ಮಕ್ಕಳ ಸೈಕಲಿನಲ್ಲಿ ಸವಾರಿ ಹೊರಟ ಧವನ್, ಕುಲದೀಪ್

Public TV
1 Min Read

ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯನ್ನು ಭರ್ಜರಿಯಾಗಿ ಜಯಿಸಿದ ಭಾರತೀಯ ತಂಡ ಇದೀಗ ರಿಲ್ಯಾಕ್ಸ್ ಮೂಡ್‍ನಲ್ಲಿದೆ. ಟೀ ಇಂಡಿಯಾದ ನಾಲ್ವರು ಕ್ರಿಕೆಟರ್ಸ್ ಮಕ್ಕಳ ಆಟಿಕೆಯಲ್ಲಿ ಮಕ್ಕಳಂತೆ ಆಟವಾಡಿ ಗಮನಸೆಳೆದಿದ್ದಾರೆ.

ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಆರಂಭಿಕ ಆಟಗಾರ ಶಿಖರ್ ಧವನ್, ನಿಗದಿತ ಓವರ್‌ಗಳ ಸರಣಿಗಾಗಿ ಭಾರತ ತಂಡಕ್ಕೆ ಕೂಡಿಕೊಂಡಂತೆ, ವೀಡಿಯೋ ಒಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ರೋಹಿತ್ ಶರ್ಮಾ, ರಿಷಬ್ ಪಂತ್, ಕುಲದೀಪ್ ಯಾದವ್ ಮತ್ತು ಧವನ್ ಮಕ್ಕಳ ಆಟದ ವಲಯಕ್ಕೆ ಹೋಗಿ ಮಕ್ಕಳ ಆಟಿಕೆಯಲ್ಲಿ ಮಕ್ಕಳಂತೆ ಆಡಿ ಎಂಜಾಯ್ ಮಾಡಿದ್ದಾರೆ.

ಭಾರತ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ಸಣ್ಣ ಮಕ್ಕಳ ಸೈಕಲ್‍ನಲ್ಲಿ ಕೂತು ಸವಾರಿ ಹೊರಟರೆ, ಪಂತ್ ಹಾಗೂ ರೋಹಿತ್ ಆಟಿಕೆ ಬಾಲ್ ನಲ್ಲಿ ಪರಸ್ಪರ ಎಸೆದುಕೊಂಡು ಖುಷಿ ಪಟ್ಟಿದ್ದಾರೆ.

 

View this post on Instagram

 

A post shared by Shikhar Dhawan (@shikhardofficial)

ಈ ನಾಲ್ವರು ಕ್ರಿಕೆಟಿಗರು ಮಕ್ಕಳ ಆಟಿಕೆಯಲ್ಲಿ ಆಡುತ್ತಿರುವ ವೀಡಿಯೋವನ್ನು ಶಿಖರ್ ಧವನ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ನಮ್ಮ ಜೀವನದ ಬಾಲ್ಯದ ದಿನಗಳು ಎಂದೂ ಮತ್ತೆ ಬರಲಾರದು ಎಂದು ಬರೆದುಕೊಂಡಿದ್ದಾರೆ. ಧವನ್ ವೀಡಿಯೋ ಹಾಕುತ್ತಿದ್ದಂತೆ ಯಜುವೇಂದ್ರ ಚಹಲ್, ಸೂರ್ಯಕುಮಾರ್ ಯಾದವ್ ಸೇರಿ ಹಲವರು ಕಮೆಂಟ್ ಮಾಡಿದ್ದಾರೆ.

ಭಾರತ ನಿಗದಿತ ಓವರ್‌ಗಳ ಕ್ರಿಕೆಟ್ ಗಾಗಿ ಈಗಾಗಲೇ ತಂಡವನ್ನು ಪ್ರಕಟಿಸಿದ್ದು, ಧವನ್, ಚಹಲ್ ಮತ್ತು ಸೂರ್ಯಕುಮಾರ್ ಯಾದವ್ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯವು ಅಹಮದಾಬಾದ್‍ನಲ್ಲಿ ಮತ್ತು ಏಕದಿನ ಪಂದ್ಯಗಳು ಪುಣೆಯಲ್ಲಿ ನಡೆಯಲಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿ ಮುಗಿದ ತಕ್ಷಣ ಏಪ್ರಿಲ್ 9 ರಿಂದ ಐಪಿಎಲ್ ಪ್ರಾರಂಭವಾಗಲಿದ್ದು, ನಂತರ ಬಿಡುವಿಲ್ಲದ ಕ್ರಿಕೆಟ್‍ನಲ್ಲಿ ಭಾರತೀಯ ಆಟಗಾರರು ಬ್ಯುಸಿಯಾಗಲಿದ್ದರೆ ಹಾಗಾಗಿ ಇದೀಗ ಸಿಕ್ಕ ಬಿಡುವಿನಲ್ಲಿ ಮಕ್ಕಳಂತೆ ಆಟವಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *