ಬೇರೆಯವರಿಗೆ ಸ್ಫೂರ್ತಿಯಾಗ್ಬಾರ್ದು, ಹೆಸರು ಬಹಿರಂಗವಾಗಲಿ: ನೀತು ಶೆಟ್ಟಿ

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಘಮಲು ಇರುವುದು ಸತ್ಯ. ಆದರೆ ಅದು ಬೇರೆಯವರಿಗೆ ಸ್ಫೂರ್ತಿಯಾಗಬಾರದು. ಹೀಗಾಗಿ ಮಾಫಿಯಾದಲ್ಲಿ ಇರುವವರ ಹೆಸರುಗಳು ಬಹಿರಂಗವಾಗಲಿ ಎಂದು ನಟಿ ನೀತು ಶೇಟ್ಟಿ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಮ್ಮ ಚಿತ್ರರಂಗದವರ ಜೊತೆ ನಾನು ಪಾರ್ಟಿ ಮಾಡಲ್ಲ. ಮಾಡಬಾರದು ಅಂತ ಏನಿಲ್ಲ. ಆದರೆ ನನಗೆ ಅಷ್ಟೋಂದು ಗೆಳೆಯರು ಇಂಡಸ್ಟ್ರಿನಲ್ಲಿ ಇಲ್ಲ. ಡ್ರಗ್ಸ್ ಮಾಫಿಯಾದಲ್ಲಿದ್ದವರ ಹೆಸರು ಬಹಿರಂಗವಾಗಲಿ. ಯಾಕಂದರೆ ಇದು ಬೇರೆಯವರಿಗೆ ಸ್ಫೂರ್ತಿ ಆಗಬಾರದು ಎಂದರು.

ಇಂಡಸ್ಟ್ರಿನಲ್ಲಿ ಡ್ರಗ್ಸ್ ಮಾಫಿಯಾ ಇದೆ ಎಂಬುದು ಸ್ಫೋಟಕ ನ್ಯೂಸ್ ಆಗುವುದು ಸಹಜ. ಆದರೆ ಇಡೀ ಭಾರತದಲ್ಲಿ ಕೂಡ ಇಂತಹ ಒಂದು ಸಮಸ್ಯೆ ಇದೆ ಎಂಬುದನ್ನು ನಾವು ಸಿನಿಮಾಗಳಲ್ಲಿ ನೋಡಿದ್ದೇವೆ. ಹಾಗೆಯೇ ಪೊಲೀಸರು ಕೂಡ ಈ ಸಂಬಂಧ ಹುಡುಕಾಟಗಳನ್ನು ನಡೆಸುತ್ತಲೇ ಇದ್ದಾರೆ. ಈ ಮೂಲಕ ಇಂಡಸ್ಟ್ರಿನಲ್ಲಿ ಮಾತ್ರವಲ್ಲ ದೇಶದ ಒಳಗಡೆಯೇ ಇದೆ ಎಂಬುದನ್ನು ನಾವು ಮರೆಯಬಾರದು ಎಂದು ತಿಳಿಸಿದರು.

ಇದು ಒತ್ತಡ ನಿಯಂತ್ರಿಸಲು ಇದನ್ನು ಉಪಯೋಗಿಸುತ್ತಾರೆ. ಆದರೆ ಇದು ಕೂಲ್ ಅಲ್ಲ. ಕಾನೂನು ಬಾಹಿರವಾಗಿ ಇರುವಂತದ್ದನ್ನು ಮಾಡುವುದು ಸರಿಯಲ್ಲ. ಇನ್ನು ಕ್ರಿಯೇಟಿವ್ ಫೀಲ್ಡ್ ನಲ್ಲಿ ಇರುವವರು ಇದನ್ನು ಜಾಸ್ತಿ ಸೇವನೆ ಮಾಡುತ್ತಾರಂತೆ. ಯಾಕೆಂದರೆ ಅವರ ಕ್ರಿಯೇಟಿವ್ ಎಕ್ಸ್ ಪ್ರೆಶನ್ ಇನ್ನೂ ಚೆನ್ನಾಗಿ ಬರಬೇಕೆಂದು ಸೇವನೆ ಮಾಡುತ್ತಾರಂತೆ ಎಂಬುದನ್ನು ನಾನು ಕೇಳಿದ್ದೇನೆ. ಆದರೆ ಪ್ರತಿಭೆ, ಲಕ್, ಪರಿಶ್ರಮ ಇದ್ದರೆ ಮಾತ್ರ ಸ್ಟಾರ್ ಡಮ್ ಎಂದರು.

ಆಲ್ಕೋಹಾಲ್‍ಗೇ ಅಡಿಕ್ಟ್ ಆಗಿರಬಾರದು ಅಂತ ನಂಬಿರೋಳು ನಾನು. ಅಂತದ್ರಲ್ಲಿ ಡ್ರಗ್ಸ್ ಸೇವನೆ ಮಾಡುವವರನ್ನು ಶಿಕ್ಷೆ ಗುರಿಪಡಿಸಬೇಕು. ಇವೆಲ್ಲವನ್ನೂ ನಿಲ್ಲಿಸಬೇಕು. ಒಟ್ಟಿನಲ್ಲಿ ನಮ್ಮ ಚಿತ್ರರಂಗದ ಸ್ವಾಸ್ಥ್ಯ ಕೆಡಿಸುವಂತಹ ಕೆಲಸ ಆಗಬಾರದು ಎಂದು ಅವರು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *