ಬೇಡ ಬೇಡ ಅಂದ್ರೂ ತಿಂದು, ಮಂಜುಗೆ ಇಟ್ರು ಗುನ್ನ

Public TV
2 Min Read

ಬಿಗ್ ಬಾಸ್ ಮನೆಯಲ್ಲಿ ಮತ್ತೆ ಜೋಡಿಗಳ ಭಾವನಾತ್ಮಕತೆ ಕಂಡಿದ್ದು, ಬಿಗ್ ಬಾಸ್ ಮಂಜುಗೆ ನೀಡಿದ ಶಿಕ್ಷೆಯಿಂದಾಗಿ ದಿವ್ಯಾ ಸುರೇಶ್ ಬೇಸರಗೊಂಡು ಕಣ್ಣೀರಿಟ್ಟಿದ್ದಾರೆ. ಅಲ್ಲದೆ ಅವರನ್ನು ಸಮಾಧಾನ ಪಡಿಸಲು ಮಂಜು ಹರಸಾಹಸಪಟ್ಟಿದ್ದಾರೆ.

ಹೌದು ಆಟದ ಮುನ್ನ ಹಾಗೂ ಮುಗಿದ ನಂತರ ಬಿಗ್ ಬಾಸ್ ಮನೆಯ ಪ್ರಾಪರ್ಟಿಯನ್ನು ಅನವಶ್ಯಕವಾಗಿ ಯಾರೂ ಮುಟ್ಟುವಂತಿಲ್ಲ ಎಂಬುದು ನಿಯಮ. ಆದರೆ ‘ಬಿಸ್ಕೆಟ್ ಬಂದು ಬಾಯಿಗ್ ಬಿತ್ತು’ ಟಾಸ್ಕ್ ವೇಳೆ ದಿವ್ಯಾ ಸುರೇಶ್ ಹಾಗೂ ನಿಧಿ ಸುಬ್ಬಯ್ಯ ಸ್ವಲ್ಪ ಬಿಸ್ಕೆಟ್ ಸೇವಸಿ ಎಡವಟ್ಟು ಮಾಡಿದ್ದು, ಇದಕ್ಕಾಗಿ ಬಿಗ್ ಬಾಸ್ ಪಾಯಿಂಟ್ಸ್ ಕಡಿತಗೊಳಿಸುವ ಶಿಕ್ಷೆ ನೀಡಿದ್ದಾರೆ. ಆಟದ ಉಸ್ತುವಾರಿ ಹೊತ್ತಿದ್ದ ಲ್ಯಾಗ್ ಮಂಜು, ಶಮಂತ್ ಹಾಗೂ ಕ್ಯಾಪ್ಟನ್ ಆಗಿರುವ ಚಕ್ರವರ್ತಿ ಅವರು ಈ ಬಗ್ಗೆ ಗಮನಹರಿಸಬೇಕಿತ್ತು ಎಂದು ಹೇಳಿ ಒಟ್ಟು ಐವರ ತಲಾ 100 ಪಾಯಿಂಟ್ಸ್ ಕಡಿತಗೊಳಿಸಿದ್ದಾರೆ.

ಇದಕ್ಕೂ ಮುನ್ನ ಶಮಂತ್ ಸಹ ದಿವ್ಯಾ ಸುರೇಶ್‍ಗೆ ತಿನ್ನದಂತೆ ಸೂಚಿಸಿದ್ದರು, ಆದರೂ ದಿವ್ಯಾ ಮತ್ತೊಂದು ಬಟ್ಟಲಿನಲ್ಲಿ ತಿಂದಿದ್ದರು. ಮಂಜು ಸಹ ತುಂಬಾ ಸಲ ಬಿಸ್ಕೆಟ್ ತಿನ್ನದಂತೆ ಮನವಿ ಮಾಡಿದ್ದರು. ಯಾವುದೂ ಮುಟ್ಟಂಗೇ ಇಲ್ಲ, ಹೀಗಿರುವಾಗ ಹೇಗೆ ತಿನ್ನುತ್ತೀರಿ ಎನ್ನುತ್ತಾರೆ. ಮುಟ್ಟಂಗೇ ಇಲ್ಲಾ ಎಂದು ಬಿಗ್ ಬಾಸ್ ಹೇಳಿದ್ದಾರಾ ತೋರಿಸು ಎಂದು ದಿವ್ಯಾ ವಾದಿಸುತ್ತಾರೆ. ಬಳಿಕ ಸ್ವಲ್ಪ ಬಿಸ್ಕೆಟ್ ತಿಂದು ಎಡವಟ್ಟು ಮಾಡಿದ್ದಾರೆ.

ಬಿಗ್ ಬಾಸ್ ನೀಡಿದ ಶಿಕ್ಷೆಗೆ ಸ್ಪರ್ಧಿಗಳು ಶಾಕ್ ಗಿದ್ದು, ನಾನು ರೀಸಸ್ ಹೋಗಿದ್ದೆ ಗುರು ಅಷ್ಟರಲ್ಲಿ ಇವರು ಸ್ವಲ್ಪ ಬಿಸ್ಕೆಟ್ ತಿಂದಿದ್ದಾರೆ ಎಂದು ಮಂಜು ಬೇಸರ ಹೊರ ಹಾಕಿದ್ದಾರೆ. ಆಗ ನಾನು ಸ್ವಲ್ಪನೇ ತಿಂದಿದ್ದು, ಅದೂ ಕೆಳಗೆ ಬಿದ್ದಿತ್ತು ಎಂದು ದಿವ್ಯಾ ಹಾಗೂ ನಿಧಿ ಹೇಳಿದ್ದಾರೆ. ನಿಧಿ ಒಂದು ಬಿಸ್ಕೆಟ್ 100 ರೂ. ಎಂದು ಶಮಂತ್ ಹೇಳುತ್ತಾರೆ. ಒಂದು ಬಿಸ್ಕೆಟ್ 100 ರೂ. ಅಲ್ಲ ಒಂದು ಚೂರು ಬಿಸ್ಕೆಟ್ 500 ರೂ. ಎಂದು ಮಂಜು ಪ್ರತಿಕ್ರಿಯಿಸಿದ್ದಾರೆ.

ಇದರಿಂದ ದಿವ್ಯಾ ಸುರೇಶ್ ಸಿಕ್ಕಾಪಟ್ಟೆ ಬೇಜಾರಿದ್ದು, ಒಬ್ಬರೇ ಕುಳಿತಿರುತ್ತಾರೆ, ಮಂಜು ಆಗಮಿಸುತ್ತಿದ್ದಂತೆ ಸಾರಿ ಮಂಜಾ, ಏನಕ್ಕೆ ಕೋಪ ಮಾಡಿಕೊಂಡಿದ್ದೀಯಾ ಎಂದು ಪ್ರಶ್ನಿಸುತ್ತಾರೆ. ಆಗ ಮಂಜು ಬೇಜಾರಾಯಿತು, ಈಗ ಲೆಕ್ಕಕ್ಕೆ ಬರಲ್ಲ, ಕೊನೆಗೆ ಲೆಕ್ಕಕ್ಕೆ ಬರುತ್ತಲ್ಲಾ ಎಂದರು. ನಂಗು ಬೇಜಾರಾಯಿತು, ನನ್ನ ಪಾಯಿಂಟ್ಸ್ ಸಹ ಕಡಿಮೆ ಇದೆಯಲ್ಲ ಎಂದಿದ್ದಾರೆ. ಇದಕ್ಕೆ ಮಂಜು ಆ ಕ್ಷಣಕ್ಕೆ ಹಾಗೆ ಆಯ್ತು ಏನು ಮಾಡಲು ಆಗಲ್ಲ ಎಂದು ಸಮಾಧಾನ ಪಡಿಸಿದ್ದಾರೆ.

ಆದರೂ ಬೇಸರದಿಂದ ದಿವ್ಯಾ ಸುರೇಶ್ ಕಣ್ಣೀರು ಹಾಕಿದ್ದಾರೆ. ಬೇಜಾರುತ್ತಿದೆ ನಂಗೆ ಎಂದು ಸಡನ್ನಾಗಿ ಕೋಪಗೊಂಡು, ನಿಮ್ದು ಎಲ್ಲ ತಗೋಂಡಿದ್ದಾರಲ್ಲಾ ಬಿಗ್ ಬಾಸ್, ನಮ್ಮದು ಮಾತ್ರ ತೆಗೆದುಕೊಳ್ಳಬಹುದಾಗಿತ್ತು. ನೀವು ಅವರದ್ದೆಲ್ಲ ಪಾಯಿಂಟ್ಸ್ ಯಾಕೆ ತಗೋಂಡ್ರಿ ಬಿಗ್ ಬಾಸ್ ನಮ್ಮ ಪಾಯಿಂಟ್ಸ್ ಮಾತ್ರ ಕಟ್ ಮಾಡಿ ಎಂದು ಬೇಸರದಿಂದ ಹೇಳಿ ಗಳಗಳನೆ ಅತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *