ಬೆಂಗಳೂರು ಸೇರಿ 8 ಜಿಲ್ಲೆಗಳಲ್ಲಿ ಟಫ್ ರೂಲ್ಸ್ – ಹೊಸ ಮಾರ್ಗಸೂಚಿ ಪ್ರಕಟ

Public TV
1 Min Read

– ಏ.20ರ ವರೆಗೆ ನಿಯಮ ಅನ್ವಯ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಹೊಸ ಮಾರ್ಗಸೂಚಿ ಪ್ರಕಟ ಮಾಡಿದೆ.

ಎಂಟು ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಿಗಿ ನಿಯಮಗಳ ಜಾರಿಗೊಳಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಹಾಲಿ ನಿಯಮಗಳ ಬಿಗಿ ಪಾಲನೆ ಕೈಗೊಳ್ಳಲಾಗುತ್ತಿದೆ. ಬೆಂಗಳೂರು ಸೇರಿ 8 ಜಿಲ್ಲೆಗಳಲ್ಲಿ ಮಾತ್ರ ಟಫ್ ರೂಲ್ಸ್ ಜಾರಿಗೆ ತಂದಿದೆ. ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಬೆಂಗಳೂರು, ಕಲಬುರಗಿ, ಉಡುಪಿ, ಧಾರವಾಡ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಹೊಸ ಮಾರ್ಗ ಸೂಚಿ ಪ್ರಕಟ ಮಾಡಿದೆ.

6-9 ತರಗತಿಗಳ ಭೌತಿಕ ತರಗತಿ ಸ್ಥಗಿತ, ವಿದ್ಯಾಗಮವೂ ತಾತ್ಕಾಲಿಕ ಸ್ಥಗಿತ. ರಾಜ್ಯಾದ್ಯಂತ 6-9 ಶಾಲೆಗಳು ಕ್ಲೋಸ್. ವಿದ್ಯಾಗಮ, ತರಗತಿಗಳು ಕ್ಲೋಸ್. 10,11,12 ಎಂದಿನಂತೆ ಇರುತ್ತೆ. ಉನ್ನತ ಶಿಕ್ಷಣ ಕೋರ್ಸುಗಳು, ವೃತ್ತಿಪರ ಕೋರ್ಸುಗಳ ತರಗತಿಗಳೂ ಸ್ಥಗಿತ. ವೈದ್ಯಕೀಯ ಕೋರ್ಸುಗಳ ಪರೀಕ್ಷೆ ಅಬಾಧಿತ. ಬೋರ್ಡಿಂಗ್, ವಸತಿ ಶಾಲೆಗಳೂ ಬಂದ್. ವಸತಿ ಶಾಲೆಗಳು, ಹಾಸ್ಟಲ್ ಮತ್ತು ಬೋರ್ಡಿಂಗ್ ಸ್ಕೂಲ್ ಕ್ಲೋಸ್.

ದೇವರ ಉತ್ಸವ, ಅಪಾರ್ಟ್ ಮೆಂಟ್ ಗಳಲ್ಲಿ ಜಿಮ್, ಸ್ವಿಮ್ಮಿಂಗ್ ಪೂಲ್, ಪಾರ್ಟಿ, ಕ್ಲಬ್ ಹೌಸ್, ಸ್ವಿಮ್ಮಿಂಗ್ ಪೂಲ್, ಜಿಮ್ ಕ್ಲೋಸ್. ಪ್ರತಿಭಟನೆ, ರ‍್ಯಾಲಿ, ಧರಣಿಗಳೂ ಬಂದ್. ಬಸ್‍ಗಳಲ್ಲಿ ಸೀಟುಗಳಿರುವಷ್ಟೇ ಪ್ರಯಾಣಿಕರಿಗೆ ಅವಕಾಶವಿದ್ದು, ನಿಂತು ಪ್ರಯಾಣಿಸುವಂತಿಲ್ಲ. ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಜನರಿಗೆ ಮಾತ್ರ ಚಿತ್ರ ವೀಕ್ಷಣೆಗೆ ಅವಕಾಶ. ವರ್ಕ್ ಫ್ರಂ ಹೋಮ್ ಪದ್ಧತಿಗೆ ಆದ್ಯತೆ. ಪಬ್, ಬಾರ್, ರೆಸ್ಟೋರೆಂಟ್ ಗಳಲ್ಲೂ ಶೇ. 50 ರಷ್ಟು ಮಾತ್ರ ಗ್ರಾಹಕರಿಗೆ ಅವಕಾಶ ನೀಡಲಾಗಿದೆ.

ಪ್ರಾರ್ಥನಾ ಮಂದಿರಗಳಿಗೂ ಭಕ್ತರ ಮಿತಿ ಹೇರಲಾಗಿದೆ. ಪ್ರಾರ್ಥನಾ ಮಂದಿರಗಳಿಗೆ ಗುಂಪು ಗುಂಪು ಹೋಗುವುದಕ್ಕೆ ನಿರ್ಬಂಧವಿದ್ದು, ವೈಯಕ್ತಿಕ ಪ್ರಾರ್ಥನೆಗೆ ಮಾತ್ರ ಅವಕಾಶ. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿದ್ದು, ಮದುವೆ, ಶುಭ ಸಮಾರಂಭ, ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಹಾಲಿ ನಿಯಮಗಳೇ ಮುಂದುವರಿಕೆಯಾಗಲಿದೆ. ಈ ನಿಯಮಗಳು ಏಪ್ರಿಲ್ 20ರ ವರೆಗೆ ಅನ್ವಯವಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *