ಮದುವೆಯ ಬಗ್ಗೆ ವಿಜಯ್‌ ದೇವರಕೊಂಡ ಮಾತು

Public TV
2 Min Read

ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟರಲ್ಲಿ ದಿ ಮೋಸ್ಟ್ ಹ್ಯಾಂಡ್‍ಸಮ್ ನಟ ವಿಜಯ್ ದೇವರಕೊಂಡ ಕೂಡ ಒಬ್ಬರು. ಇದೀಗ ವಿಜಯ್ ದೇವರಕೊಂಡ ತಮ್ಮ ಮುಂದಿನ ಲೈಗರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಈ ಸಿನಿಮಾದಲ್ಲಿ ವಿಜಯ್‍ಗೆ ನಾಯಕಿಯಾಗಿ ಅನನ್ಯ ಪಾಂಡೆ ಅಭಿನಯಿಸುತ್ತಿದ್ದಾರೆ. ಸದ್ಯ ಬ್ಯಾಚುಲರ್ ಲಿಸ್ಟ್ ನಲ್ಲಿರುವ ವಿಜಯ್ ದೇವರಕೊಂಡಗೆ ಶೀಘ್ರವೇ ಮದುವೆಯಾಗುವಂತೆ ಅವರ ತಾಯಿ ತಿಳಿಸಿದ್ದಾರೆ ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಅವರು, ತಮ್ಮ ತಾಯಿ ದೇವರಕೊಂಡ ಮಾಧವಿಯವರು ಮದುವೆ ವಿಚಾರ ಬಂದಾಗ ಶಾಂತವಾಗಿ ಬಿಡುತ್ತಾರೆ. ಕಾರಣ ನನ್ನ ಪೋಷಕರಿಗೆ ನನಗಿರುವ ಜವಾಬ್ದಾರಿ ಬಗ್ಗೆ ತಿಳಿದಿದೆ ಹಾಗೂ ನಾನು ಏನು ಮಾಡುತ್ತಿದ್ದೇನೆ ಎಂಬುವುದು ಕೂಡ ಅರಿತಿದ್ದಾರೆ. ಹಾಗಾಗಿ ತಮ್ಮ ವಿಚಾರವಾಗಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರ ನೀಡಿದ್ದಾರೆ ಎಂದು ಹೇಳಿದರು.

ತಾಯಿ ಕುರಿತಂತೆ ಮಾತನಾಡಲು ಆರಂಭಿಸಿದ ವಿಜಯ್ ದೇವರಕೊಂಡ, ನಾನು ನನ್ನ ತಾಯಿ ಜೊತೆ ಚಿತ್ರ ಮಂದಿರದಲ್ಲಿ ರಜನಿಕಾಂತ್ ಹಾಗೂ ಚಿರಂಜೀವಿ ಅಭಿನಯದ ಸಿನಿಮಾ ನೋಡಿದ್ದೇನೆ. ಅಲ್ಲದೇ ನಾನು ಹೆಚ್ಚಾಗಿ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ತಾಯಿ ಹಾಗೂ ಇಡೀ ಕುಟುಂಬದೊಂದಿಗೆ ಹೋಗುತ್ತಿದ್ದೆ. ಅಡುಗೆ ವಿಚಾರಕ್ಕೆ ಬಂದರೆ ಅಮ್ಮ ಮಾಡುವ ದಾಲ್ ಮತ್ತು ರೋಟಿ ಎಂದರೆ ನನಗೆ ಬಹಳ ಇಷ್ಟ ಎಂದರು.

ತಾಯಿಗೆ ನೀಡಿದ ಮೊದಲ ಗಿಫ್ಟ್ ಯಾವುದು ಎಂದು ಕೇಳಿದ ಪ್ರಶ್ನೆಗೆ, ನಾನು ಮೂರನೇ ತರಗತಿಯಲ್ಲಿದ್ದಾಗ ಅಪ್ಪ-ಅಮ್ಮ ಹೊರಗೆ ಹೋಗಿದ್ದರು. ಆಗ ನಾನು ನನ್ನ ಸಹೋದರನೊಂದಿಗೆ ಸೇರಿ ಮನೆಯನ್ನು ಸ್ಚಚ್ಛಗೊಳಿಸಿ ಗ್ರೀಟಿಂಗ್ ಕಾರ್ಡ್ ಒಂದರಲ್ಲಿ ಅವರ ಭಾವಚಿತ್ರವನ್ನು ಅಂಟಿಸಿ ಐ ಲವ್ ಯು ಎಂದು ಬರೆದು ಕೊಟ್ಟಿದ್ದೆ. ಅದನ್ನು ನೋಡಿ ನನ್ನ ತಾಯಿ ಸಂತೋಷದಿಂದ ಕಣ್ಣೀರಿಟ್ಟಿದ್ದರು ಎಂದು ಹೇಳಿದರು. ಹೀಗೆ ವಿಜಯ್ ದೇವರಕೊಂಡ ತಮ್ಮ ಬಾಲ್ಯದ ಹಳೆಯ ಸವಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಸದ್ಯ ವಿಜಯ್ ದೇವರಕೊಂಡ ಲೈಗರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಈ ಚಿತ್ರಕ್ಕೆ ನಿರ್ದೇಶಕ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅಲ್ಲದೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಮ್ಯಾಕೃಷ್ಣ, ಮಕರಂದ್ ದೇಶಪಾಂಡೆ ಮತ್ತು ರೋನಿತ್ ರಾಯ್ ಮಿಂಚಿದ್ದಾರೆ. ಈ ಸಿನಿಮಾ 2021ರ ಸೆಪ್ಟೆಂಬರ್ 9 ರಂದು ತೆರೆ ಮೇಲೆ ಬರಲಿದೆ.

Share This Article
Leave a Comment

Leave a Reply

Your email address will not be published. Required fields are marked *