯಣ, ಸಿಎಸ್ ಪಿ.ರವಿಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆಗಮನ, ಆರೋಗ್ಯ, ಕಂದಾಯ ಇಲಾಖೆ ಅಧಿಕಾರಿಗಳು ಸಚಿವ ಅರವಿಂದ್ ಲಿಂಬಾವಳಿ ಸಭೆಯಲ್ಲಿ ಭಾಗಿಯಾಗಿದ್ದರು.