ಮಜಾ ಮಾಡೋಕೆ ಗೋವಾ ಹೋಗಬೇಕೆಂದ ಪ್ರಿಯಾಂಕ

Public TV
1 Min Read

ಬಿಗ್‍ಬಾಸ್ ಮನೆ ಮಂದಿಯ ಕೈ ನೋಡಿ ಶಾಸ್ತ್ರವನ್ನು ಹೇಳಿದ್ದ ಚಕ್ರವರ್ತಿ ಚಂದ್ರಚೂಡ್ ಇದೀಗ ಪ್ರಿಯಾಂಕ ತಿಮ್ಮೇಶ್ ಅವರಿಗೆ ಜೀವನದಪಾಠವನ್ನು ಮಾಡಿ ಸುದ್ದಿಯಾಗಿದ್ದಾರೆ.

ನಿಮಗೆ ಜೀವನ ಅರ್ಥ ಆಗಬೇಕೆಂದ್ರೆ ಮೂರು ಪದದ ಅರ್ಥ ಆಗಬೇಕು, ಸಮಾಜದ ಕುರಿತಾಗಿ ನೀವು ತಿಳಿದುಕೊಳ್ಳಬೇಕು ಎಂದು ಚಕ್ರವರ್ತಿ ಚಂದ್ರಚೂಡ್ ಪ್ರಿಯಾಂಕಾ ತಿಮ್ಮೇಶ್ ಅವರಿಗೆ ಜೀವನದ ಪಾಠ ಮಾಡಿರುವ ವೀಡಿಯೋವನ್ನು ಖಾಸಗಿವಾಹಿನಿ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.

ಪ್ರಿಯಾಂಕ ಸುಮ್ಮನೇ ಒಬ್ಬರೇ ಕುಳಿತಿರುತ್ತಾರೆ. ಆಗ ಅಲ್ಲಿಗೆ ಬಂದ ಚಕ್ರವರ್ತಿ ಪ್ರಿಯಾಂಕಾಗೆ ಜೀವನದ ಪಾಠವನ್ನು ಮಾಡಿದ್ದಾರೆ. ಪ್ರಿಯಾಂಕ ಹೂಂ… ಹಾಕುತ್ತಾ ಸುಮ್ಮನೇ ಕೇಳಿಸಿಕೊಂಡಿದ್ದಾರೆ. ಚಕ್ರವರ್ತಿ ಮಾತ್ರ ಮೂರೇ ಪದಗಳಲ್ಲಿ ಜೀವನದ ಕುರಿತಾಗಿ ಅರ್ಥಗರ್ಭಿತವಾಗಿ ಹೇಳಿದ್ದಾರೆ.

ಜೀವನ ಅರ್ಥವಾಗಬೇಕಾದರೆ ನಿನಗೆ ಸಮಾಜದ ಕುರಿತಾಗಿ ತಿಳಿಯಬೇಕು. ಸ.. ಮಾ..ಜ ಎಂದು ಮೂರು ಪದಗಳಿವೆ. ಸಮಾನತೆ, ಸಂಸ್ಕøತಿ, ಸಂತಸ ತೆಗೆದುಬಿಟ್ರೆ ಬರೀ ಮಜಾ ಇರುತ್ತದೆ ಎಂದು ಹೇಳಿದ್ದಾರೆ. ಮಜಾದಲ್ಲಿ ಜೀವನವಿಲ್ಲ. ಈ ವೇಳೆ ಪ್ರಿಯಾಂಕ ಮಜಾ ಮಾಡಬೇಕು ಎಂದರೆ ಗೋವಾ ಹೋಗಬೇಕು ಎಂದಿದ್ದಾರೆ. ಈ ವೇಳೆ ಚಕ್ರವರ್ತಿ ನಾನು ಹೇಳುವುದು ಕೇಳು ಎಂದು ಹೇಳುತ್ತಾ ಮಾತು ಮುಂದುವರಿಸಿದ್ದಾರೆ.

ಮನಸ್ಸು, ಮಮತೆ, ಮಾತೃತ್ವ ತೆಗೆದರೆ ಸಜಾ ಆಗಿ ಬಿಡುತ್ತದೆ. ಜೀವನ ಶಿಕ್ಷೆಯಾಗಿ ಬಿಡುತ್ತದೆ. ಕೊನೆಯಲ್ಲಿ ಜಾ ಉಳಿಯಿತ್ತು, ಜಿಗುಪ್ಸೆ, ಜಂಜಾಟವನ್ನು ಮನಸ್ಸಿನಿಂದ ತೆಗೆದುಬಿಡಬೇಕು. ಆಗ ಜೀವನ ಸಮವಾಗಿರುತ್ತದೆ. ಜೀವನದಲ್ಲಿ ಯಾವ ಪದವನ್ನು ತೆಗೆಯುತ್ತಿಯಾ? ಯಾವುದುನ್ನು ಅಳವಡಿಸಿಕೊಳ್ಳುತ್ತೀಯಾ ಎನ್ನುವುದರ ಮೇಲೆ ಇರುತ್ತದೆ. ಈ ಕುರಿತಾಗಿ 10 ನಿಮಿಷ ಯೋಚನೆ ಮಾಡು ನಿನಗೆ ಜೀವನ ಗೊತ್ತಾಗುತ್ತದೆ ಎಂದು ಜೀವನದ ಪಾಠ ಮಾಡಿದ್ದಾರೆ. ಪ್ರಿಯಾಂಕ ಮಾತ್ರ ಕೇಳಿಯೂ ಕೇಳದ ಹಾಗೇ ಸುಮ್ಮನೆ ಕುಳಿತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *