ಲಂಡನ್: ಬ್ರಿಟನ್‍ನಲ್ಲಿ ರೂಪಾಂತರ ಹೊಂದಿದ ಹೊಸ ಕೊರೊನಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಸೋಂಕಿನ ಎರಡನೇ ಅಲೆಹಬ್ಬುವ ಆತಂಕ ಎದುರಾಗಿದೆ. ಬ್ರಿಟನ್‍ನಲ್ಲಿ ಕಂಡು ಬಂದ ಹೊಸ ವೈರಸ್ ಕುರಿತು ಕೆಲ ವಿಚಾರಗಳನ್ನು ಯುರೋಪ್ ತಜ್ಞರು ಹೊರಹಾಕ್ತಿದ್ದಾರೆ.
ಕೊರೊನಾ ವೈರಸ್ ಮಿಂಕ್ ಪ್ರಾಣಿಯನ್ನು ಸೋಕಿದ ಬಳಿಕ ಹೆಚ್ಚೆಚ್ಚು ರೂಪಾಂತರಗೊಂಡಿತು. ಈಗ ಬ್ರಿಟನ್‍ನಲ್ಲಿ ಕಂಡುಬಂದಿರುವ ರೂಪಾಂತರಿ ವೈರಸ್‍ನಲ್ಲಿ ಇದೇ ಲಕ್ಷಣಗಳಿವೆ. ಬ್ರಿಟನ್‍ನಲ್ಲಿ ಕಂಡುಬಂದಿರುವ ವೈರಸ್ ಹೆಚ್ಚು ಅಪಾಯಕಾರಿ ಅಲ್ಲ. ಹೊಸ ವೈರಸ್ ಬಗ್ಗೆ ಆರ್‌ಟಿಪಿಸಿಆರ್ ಟೆಸ್ಟ್ ಗೊತ್ತಾಗದೇ ಇರಬಹುದು.
ಸದ್ಯ ಸ್ಪೈಕ್ ಜೀನ್‍ಗಳ ಬದಲಾವಣೆಗೆ ಅನುಗುಣವಾಗಿ ಆರ್‌ಟಿಪಿಸಿಆರ್ ಟೆಸ್ಟ್ ನಡೆಯುತ್ತಿಲ್ಲ. ಆರ್‌ಟಿಪಿಸಿಆರ್ ಟೆಸ್ಟ್ ಸ್ಥಾನದಲ್ಲಿ ಎಲ್ಲಾ ರೀತಿಯ ಜೀನ್ ಕಿಟ್‍ಗಳನ್ನು ಅಳವಡಿಸಬೇಕು. ಹೊಸ ವೈರಸ್ ದಾಳಿಗೆ ತುತ್ತಾಗಿರುವವರ ಸರಾಸರಿ ವಯಸ್ಸು 47.
60 ವರ್ಷದ ಒಳಗಿನವರ ಮೇಲೆ ಈ ರೂಪಾಂತರಿ ವೈರಸ್ ಪ್ರಭಾವ ಹೆಚ್ಚು. ಶೇ.70ರಷ್ಟು ವೇಗವಾಗಿ ವ್ಯಾಪ್ತಿ ಆದರೆ ಮರಣಗಳ ಸಂಖ್ಯೆ ಕಡಿಮೆ. ಹೊಸ ವೈರಸ್ ಲಕ್ಷಣಗಳ ಹೋಲಿಕೆ ಇದ್ದ ವೈರಸ್‍ಗಳು ವಿವಿಧ ದೇಶಗಳಲ್ಲಿ ಬಲಹೀನಗೊಂಡಿವೆ.