ಬೇರೆಯವರ ಅಭಿಪ್ರಾಯವನ್ನು ಸ್ವೀಕರಿಸುವುದನ್ನು ಕಲಿರಿ – ಪ್ರಶಾಂತ್ ವಿರುದ್ಧ ಅರವಿಂದ್ ಕಿಡಿ

Public TV
2 Min Read

ಬಿಗ್‍ಬಾಸ್ ಮನೆಯಲ್ಲಿ ಈ ವಾರ ಅಡುಗೆ ಮನೆಯ ಜವಾಬ್ದಾರಿಯನ್ನು ಪುರುಷ ಸದಸ್ಯರು ಹೊತ್ತುಕೊಂಡಿದ್ದಾರೆ. ಸದ್ಯ ಚಪಾತಿ ವಿಚಾರವಾಗಿ ಅರವಿಂದ್ ಹಾಗೂ ಪ್ರಶಾಂತ್ ಸಂಬರಗಿಯವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಅರವಿಂದ್, ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್‍ರವರು ಕಿಚನ್‍ನಲ್ಲಿ ಅಡುಗೆ ತಯಾರಿ ನಡೆಸುತ್ತಿರುತ್ತಾರೆ. ಈ ವೇಳೆ ಪ್ರಶಾಂತ್ ಚಪಾತಿ ಹಿಟ್ಟನ್ನು ಕಲಿಸುತ್ತಿರುವುದನ್ನು ಅರವಿಂದ್ ನೋಡಿ ನಾನು ಆಗಲೇ ಕಲಸಬೇಡಿ ಎಂದು ಹೇಳಿದೆ. ನೀವು ನನ್ನ ಮಾತಾಗಲಿ, ಯಾರ ಮಾತು ಕೇಳುವುದಿಲ್ಲ ಎನ್ನುತ್ತಾರೆ. ಆಗ ಪ್ರಶಾಂತ್ ನಮ್ಮ ಮನೆಯಲ್ಲಿ ಒವರ್ ನೈಟ್ ಕಲಿಸಿ ಇಡುತ್ತೇವೆ ಏನು ಆಗುವುದಿಲ್ಲ. ನೋಡಿ ಕರೆಕ್ಟ್ ಆಗಿಯೇ ಇದೆಯಲ್ಲಾ ಎಂದು ಚಪಾತಿ ಹಿಟ್ಟನ್ನು ಮೇಲಕ್ಕೆತ್ತಿ ತೋರಿಸುತ್ತಾರೆ. ಇದಕ್ಕೆ ಅರವಿಂದ್ ಕರೆಕ್ಟ್ ಆಗಿದೆ. ಹಾಗದರೆ ನೀವೇ ಒತ್ತುತ್ತೀರಾ? ಒತ್ತುವಾಗ ಗೊತ್ತಾಗುತ್ತದೆ ಕಲ್ಲಿನ ರೀತಿ ಇದೆ ಅಂತ, ನೀವು ಸುಲಭವಾಗಿ ಹೇಳಿ ಬಿಡುತ್ತೀರಾ ಒತ್ತಿ ಎಂದು ಆದರೆ, ಒತ್ತುವುದು ನಾವು ಅದಕ್ಕೆ ನಾನು ನಿಮಗೆ ಹೇಳಿದ್ದು, ಆದರೆ ನೀವು ಒಂದು ಮಾತನ್ನು ಕೇಳುವುದಿಲ್ಲ. ಸ್ವಲ್ಪವಾದರೂ ಅಪರೂಪಕ್ಕೆ ಕೇಳಿ ಎಂದು ಹೇಳುತ್ತಾರೆ.

ನಂತರ ಪ್ರಶಾಂತ್ ಅದು ಚಪಾತಿ ಮಾಡುವ ವಿಧಾನ, ಹೊಸದಾಗಿ ನಾನೇನು ಮಾಡುತ್ತಿಲ್ಲ. ವೈಷ್ಣವಿಯವರು ಎಸಿ ಇದೆ ಕಲ್ಲಿನ ರೀತಿಯಾಗುತ್ತದೆ ಎಂದು ಹೇಳಿದಕ್ಕೆ ಒಳಗೆ ಇಟ್ಟಿದೆ. ಇಲ್ಲ ಬಿಸಾಕಿ ಬೇರೆ ಮಾಡೋಣಾ ಬಿಡಿ. ಏನು ಮಾಡುವುದಕ್ಕೆ ಆಗುತ್ತದೆ ಎನ್ನುತ್ತಾರೆ. ಇದನ್ನು ಕೇಳಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಶಾಕ್ ಆಗುತ್ತಾರೆ. ಬಳಿಕ ಬೀಸಾಕುವುದಾ ಸರ್.. ಏನು ಹೇಳುತ್ತಿದ್ದೀರಾ? ಹೇಳಿದರೆ ಕೋಪ ಮಾಡಿಕೊಳ್ಳುತ್ತೀರಾ ಒಂದು ಮಾತು ಕೇಳುವುದಿಲ್ಲ. ಬೇರೆಯವರ ಅಭಿಪ್ರಾಯವನ್ನು ಸ್ವೀಕರಿಸುವುದನ್ನು ಕಲಿರಿ ಎಂದು ಹೇಳುತ್ತಾರೆ.

ಆಯ್ತು ರಾಜಾ… ಒಂದಿಪ್ಪತ್ತು ಎರಡು ಬಾರಿ ಹೇಳಿದ್ಯಾ, ಕಲಸಿ ಇಟ್ಟರೆ ಮತ್ತಗೆ ಆಗುತ್ತದೆ ಎಂದು ಪದ್ಧತಿ ಹಾಗಾಗಿ ಕಲಿಸಿ ಇಟ್ಟೆ. ಮನೆಯಲ್ಲಿ ಚಪಾತಿ ಮಾಡುವುದು ನಾನೇ 40 ವರ್ಷದಲ್ಲಿ ಒಂದಿಪ್ಪತ್ತು ವರ್ಷ ಚಪಾತಿ ಮಾಡಿದ್ದೇನೆ. ಆ ಇಪ್ಪತ್ತು ವರ್ಷದಲ್ಲಿ 4 ಗಂಟೆ ಮುಂಚೆಯೇ ಚಪಾತಿ ಹಿಟ್ಟನ್ನು ಕಲಿಸಿ ಇಡುತ್ತಿದ್ದೆ. ಹಾಗೆ ಇಲ್ಲಿಯೂ ಮಾಡಲು ಹೋದೆ ಆದ್ರೆ ಆಗಲಿಲ್ಲ. ಬೇಡ ಅಂದರೆ ಬೀಸಾಕೋಣ, ಇಲ್ಲ ಬೇರೆ ಏನಾದರೂ ಮಾಡೋಣ ಎನ್ನುತ್ತಾರೆ.

ಈ ವೇಳೆ ಅರವಿಂದ್ ಇಲ್ಲ ಬಿಸಾಕಲು ಆಗುವುದಿಲ್ಲ ಎಂದರೆ, ಮನೆಯ ಕ್ಯಾಪ್ಟನ್ ದಿವ್ಯಾ ಉರುಡುಗ ಲಿಮಿಟೆಡ್ ದಿನಸಿ ಕಳುಹಿಸುತ್ತಾರೆ. ನಿಮಗೆ ಗೊತ್ತಿಲ್ಲದೇ ಆಗಿ ಪರವಾಗಿಲ್ಲ ಬಿಡಿ ಎಂದು ಹೇಳುತ್ತಾರೆ. ಇದಕ್ಕೆ ಪ್ರಶಾಂತ್‍ರವರು ಗೊತ್ತಿಲ್ಲದೇ ಅಲ್ಲ ಗೊತ್ತಿದೆ ಮಾಡಿದ್ದು, ಆದರೆ ಇಲ್ಲಿ ಹೀಗೆ ಆಗುತ್ತದೆ ಎಂದು ಗೊತ್ತಿರಲಿಲ್ಲ ಎಂದು ಮರು ವಾದ ಮಾಡುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *