ಬೋಟ್‍ನಲ್ಲಿ ಲವ್ ಪ್ರಪೋಸ್, ಯುವಕನಿಗೆ ಒದ್ದ ಪ್ರೇಯಸಿ- ವಿಡಿಯೋ

Public TV
1 Min Read

– ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ನವದೆಹಲಿ: ಹಲವರು ತಮ್ಮ ಪ್ರೇಯಸಿಗೆ ವಿಶೇಷವಾಗಿ ಲವ್ ಪ್ರಪೋಸ್ ಮಾಡಬೇಕೆಂಬ ಕನಸು ಕಂಡಿರುತ್ತಾರೆ. ಹಲವರು ಅದೇ ರೀತಿ ಪ್ರಪೋಸ್ ಮಾಡುತ್ತಾರೆ. ಹೀಗೆ ವಿಶೇಷವಾಗಿ ಪ್ರಪೋಸ್ ಮಾಡಲು ಹೋಗಿ ಇಲ್ಲೊಬ್ಬ ಪ್ರೇಯಸಿಯಿಂದ ಒದಿಸಿಕೊಂಡ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಥಿಯೋ ಶಾಂತೋನಾಸ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಟ್ವೀಟ್ ಮಾಡಲಾಗಿದ್ದು, ಇನ್ನೊಂದು ಬೋಟ್‍ನಲ್ಲಿ ಕುಳಿತಿದ್ದ ಗೆಳತಿಗೆ ಪ್ರಪೋಸ್ ಮಾಡಲು ವ್ಯಕ್ತಿ ಬೋಟ್ ನಲ್ಲಿ ತೆರಳಿದ್ದು, ತನ್ನದೇ ಸಪೋರ್ಟ್‍ನಿಂದ ಬೋಟ್ ಮೇಲೆ ನಿಂತು. ಗೆಳತಿ ಬಳಿ ತೆರಳಿದ್ದಾನೆ. ಇನ್ನೊಂದು ಬೋಟ್‍ನಲ್ಲಿ ಯುವತಿ ಸಹ ತನ್ನ ಬಾಯ್‍ಫ್ರೆಂಡ್ ಬಳಿಗೆ ಬೋಟ್ ತರಲು ಯತ್ನಿಸಿದ್ದಾಳೆ.

ಹೀಗೆ ಬೋಟ್ ನಿಧಾನವಾಗಿ ಚಲಿಸುತ್ತಿರುವಾಗ ತನ್ನ ಬಾಯ್ ಫ್ರೆಂಡ್‍ಗೆ ಕಿಸ್ ನೀಡಲು ಯುವತಿ ಪ್ರಯತ್ನಿಸಿದ್ದಾಳೆ. ಈ ವೇಳೆ ಅವಳ ಕಾಲು ಜಾರಿದ್ದು, ಬೋಟ್‍ನಲ್ಲೇ ಬಿದ್ದಿದ್ದಾಳೆ. ಆದರೆ ಯುವತಿ ಕಾಲು ಬಾಯ್‍ಫ್ರೆಂಡ್ ಎದೆಗೆ ತಾಗಿದ್ದು, ತಕ್ಷಣ ಬೋಟ್‍ನ ವೇಗ ಹೆಚ್ಚಳವಾಗಿದೆ. ಆಗ ಯುವತಿ ಗೆಳೆಯ ನೀರಿನಲ್ಲಿ ಬಿದ್ದಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

https://twitter.com/TheoShantonas/status/1310241716096643078

ಘಟನೆಯಲ್ಲಿ ಜೋಡಿಗೂ ಸಹ ಯಾವುದೇ ರೀತಿಯ ಗಾಯಗಳಾಗಿಲ್ಲ. ಸ್ವಲ್ಪ ಸಮಯದ ಬಳಿಕ ದಡ ಸೇರಿದ್ದಾರೆ. ದಡ ಸೇರುತ್ತಿದ್ದಂತೆ ಅಲ್ಲಿದ್ದವರು ಗಾಯಗಳಾಗಿರುವ ಕುರಿತು ಪ್ರಶ್ನಿಸಿದ್ದು, ಎಲ್ಲ ಸರಿಯಾಗಿದೆ. ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ಖುಷಿ ವಿಚಾರವೆಂದರೆ ನನ್ನ ಪ್ರಪೋಸಲ್‍ನ್ನು ಅವಳು ಒಪ್ಪಿಕಂಡಳು, ಎಸ್ ಅಂದಳು ಎಂದು ಯುವಕ ತಿಳಿಸಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದು, ಲಕ್ಷಾಂತರ ವ್ಯೂವ್ಸ್ ಪಡೆದಿದೆ. ನೆಟ್ಟಿಗರು ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಹಲವರು ಕಮೆಂಟ್ ಮಾಡಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *