ಬೆಡ್‍ನಲ್ಲೇ ಮಲ, ಮೂತ್ರ ವಿಸರ್ಜನೆ – ಆರೋಗ್ಯದ ಬಗ್ಗೆ ನಟಿ ಯಶಿಕಾ ಆನಂದ್ ಅಪ್ಡೇಟ್

Public TV
2 Min Read

ಚೆನ್ನೈ: ಇತ್ತೀಚೆಗಷ್ಟೇ ಕಾರು ಅಪಘಾತಕ್ಕೀಡಾಗಿ ಗೆಳತಿಯನ್ನು ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿರುವ ತಮಿಳು ನಟಿ ಯಶಿಕಾ ಆನಂದ್ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ.

ತಮ್ಮ ಆರೋಗ್ಯದ ಬಗ್ಗೆ ಇನ್ ಸ್ಟಾ ಖಾತೆಯಲ್ಲಿ ಪತ್ರ ಪೋಸ್ಟ್ ಮಾಡಿರುವ ನಟಿ, ನನಗೆ ಎದ್ದು ನಡೆಯಲು ಸಾಧ್ಯವಾಗುತ್ತಿಲ್ಲ. ಇನ್ನೂ ಸುಮಾರು 5 ತಿಂಗಳ ಕಾಲ ವಿಶ್ರಾಂತಿ ಪಡೆದುಕೊಳ್ಳುವ ಅನಿವಾರ್ಯತೆ ಇದೆ. ಮಲಗಿದ್ದಲ್ಲೇ ಮಲ-ಮೂತ್ರ ವಿರ್ಜನೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ ಸ್ಟಾ ಖಾತೆಯಲ್ಲಿ ಏನಿದೆ..?
ನನ್ನ ಪೆಲ್ವಿಕ್ ಮೂಳೆಯಲ್ಲಿ ಅನೇಕ ಮುರಿತಗಳಾಗಿವೆ. ಹಾಗೆಯೇ ಬಲಗಾಲಿಗೂ ಗಂಭೀರ ಗಾಯಗಳಾಗಿವೆ. ಮುಂದಿನ 5 ತಿಂಗಳ ಕಾಲ ಎದ್ದೇಳಲು ಹಾಗೂ ನಡೆದಾಡಲು ಸಾಧ್ಯವಿಲ್ಲ. ಸದ್ಯ ಮಲಗಿದ್ದಲ್ಲೇ ಇದ್ದು, ಅಲ್ಲಿಯೇ ಮಲ-ಮೂತ್ರ ವಿಸರ್ಜನೆಯಾಗುತ್ತಿದೆ. ಬಲ, ಎಡ ಹೀಗೆ ಯಾವುದೇ ಭಾಗಕ್ಕೂ ತಿರುಗಲೂ ಆಗುತ್ತಿಲ್ಲ. ಹೀಗೆ ಹಲವು ದಿನಗಳಿಂದ ಒಂದೇ ರಿಯಾಗಿ ಮಲಗುತ್ತಿದ್ದೇನೆ. ಬೆನ್ನಿನ ಭಾಗಕ್ಕೂ ಗಂಭೀರ ಗಾಯಗಳಾಗಿವೆ. ನನ್ನ ಮುಖದ ಭಾಗಕ್ಕೆ ಯಾವುದೇ ರೀತಿಯ ಗಾಯಗಳಾಗದಿರುವುದೇ ನನ್ನ ಅದೃಷ್ಟ. ಆದರೆ ಇದು ನನಗೆ ಪುನರ್ಜನ್ಮವಾಗಿದೆ. ಇದನ್ನೂ ಓದಿ: ನಮ್ಮಲ್ಲಿ ಪರ, ವಿರೋಧಿ ಬಣಗಳಿಲ್ಲ, ಸಂಪುಟ ರಚನೆ ವೇಳೆ ಅಸಮಾಧಾನ ಸಹಜ- ನಳಿನ್

ಘಟನೆಯ ಬಳಿಕ ಮಾನಸಿಕ ಹಾಗೂ ದೈಹಿಕವಾಗಿ ಗಾಯಗೊಂಡಿದ್ದೇನೆ. ದೇವರು ನನಗೆ ಶಿಕ್ಷೆ ನೀಡಿದ್ದಾನೆ. ಆದರೆ ಘಟನೆಯಲ್ಲಿ ನಾನು ಕಳೆದುಕೊಂಡಿರುವ ನೋವಿಗಿಂತ ಇದೇನೂ ದೊಡ್ಡದಲ್ಲ ಎಂದು ಯಶಿಕಾ ಬರೆದುಕೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿರುವ ಐಶಿಕಾ ಅವರಿಗೆ ಸರ್ಜರಿ ಯಶಸ್ವಿಯಾಗಿದ್ದು, ಆಗಸ್ಟ್ 3 ರಂದು ಐಸಿಯುವಿನಿಂದ ಜನರಲ್ ವಾರ್ಡ್‍ಗೆ ಸ್ಥಳಾಂತರ ಮಾಡಲಾಗಿದೆ. ಇದನ್ನೂ ಓದಿ: ದೇವರು, ರೈತರ ಹೆಸರಿನಲ್ಲಿ ಸಚಿವರ ಪ್ರಮಾಣವಚನ – ಗಮನ ಸೆಳೆದ ಅಂಶಗಳು

ಜುಲೈ 24ರ ನಸುಕಿನ ಜಾವ ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಐಶಿಕಾ ಗಂಭೀರವಾಗಿ ಗಾಯಗೊಂಡರೆ ಅವರ ಆಪ್ತ ಸ್ನೇಹಿತೆ ವೆಲ್ಲಿಚೆಟ್ಟಿ ಭವಾನಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಕಾರಿನಲ್ಲಿದ್ದ ಇನ್ನಿಬ್ಬರು ಸ್ನೇಹಿತರು ಸಣ್ಣಪುಟ್ಟ ಗಾಯಗೊಂಡು ಬಚಾವ್ ಆಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *