ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೇಲಾ ತಮ್ಮ ಮುದ್ದು ಮಗನ ಕ್ಯೂಟ್ ಆಗಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಯಥರ್ವ್ ಅವರ ಅಪ್ಪನನ್ನು ರೇಗಿಸಿ ಸ್ಮೈಲ್ ಮಾಡುತ್ತಿದ್ದಾನೆ. ನನ್ನ ಮುಂದಿನ ಪೋಸ್ಟ್ ನಲ್ಲಿ ವೀಡಿಯೋ ಅಪ್‍ಲೋಡ್ ಮಾಡುತ್ತೇನೆ ಬರೆದುಕೊಂಡು ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಾಗೇ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿಯನ್ನು ಹುಟ್ಟಿಸಿದ್ದಾರೆ.
View this post on Instagram
ಯಥರ್ವನ ಈ ಮುದ್ದಾದ ಫೋಟೋವನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಮುಂದಿನ ವೀಡಿಯೋ ಏನು ಎಂದು ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದಾರೆ. ನಿಮ್ಮ ಮುದ್ದಾದ ಮಕ್ಕಳ ಜೊತೆಗೆ ಒಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬನ್ನಿ, ನಿಮ್ಮ ಮುಂದಿನ ಪೋಸ್ಟ್ ಗಾಗಿ ನಾವು ಕಾಯುತ್ತಾ ಇದ್ದೇವೆ. ನಿಮ್ಮ ಮಗನ ನಗು ತುಂಬ ಮುದ್ದಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
View this post on Instagram
ಕೆಲವು ದಿನಗಳ ಹಿಂದೆ ಮಗಳು ಐರಾ ಜೊತೆಗಿನ ಸೆಲ್ಫಿ ಫೋಟೋವನ್ನು ರಾಧಿಕಾ ಹಂಚಿಕೊಂಡಿದ್ದರು. ಫೋಟೋಗೆ ಹಾಯ್, ನಿಮೆಗಲ್ಲರಿಗೂ ಹೆಲೋ ಹೇಳಲು ಬಂದೆ ಅಂತ ಸಾಲುಗಳನ್ನು ಬರೆದುಕೊಂಡಿದ್ದಾರೆ. ಮಗಳು ಬಾಸ್ಕೆಟ್ ನಲ್ಲಿ ಕುಳಿತಿದ್ದ ಫೋಟೋ, ಮಗನಿಗೆ ಉಗುರು ಕಟ್ ಮಾಡುವ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.
ಎರಡು ಮಕ್ಕಳ ಲಾಲನೆ-ಪಾಲನೆಯಲ್ಲಿ ಬ್ಯುಸಿಯಾಗಿರುವ ರಾಧಿಕಾ ಪಂಡಿತ್ ಸಿನಿಮಾದಿಂದ ದೂರವಾಗಿದ್ದಾರೆ. ಆದರೆ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಫ್ಯಾನ್ಸ್‌ಗೆ ಹತ್ತಿರವಾಗಿದ್ದಾರೆ. ಸಮಯ ಸಿಕ್ಕಾಗಲ್ಲೇ ಮುದ್ದು ಮಕ್ಕಳ ಫೋಟೋ, ಅವರ ತುಂಟಾಟದ ವೀಡಿಯೋಗಳನ್ನು ಪೋಸ್ಟ್ ಮಾಡಿಕೊಳ್ಳುತ್ತಿರುತ್ತಾರೆ. ಅಭಿಮಾನಿಗಳು ಸಹ ಅಷ್ಟೇ ಅಭಿಮಾನದಿಂದ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ.