ಮಂಡ್ಯದಲ್ಲಿ ಬೈಕ್, ಮನೆಗಳ್ಳತನ ಮಾಡ್ತಿದ್ದ ಗ್ಯಾಂಗ್ ಅಂದರ್

Public TV
1 Min Read

ಮಂಡ್ಯ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್‍ಗಳು ಹಾಗೂ ಮನೆ ಕಳ್ಳತನ ಮಾಡುತ್ತಿದ್ದ ನಾಲ್ವರು ಖದೀಮರವನ್ನು ಬಂಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳು ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಹಾಗೂ ಜಯಪುರ ಗ್ರಾಮದ ಯತೀನ್ (25), ವಿಜಯ್ ಕುಮಾರ್(30) , ಕಾರ್ತಿಕ್ (24) ಹಾಗೂ ಶಿವಕುಮಾರ್ (29) ಆಗಿದ್ದಾರೆ. ಬಂಧಿತರಿಂದ ಕಳ್ಳತನ ಮಾಡಿದ್ದ 18 ಹೀರೋ ಸ್ಪ್ಲೇಂಡರ್, 6 ಫ್ಯಾಷನ್ ಪ್ರೋ, 1 ಪಲ್ಸರ್ ಹಾಗೂ 1 ಪ್ಲಾಟಿನಂ ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇಲ್ಲದೇ ಆರೋಪಿಗಳು ಮನೆಗಳ್ಳತನದ ವೇಳೆ ಕದ್ದಿದ್ದ 18 ಗ್ರಾಂ ಚಿನ್ನದ ಚೈನ್, 2 ಉಂಗುರ, 1ಬ್ರಾಸ್‍ಲೈಟ್, 12 ಗ್ರಾಂ ಚಿನ್ನದ ಒಡವೆಗಳು ಸೇರಿದಂತೆ ಒಟ್ಟು 42 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಬಂಧಿತ ನಾಲ್ವರು ಆರೋಪಿಗಳನ್ನು ಡಿವೈಎಸ್‍ಪಿ ಧನಂಜಯ ನೇತೃತ್ವದ ತಂಡದ ಕಾರ್ಯಾಚರಣೆಯಲ್ಲಿ ಹಿಡಿಯಲಾಗಿದೆ. ಈ ತಂಡದಲ್ಲಿ ಸಿಪಿಐ ಕೆ.ಸಂತೋಷ್, ಪಶ್ಚಿಮ ಠಾಣೆ ಪಿಎಸ್‍ಐ ಶರತ್‍ಕುಮಾರ್, ಎಸ್.ಪ್ರಭಾ ಅವರು ಇದ್ದರು. ಕಾರ್ಯಾಚರಣೆ ಮಾಡಿದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *