ಭಾವನಾತ್ಮಕವಾಗಿ ಸೆಳೆದ ಟಾಲಿವುಡ್‍ನ ಲವ್‍ಸ್ಟೋರಿ ಟೀಸರ್

Public TV
3 Min Read

ಟಾಲಿವುಡ್‍ನ ಲವ್ ಸ್ಟೋರಿ ಸಿನಿಮಾದ ಟೀಸರ್ ಇಂದು ರೀಲಿಸ್ ಆಗಿದ್ದು ಉತ್ತಮ ರೆಸ್ಪಾನ್ಸ್ ದೊರೆಯುತ್ತಿದೆ. ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಇಬ್ಬರ ನಡುವಿನ ಸುಂದರ ಮತ್ತು ನವೀರಾದ ಪ್ರೀತಿಯ ಸುಂದರವಾದ ಪ್ರಯಾಣವನ್ನು ಟೀಸರ್‌ನಲ್ಲಿ ನೋಡಬಹುದಾಗಿದೆ.

ನಾಗ ಚೈತನ್ಯ ಲವ್ ಸ್ಟೋರಿ ಸಿನಿಮಾದ ಮೂಲಕವಾಗಿ ಲವರ್ ಬಾಯ್ ಆಗಿ ಮತ್ತೆ ತೆರೆ ಮೇಲೆ ಬರಲಿದ್ದಾರೆ. ಈ ಸಿನಿಮಾ ಭಾರೀ ಪ್ರಮಾಣದ ನಿರೀಕ್ಷೆಗಳ ಪಟ್ಟಿಯನ್ನು ಹೆಚ್ಚಿಸಿದೆ. ಈ ಪ್ರೇಮಕಥೆಯ ಟೀಸರ್ ಇಂದು ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ. ಟೀಸರ್ ಉತ್ತಮವಾಗಿ ಮೂಡಿಬಂದಿರುವ ಖುಷಿಯಲ್ಲಿ ಸಿನಿಮಾತಂಡವಿದೆ.

ಲವ್ ಸ್ಟೋರಿ ಸಿನಿಮಾ ಶೇಖರ್ ಕಮ್ಮುಲಾ ನಿರ್ದೇಶನದಲ್ಲಿ ಮೂಡಿಬರಲಿದೆ. ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಇಂದು ಬೆಳಗ್ಗೆ ಬಿಡುಗಡೆಯಾಗಿರುವ ಟೀಸರ್ ಈಗಾಗಲೇ ಎಲ್ಲರ ಹೃದಯವನ್ನು ಗೆದ್ದಿದೆ.

ಈ ಪ್ರೇಮ ಕಥೆ ಸುತ್ತಲೂ ನೋವು ಮತ್ತು ಭರವಸೆ ಇದೆ ಎಂದು ಬರೆದುಕೊಳ್ಳುವ ಮೂಲಕವಾಗಿ ಸಿನಿಮಾದ ನಿರ್ದೇಶಕರಾದ ಶೇಖರ್ ಕಮ್ಮುಲಾ ಟೀಸರ್ ನನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗೇ ನಾಗಚೈತನ್ಯ, ಸಾಯಿ ಪಲ್ಲವಿ ಕೂಡ ಲವ್‍ಸ್ಟೋರಿ ಸಿನಿಮಾದ ಟೀಸರ್ ಅನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಟೀಸರ್‍ನಲ್ಲಿ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ, ರೇವಂತ್ ಮತ್ತು ಮೌನಿಕಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಗ ತಾನೇ ಕಾಲೇಜು ಮುಗಿಸಿದ ರೇವಂತ್ ಕೆಲಸ ಹುಡುಕುತ್ತಿರುತ್ತಾನೆ. ಮೌನಿಕಾ ನೃತ್ಯದ ಬಗ್ಗೆ ಒಲವು ತೋರುತ್ತಿರುತ್ತಾಳೆ. ಸಾಯಿಪಲ್ಲವಿ ಎಂದಿನಂತೆ ಸಿಂಪಲ್ ಆಗಿ ಮುದ್ದು ಮುದ್ದಾಗಿ ಟೀಸರ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಗಚೈತನ್ಯ ತಮ್ಮ ಅಭಿನಯದ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಾರೆ. ಟೀಸರ್ ವೀಕ್ಷಣೆ ಮಾಡಿರುವ ಅಭಿಮಾನಿಗಳು ಭಾವನಾತ್ಮಕ ಕಮೆಂಟ್‍ಗಳನ್ನು ಮಾಡಿದ್ದಾರೆ. ಅಕ್ಷರಶಃ ನನ್ನ ಕಣ್ಣಲ್ಲಿ ನೀರು ಬಂತು. ಸಾಧ್ಯವಾದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡಿ ಸರ್. ಹೃದಯವನ್ನು ಸ್ಪರ್ಶಿಸುವ ಚಿತ್ರವೊಂದನ್ನು ಮಾಡಿದ ತಂಡಕ್ಕೆ ಧನ್ಯವಾದಗಳು ಎಂದೆಲ್ಲಾ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್‍ಗಳ ಸುರಿಮಳೆ ಗೈದಿದ್ದಾರೆ. ಟೀಸರ್ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.

ಲವ್ ಸ್ಟೋರಿ ಸಿನಿಮಾ ತಂಡ ಈ ಚಿತ್ರವು ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ ಎಂದು ಭರವಸೆ ನೀಡಿದ್ದಾರೆ. ಚಿತ್ರದ ಶೂಟಿಂಗ್ 2019ರ ಸೆಪ್ಟೆಂಬರ್‍ನಲ್ಲಿ ಪ್ರಾರಂಭವಾಯಿತ್ತು. ಆದರೆ 2020ರ ಸಾಂಕ್ರಾಮಿಕ ರೋಗದಿಂದಾಗಿ ಅದು ಸ್ಥಗಿತಗೊಂಡಿತ್ತು. ಚಲನಚಿತ್ರ ನಿರ್ಮಾಪಕರು ಅನ್ಲಾಕ್ ಸಮಯದಲ್ಲಿ ಮತ್ತೆ ಚಿತ್ರೀಕರಣವನ್ನು ಪ್ರಾರಂಭಿಸಿದರು. ಲವ್ ಸ್ಟೋರಿ ಸಿನಿಮಾಗೆ ಪವನ್ ಸಿಎಚ್ ಅವರ ಸಂಗೀತ ನಿರ್ದೆಶನವಿದೆ.

Share This Article
Leave a Comment

Leave a Reply

Your email address will not be published. Required fields are marked *