ಮಡಿಕೇರಿ: ಇಲ್ಲಿನ ವಿರಾಜಪೇಟೆಯಲ್ಲಿ ಸೋಂಕಿತನೊಬ್ಬ ಕೋವಿಡ್ ಆಸ್ಪತ್ರೆಯಿಂದ ಎಸ್ಕೇಪ್ ಆಗಿ ಅವಾಂತರ ಸೃಷ್ಟಿಸಿದ್ದಾನೆ.
ತಾನು ಗುಣಮುಖನಾಗಿದ್ರೂ ಆಸ್ಪತ್ರೆಯಿಂದ ಕಳಿಸ್ತಿಲ್ಲ ಅಂತ ಅರೆಕಾಡು ಮೂಲದ ವ್ಯಕ್ತಿ ವೈದ್ಯರ ಮೇಲೆ ಬೇಸರಗೊಂಡು ಆಸ್ಪತ್ರೆಯಿಂದ ಕಾಲ್ಕಿತ್ತಿದ್ದಾನೆ. ಸೋಂಕಿತ ತಪ್ಪಿಸಿಕೊಂಡಿದ್ದರ ಬಗ್ಗೆ ವೈದ್ಯರು ದೂರು ನೀಡಿದ್ರು.
ಇತ್ತ ಸೋಂಕಿತ ಆಸ್ಪತ್ರೆಯಿಂದ ಏಕಾಏಕಿ ಸಿದ್ದಾಪುರ ಪೊಲೀಸ್ ಠಾಣೆಗೆ ಹೋಗಿ ವೈದ್ಯರ ವಿರುದ್ಧ ದೂರು ನೀಡಿದ್ದಾನೆ. ತಕ್ಷಣವೇ ಎಚ್ಚೆತ್ತ ಪೊಲೀಸರು ವೈದ್ಯರಿಗೆ ಮಾಹಿತಿ ನೀಡಿದ್ರು. ಸ್ಥಳಕ್ಕೆ ಅಂಬುಲೆನ್ಸ್ ಬರ್ತಿದ್ದಂತೆ ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿ ಅಲ್ಲಿಂದಲೂ ಸೋಂಕಿತ ಪರಾರಿಯಾಗಿದ್ದಾನೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಇಂದು ಬಿಗ್ ಡೇ – ಅತ್ಯಾಚಾರ ಪ್ರಕರಣ CBIಗೆ ವರ್ಗಾವಣೆ ಆಗುತ್ತಾ..?
ಬಳಿಕ ಕೆಲ ಗಂಟೆಗಳ ನಂತರ ಸೋಂಕಿತ ಪರಿಚಿತರ ಬೈಕ್‍ನಲ್ಲಿ ಹೋಗ್ತಿದ್ದರ ಬಗ್ಗೆ ಮಾಹಿತಿ ತಿಳೀತಿದ್ದಂತೆ ಪೊಲೀಸರು ಆತನನ್ನು ತಡೆದು ಕೋವಿಡ್ ಕೇರ್ ಸೆಂಟರ್‍ಗೆ ಸೇರಿಸಿದ್ದಾರೆ.