ಭತ್ತದ ಸಸಿಯಲ್ಲಿ ಮೂಡಿದ ಗಣೇಶ

Public TV
1 Min Read

ಕೊಪ್ಪಳ: ಈ ಬಾರಿ ಕೊರೊನಾ ನಡುವೆಯೂ ರಾಜಾದ್ಯಂತ ಗಣಪತಿ ಹಬ್ಬವನ್ನು ಜನರು ವಿಶಿಷ್ಟ ಹಾಗೂ ವಿಭಿನ್ನ ಶೈಲಿಯಲ್ಲಿ ಆಚರಿಸುತ್ತಿದ್ದಾರೆ. ಅದರಂತೆ ಕೊಪ್ಪಳದ ವಿದ್ಯಾಸಂಸ್ಥೆಯೊಂದು ಭತ್ತದ ಸಸಿಗಳಲ್ಲಿ ಗಣಪತಿ ಭಾವಚಿತ್ರವನ್ನು ಮೂಡಿಸಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾ ನಿಕೇತನ ಸಂಸ್ಥೆಯ ಆವರಣದಲ್ಲಿ ಇಂತದೊಂದ್ದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ ಸೈ ಎನಿಸಿಕೊಂಡಿದೆ. ಈಗಾಗಲೇ ಪಿಒಪಿ ಗಣಪನ್ನು ಸರ್ಕಾರ ನಿಷೇಧಿಸಿ ಆದೇಶ ಮಾಡಿದೆ. ಮೇಲಾಗಿ ಪಿಒಪಿ ಗಣಪ ಪರಿಸರ ದೃಷ್ಟಿಯಿಂದಲೂ ಮಾರಕ ಈ ಕಾರಣಕ್ಕಾಗಿಯೇ ಶಾಲೆಯ ಆಡಳಿತ ಮಂಡಳಿ ಒಂದು ಹೆಜ್ಜೆ ಮುಂದೆ ಹೋಗಿ ಆಲೋಚನೆ ಮಾಡಿದೆ.

ಕೊಪ್ಪಳದ ಗಂಗಾವತಿ ತಾಲೂಕು ಭತ್ತದ ಕಣಜ ಎಂದೇ ಹೆಸರುವಾಸಿಯಾಗಿದೆ. ಹೀಗಾಗಿ ನಾವ್ಯಾಕೆ ಆ ಭತ್ತದಿಂದಲೇ ಗಣಪನನ್ನು ಮಾಡಬಾರದು ಎಂದು ಭತ್ತದ ಸಸಿ ತಂದು ನಾಟಿ ಮಾಡಿದ್ದಾರೆ. ಅದು ಸರಿಯಾಗಿ ಗಣಪತಿ ಹಬ್ಬದ ದಿನದಂದೇ ಗಣೇಶನ ಆಕೃತಿ ಪಡೆದು ಎಲ್ಲರನ್ನೂ ಅಚ್ಚರಿಪಡಿಸಿದೆ. ಹಾಗೂ ವಿದ್ಯಾನಿಕೇತನ ಶಾಲಾ ಆಡಳಿತ ಮಂಡಳಿಯವರು ಇದನ್ನು ವಿಡಿಯೋ ಮಾಡಿ ತಮ್ಮ ವಾಟ್ಸಪ್ ಸ್ಟೇಟಸ್ ಇಟ್ಕೊಂಡು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.

ಒಟ್ಟಾರೆ ಭತ್ತದ ನಾಡಿನಲ್ಲಿ ಭತ್ತದ ಸಸಿಯಲ್ಲಿ ಗಣೇಶನನ್ನು ತಯಾರಿಸುವ ಮುಖಾಂತರ ವಿಭಿನ್ನ ಶೈಲಿಯಲ್ಲಿ ಹಬ್ಬವನ್ನು ಆಚರಸಿ ನಾಡಿನ ಜನತೆಗೆ ಶುಭಾಶಯ ಕೊರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *